ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್ .ಎಸ್ .ಬಸವೇಗೌಡ ಅಭಿಮತ
ವಿಕ ಸುದ್ದಿಲೋಕ ಹಾಸನ
ಎಲ್ಲರೂ ಬಲ್ಲವರಿಲ್ಲಬಲ್ಲವರು ಬಹಳ ವಿಲ್ಲವಿಶ್ವದಲ್ಲಿಭಾರತ ಎಲ್ಲದರಲ್ಲೂಮೊದಲು ಎಂದು ಅನಿಸಿಕೊಂಡಿದೆ. ಇತಿಹಾಸವೆಂದರೆ ಗತಕಾಲದ ಘಟನೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು ಇತಿಹಾಸ ಎಂದು ಸರಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್ .ಎಸ್ .ಬಸವೇಗೌಡ ಹೇಳಿದರು.
ನಗರದ ಆರ್ .ಸಿ.ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘‘ಇತಿಹಾಸದಲ್ಲಿಸಾಹಿತ್ಯದ ಆಧಾರ ಮತ್ತು ಪುರತತ್ವ ಆಧಾರವಿದೆ. ಎಲ್ಲವೂ ಮಾಹಿತಿಯನ್ನು ತಿಳಿಸುವುದಿಲ್ಲ. ಇತಿಹಾಸದಲ್ಲಿವಾಸ್ತವವಾದ ಘಟನೆಯನ್ನು ಬರೆಯಬೇಕು ಇತಿಹಾಸದಲ್ಲಿಇರುವ ವ್ಯಕ್ತಿಗಳ ಬಗ್ಗೆ ಅವರು ಹೇಗಿದ್ದಾರೆ ಹಾಗೆ ಬರೆಯಬೇಕು. ಸಂಶೋಧನೆಯನ್ನು ಏಕೆ ಮಾಡಬೇಕೆಂದರೆ ಸರಿಯಾದ ವಿಷಯಗಳ ಬಗ್ಗೆ ತಿಳಿಯಲು ಸಂಶೋಧನೆ ಮಾಡಬೇಕು,’’ಎಂದರು.
‘‘ಇತಿಹಾಸದಲ್ಲಿನಾವು ಏನನ್ನು ಆಲೋಚಿಸುತ್ತೇವೆ ಅದನ್ನೇ ಮಾತನಾಡಬೇಕು. ಏನು ಮಾತನಾಡುತ್ತೇವೆ ಆ ರೀತಿಯಲ್ಲಿನಡೆದುಕೊಳ್ಳಬೇಕು. ಸಂಶೋಧನೆ ಎಂಬುದು ಒಂದು ವಿಷಯದ ಬಗ್ಗೆ ಹೊಸ ಹೊಸ ಅಂಶಗಳನ್ನು ತಿಳಿಸುತ್ತದೆ. ಸಂಶೋಧನೆ ಬಗ್ಗೆ ಜ್ಞಾನವನ್ನು ಹೆಚ್ಚಿಸುತ್ತದೆ. ಶಾಸನಗಳು ಸ್ಮಾರಕಗಳು ನಾಣ್ಯಗಳು ಇವುಗಳನ್ನು ಆಧಾರವಾಗಿಟ್ಟುಕೊಂಡು ಕೃತಿ ರಚನೆ ಮಾಡಬಹುದು ನಮಗೆ ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ650ಕ್ಕೂ ಹೆಚ್ಚು ಸಂಸ್ಥಾನಗಳು ಇದ್ದವು,’’ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಮಾತನಾಡಿ,‘‘ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವವರು ಇತಿಹಾಸವನ್ನು ತಿಳಿಯಲಾರರು. ಇತಿಹಾಸವನ್ನು ಶಾಸನಗಳಲ್ಲಿತಾಳೆ ಗರಿಗಳಲ್ಲಿನೋಡಬಹುದಾಗಿದೆ. ನಾವೆಲ್ಲರೂ ಕರ್ನಾಟಕದ ಇತಿಹಾಸ ಮತ್ತು ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದೇವೆ,’’ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಿ.ಎಲ್ .ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.
ಫೋಟೋ ಶೀರ್ಷಿಕೆ:
ಹಾಸನದ ಆರ್ .ಸಿ.ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ ್ಯಕ್ರಮ ಸರಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸಹ ಪ್ರಾಧ್ಯಾಪಕ ಡಾ.ಎಚ್ .ಎಸ್ .ಬಸವೇಗೌಡ ಉದ್ಘಾಟಿಸಿದರು.

