ನಾಳೆ ಒಳ ಮೀಸಲಾತಿ ಅನ್ಯಾಯ ಖಂಡಿಸಿ ಪ್ರತಿಭಟನೆ

Contributed byshankardp123@gmail.com|Vijaya Karnataka

A large protest is planned for March 4th in Yelandur taluk. The Balagai Seva Samudaya Okkuta and Dr. B.R. Ambedkar Seva Samiti will demonstrate against perceived injustice from internal reservation policies. They demand the reinstatement of previous reservation levels and the allocation of 56,000 government positions to the Balagai community.

balagai community protests against internal reservation injustice tomorrow

ವಿಕ ಸುದ್ದಿಲೋಕ ಯಳಂದೂರು

ತಾಲೂಕಿನ ಬಲಗೈ ಸೇವಾ ಸಮುದಾಯಗಳ ಒಕ್ಕೂಟ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಮಾ.4 ರಂದು ಬೆಳಗ್ಗೆ 10ಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ಸೇವಾ ಸಮಿತಿ ಪ್ರಾಧಾನ ಕಾರ್ಯದರ್ಶಿ ಯರಿಯೂರು ನಟರಾಜು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿಮಾತನಾಡಿ,‘‘ಸರಕಾರ ಒಳ ಮೀಸಲಾತಿ ನೀಡಿರುವುದು ನಮಗೆ ಅನ್ಯಾಯವಾಗಿದೆ. ಹಿಂದೆ ಇದ್ದ ಮೀಸಲಾತಿಯನ್ನೇ ಜಾರಿ ಮಾಡಿ ಬಲಗೈ, ಎಡಗೈ ಎಂದೇ ಘೋಷಣೆ ಮಾಡಬೇಕು. ಬಲಗೈ ಸಮುದಾಯದವರಿಗೆ 56 ಸಾವಿರ ಸರಕಾರಿ ಹುದ್ದೆಗಳನ್ನು ನೀಡಬೇಕು. ಒಳ ಮೀಸಲಾತಿ ಸಂಬಂಧ ತಾಲೂಕು ಹಾಗೂ ಜಿಲ್ಲೆಗಳಲ್ಲಿಪ್ರತಿಭಟನೆ ನಡೆಸಲಾಗಿತ್ತು ಪ್ರತಿಭಟನೆ ಸಂದರ್ಭದಲ್ಲಿಕೆಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅಪಮಾನ ಆಗಿದೆ ಎಂದು ಕೆಲವರ ಮೇಲೆ ಮೊಖದ್ದಮೆ ಹೂಡಲಾಗಿದೆ. ಆ ಪ್ರಕರಣಗಳನ್ನು ವಜಾಮಾಡಬೇಕು,’’ ಎಂದರು.

ಡಿಎಸ್ ಎಸ್ ಜಿಲ್ಲಾಸಂಚಾಲಕ ರಾಜಣ್ಣ ಮಾತನಾಡಿ, ‘‘ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಬಲಗೈ ಜನಾಂಗದವರಿಗೆ ಎಷ್ಟು ಮೀಸಲಾತಿ ನೀಡಬೇಕೋ ಅಷ್ಟು ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು,’’ ಎಂದು ತಿಳಿಸಿದರು.

‘‘ತಾಲೂಕು ಮಟ್ಟದಿಂದ ಅಂಬೇಡ್ಕರ್ ಸೇವಾ ಸಮಿತಿ ವತಿಯವರು ಹಾಗೂ ಯಜಮಾನರು ಹಾಗೂ ಮುಖಂಡರು ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯ ಭಾಗವಹಿಸಲಿದ್ದಾರೆ. ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಿಮದ ಹೊರಟು ಗಾಂಧಿವೃತ್ತ, ಎಸ್ ಬಿಐ ಬ್ಯಾಂಕ್ ವೃತ್ತದಿಂದ ಹೊರಟು ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸುತ್ತೇವೆ,’’ ಎಂದು ತಿಳಿಸಿದರು.

ಅಂಬೇಡ್ಕರ್ ಸೇವಾ ಸಮಿತಿ ಕಾರ್ಯದರ್ಶಿಗಳಾ ದುಗ್ಗಹಟ್ಟಿ ಮಹೇಶ್ , ನಟರಾಜು, ಜಂಟಿ ಕಾರ್ಯದರ್ಶಿ ಪುಟ್ಟರಾಜು ಕುಮಾರನಪುರ, ಖಜಾಂಚಿ ಗುಂಬಳ್ಳಿ ಮಾದೇವ, ಅಗರ ನಿಂಗರಾಜು, ಕೆಸ್ತೂರು ನಾಗಣ್ಣ, ಮಧು, ಜಯರಾಮು, ಚಂದ್ರು, ಲಿಂಗರಾಜುಮೂರ್ತಿ, ಅಂಬೇಡ್ಕರ್ ಸೇವಾ ಸಮಿತಿ ನಿರ್ದೇಶಕರು, ಮುಖಂಡರು ಹಾಜರಿದ್ದರು.

ಸಿಹೆಚ್ ಎನ್ 25ವೈಎಲ್ ಡಿ

ಪೋಟೊಕ್ಯಾಪ್ಸನ್ 1

ಯಳಂದೂರು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿಅಂಬೇಡ್ಕರ್ ಸೇವಾ ಸಮಿತಿ ಪ್ರಾಧಾನ ಕಾರ್ಯದರ್ಶಿ ಯರಿಯೂರು ನಟರಾಜು ಮಾತನಾಡಿದರು.