ಹೊರಗುತ್ತಿಗೆ ನೌಕರರ ಸಮಾವೇಶಕ್ಕೆ ಕೈಜೋಡಿಸಿ

Contributed bypuruapo@gmail.com|Vijaya Karnataka

ನರಸಿಂಹರಾಜಪುರದಲ್ಲಿ ಮಾ.15ರಂದು ಸರಕಾರಿ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಾವೇಶ ನಡೆಯಲಿದೆ. ಇದರ ಯಶಸ್ಸಿಗೆ ತಾಲೂಕಿನ ನೌಕರರು ಕೈಜೋಡಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ಸಿ. ಗುರುಶಾಂತಪ್ಪ ಮನವಿ ಮಾಡಿದ್ದಾರೆ. ಸಮಾವೇಶದಲ್ಲಿ ಶಾಸಕರು ಹಾಗೂ ಜಿಲ್ಲಾಮಟ್ಟದ ಮೇಲಧಿಕಾರಿಗಳು ಭಾಗವಹಿಸಲಿದ್ದಾರೆ. ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸಲು ಹಾಗೂ ಸೇವಾ ಭದ್ರತೆ ನೀಡಲು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇದು ಎಲ್ಲರ ಭವಿಷ್ಯದ ಪ್ರಶ್ನೆಯಾಗಿದ್ದು, ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

contract workers meeting a positive step forward

ನರಸಿಂಹರಾಜಪುರ : ಮಾ.15ರಂದು ನಡೆಯಲಿರುವ ಸರಕಾರಿ ಹೊರಗುತ್ತಿಗೆ ನೌಕರರ ಜಿಲ್ಲಾಸಮಾವೇಶದ ಯಶಸ್ಸಿಗೆ ತಾಲೂಕಿನ ನೌಕರರು ಕೈಜೋಡಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ಸಿ. ಗುರುಶಾಂತಪ್ಪ ಮನವಿ ಮಾಡಿದರು. ಪಟ್ಟಣದ ಕಸಾಪ ಕಚೇರಿಯಲ್ಲಿಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ಸಭೆಯಲ್ಲಿಮಾತನಾಡಿ, ಸಮಾವೇಶದಲ್ಲಿಶಾಸಕರಾಧಿಯಾಗಿ ಜಿಲ್ಲಾಮಟ್ಟದ ಎಲ್ಲಇಲಾಖೆಯ ಮೇಲಧಿಕಾರಿಗಳು ಭಾಗವಹಿಸಲಿದ್ದಾರೆ. ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ, ಸೇವಾ ಭದ್ರತೆಯನ್ನು ನೀಡುವಂತೆ ಸಮಾವೇಶದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇದು ನಮ್ಮೆಲ್ಲರ ಭವಿಷ್ಯದ ಪ್ರಶ್ನೆಯಾಗಿದ್ದು, ಎಲ್ಲರೂ ಕೂಡ ಕಡ್ಡಾಯವಾಗಿ ಹಾಜರಾಗ ಬೇಕು ಎಂದು ಸೂಚಿಸಿದರು. ಸಂಘದ ಖಜಾಂಚಿ ಪಿ.ಮಂಜುಳ, ಪದಾಧಿಕಾರಿಗಳಾದ ರೂಪಾ, ನಳಿನ, ಕೆ.ಆಶಾ, ಎಸ್ .ಶಿವಕುಮಾರ್ , ಅಕ್ಷತಾ, ಸುನೀಲ್ ಕುಮಾರ್ , ಮಧು, ಬಸವರಾಜ್ , ಸೋಮಶೇಖರ್ , ಹನುಮಂತಪ್ಪ, ಲಕ್ಷಿತ್ರ್ಮದೇವಿ, ಕವಿತಾ, ನಾಗೇಶ್ ಹಾಗೂ ಇತರರಿದ್ದರು.