*ಚಿತ್ರ:ಪಾಲ್ *
ನಗರದ ರೋಟರಿ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿವಿಠಲರಾವ್ ತುಕಾರಾಮ ಸುತ್ರಾವೆ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಡಾ.ಶರಣಪ್ಪ ಎಸ್ .ಡಿ.ಉದ್ಘಾಟಿಸಿದರು. ಚನ್ನಬಸಪ್ಪ ಸಮಾನೆ, ಉದಯಕುಮಾರ ಹೊನಗುಂಟಿಕರ್ ಇತರರಿದ್ದರು.
**
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ-ವಾರ್ಷಿಕ ಸ್ನೇಹ ಸಮ್ಮೇಳನ(ಕಿಕ್ಕರ್ )
ವಿದ್ಯಾರ್ಥಿಗಳಲ್ಲಿನಿರ್ದಿಷ್ಟ ಗುರಿ ಇರಲಿ
ವಿಕ ಸುದ್ದಿಲೋಕ ಕಲಬುರಗಿ
ನಗರದ ರೋಟರಿ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿಶಿಕ್ಷಣ ಸಂಸ್ಥೆಯ ರೋಟರಿ ಕ್ಲಬ್ ಪೋಷಿತ ಶ್ರೀ ವಿಠಲರಾವ್ ತುಕಾರಾಮ ಸುತ್ರಾವೆ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಡೆಯಿತು.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ .ಡಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿನಿರ್ದಿಷ್ಟ ಗುರಿ ಇಟ್ಟುಕೊಂಡರೆ ಬದುಕು ಸುಂದರವಾಗಿ ರೂಪಗೊಳ್ಳಲಿದೆ ಎಂದು ಹೇಳಿದರು.
ಕಲಬುರಗಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಚನ್ನಬಸಪ್ಪ ಸಮಾನೆ, ರೋಟರಿಕ್ಲಬ್ ಅಧ್ಯಕ್ಷ ಉದಯಕುಮಾರ ಹೊನಗುಂಟಿಕರ್ , ವಿಜಯಕುಮಾರ ಜಮಖಂಡಿ, ಮಲ್ಲಿಕಾರ್ಜುನ ಮೇಳಕುಂದಿ, ಮಲ್ಕಣ್ಣ ಕಣ್ಣಿ, ರಮೇಶ ಪಾಟೀಲ, ಶೇಷಾದ್ರಿ ಕುಲಕರ್ಣಿ, ಅಶೋಕ ಮಾಡಗಿ, ಅಂಬಿಕೇಶ್ವರ ಸುತ್ರಾವೆ, ಸಂಜೀವಕುಮಾರ ಭೂಸಾ, ಬಸವರಾಜ ಅಂಗಡಿ ಸೇರಿದಂತೆ ಮುಖ್ಯಶಿಕ್ಷಕರು, ಸಿಬ್ಬಂದಿ ಇದ್ದರು.

