ಕೊಪ್ಪ: ತಾಲೂಕಿನ ಕುಮರಿಗದ್ದೆಯ ದಿ. ಎಂ.ಎಲ್ .ರಾಮಚಂದ್ರರಾವ್ ಕುಟುಂಬದ ವತಿಯಿಂದ ಮಾ.15ರಂದು ಮಧ್ಯಾಹ್ನ 3ಕ್ಕೆ ಸಿಗದಾಳಿನ ಶ್ರೀ ವಿದ್ಯಾಗಣಪತಿ ಸಭಾಂಗಣದಲ್ಲಿ23ನೇ ಹೆಜ್ಜೆಯ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿಮುಜೆಕಾನ್ ದರ್ಶನ್ ಭಟ್ (ಭಾಗವತರು), ಹುಲುಗಾರು ಗಣೇಶಮೂರ್ತಿ (ಮದ್ದಳೆ), ನಾಗರಕೊಡಿಗೆಯ ಕೃಷ್ಣಮೂರ್ತಿ (ಚಂಡೆ), ಮುಮ್ಮೇಳದಲ್ಲಿವಿಟ್ಲದ ರಾಧಾಕೃಷ್ಣ ಕಲ್ಚಾರ್ , ಪ್ರೊ. ಪವನ್ ಕಿರಣಕೆರೆ, ಕೆಂಪನಮಕ್ಕಿಯ ರಜನೀಶ್ ಹೊಳ್ಳ, ಮೇಲುಕೊಪ್ಪದ ಅರವಿಂದ ಮತ್ತು ವಿದ್ಯಾಧರ, ಸಿಗದಾಳಿನ
ಅಶೋಕ ಮತ್ತು ಅಭಿರಾಮ ಅವರುಗಳು ‘ಪ್ರಚ್ಛನ್ನ ಪಾರ್ಥ’ ಎಂಬ ಕಥಾನಕ ಪ್ರದರ್ಶಿಸಲಿದ್ದಾರೆ. ಆಸಕ್ತರು ಹಾಜರಿರಲು ಕೋರಿದೆ.

