ಆರೋಪಿ ಬಂಧಿಸದಿದ್ದಲ್ಲಿಬಂದ್

Contributed byrudraiah4084@gmail.com|Vijaya Karnataka

ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ಅವರನ್ನು ಕೂಡಲೇ ಬಂಧಿಸದಿದ್ದರೆ ಚಿಕ್ಕಮಗಳೂರು ಬಂದ್ ಗೆ ಕರೆ ನೀಡಲಾಗುವುದು ಎಂದು ಬಿಜೆಪಿ ಎಸ್ಸಿ ಮೋರ್ಚಾ ಎಚ್ಚರಿಸಿದೆ. ದಲಿತ ಮಹಿಳೆ, ಅವರ ಪತಿ ಹಾಗೂ ಯುವಕರ ಮೇಲೆ ದೌರ್ಜನ್ಯ ನಡೆಸಿದರೂ ಆರೋಪಿ ಬಂಧನವಾಗಿಲ್ಲ. ಸ್ಥಳೀಯ ಶಾಸಕರ ಕುಮ್ಮಕ್ಕು ಆರೋಪಕ್ಕೆ ಕಾರಣವಾಗಿದೆ. ರಾಜ್ಯ ಐಜಿ ಮತ್ತು ಡಿಜಿ ಜಿಲ್ಲೆಯ ಪರಿಸ್ಥಿತಿ ಗಮನಿಸಬೇಕು. ಕೂಡಲೇ ಬಂಧಿಸದಿದ್ದರೆ ಬಂದ್ ಖಚಿತ.

protection of dalit rights against congress leaders chikkamagaluru bandh alert

ಚಿಕ್ಕಮಗಳೂರು: ದಲಿತರ ಮೇಲೆ ಪದೇಪದೆ ದೌರ್ಜನ್ಯ ನಡೆಸುತ್ತಿರುವ ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ಎಂಬಾತನನ್ನು ಕೂಡಲೇ ಬಂಧಿಸದಿದ್ದಲ್ಲಿಚಿಕ್ಕಮಗ ಳೂರು ಬಂದ್ ಗೆ ಕರೆ ನೀಡಲಾಗುವುದು ಎಂದು ಬಿಜೆಪಿ ಎಸ್ಸಿ ಮೋರ್ಚಾ ಎಚ್ಚರಿಸಿದೆ. ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಸೋಮವಾರ ಸುದ್ದಿಗೊಷ್ಠಿಯಲ್ಲಿಮಾತನಾಡಿ, ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ಎಂಬಾತ ದಲಿತ ಮಹಿಳೆ ಮತ್ತು ಅವರ ಪತಿಗೆ ಹಾಗೂ ದಲಿತ ಯುವಕರ ಮೇಲೆ ಇತ್ತೀಚೆಗೆ ಮಾಡಿರುವ ದೌರ್ಜನ್ಯ ಘಟನೆಗಳ ಬಗ್ಗೆ ಜಿಲ್ಲಾಪೊಲೀಸ್ ಅಧೀಕ್ಷಕರ ಗಮನಕ್ಕೆ ತಂದಿದ್ದರೂ ಬಂಧನವಾಗಿಲ್ಲ. ಆರೋಪಿಗೆ ಸ್ಥಳೀಯ ಶಾಸಕರ ಕುಮ್ಮಕ್ಕು ಇರುವುದು ಇಷ್ಟಕ್ಕೆಲ್ಲಕಾರಣವಾಗಿದೆ ಎಂದು ದೂರಿದರು. ಈ ಹಿಂದೆ ನಡೆದ ಚುನಾವಣೆಯಲ್ಲಿವಸ್ತಾರೆ ಜಿ.ಪಂ. ಕ್ಷೇತ್ರದಲ್ಲಿಸ್ಪರ್ಧಿಸಿದ್ದ ಮಹಿಳೆಯ ಪತಿ ಮೇಲೆ ಈತ ಹಲ್ಲೆ, ಜಾತಿ ನಿಂದನೆ ಮಾಡಿದ ಆರೋಪವಿದೆ. ದಲಿತ ಯುವಕ ತನ್ನ ಸ್ನೇಹಿತೆಯನ್ನು ಬೈಕಿನಲ್ಲಿಕೂರಿಸಿಕೊಂಡು ಹೋದ ಎಂಬ ಕಾರಣಕ್ಕೆ ಅಡ್ಡಗಟ್ಟಿ ಹಲ್ಲೆನಡೆಸಿರುವ ಆರೋಪವಿದೆ. ಆದರೂ ಬಂಧಿಸಿಲ್ಲ. ಕಾಂಗ್ರೆಸ್ ಸರಕಾರ ಮತ್ತು ಶಾಸಕರಿಂದ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು. ರಾಜ್ಯ ಐಜಿ ಮತ್ತು ಡಿಜಿ ಜಿಲ್ಲೆಯ ಪರಿಸ್ಥಿತಿ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು. ಕೂಡಲೇ ಆರೋಪಿಯನ್ನು ಬಂಧಿಸದಿದ್ದಲ್ಲಿಚಿಕ್ಕಮಗಳೂರು ಬಂದ್ ಗೆ ಕರೆ ನೀಡಲು ನಿರ್ಧರಿಸಲಾಗುವುದು ಎಂದು ಹೇಳಿದರು. ಬಿಜೆಪಿ ಎಸ್ಸಿ ಮೋರ್ಚಾ ಮುಖಂಡರಾದ ಕೇಶವಮೂರ್ತಿ, ಕೊಲ್ಲಾಭೋವಿ, ಬೀರಪ್ಪ, ಹಂಪಯ್ಯ, ರೇವನಾಥ್ , ಯತೀಶ್ ಮತ್ತಿತರರಿದ್ದರು.