ನಾಗಮಂಗಲ : ಕೃಷಿ ಹಾಗೂ ಮಂಡ್ಯ ಜಿಲ್ಲಾಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಫೆ.10ರಂದು ತಾಲೂಕಿನ ಹಲವೆಡೆ ನಾನಾ ಕಾರ್ಯಕ್ರಮಗಳಲ್ಲಿಭಾಗವಹಿಸುವ ಜತೆಗೆ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಅಂದು ಬೆಳಗ್ಗೆ 9.30ಕ್ಕೆ ನಾಗಮಂಗಲ ಪಟ್ಟಣದ 15 ಮತ್ತು 11ನೇ ವಾರ್ಡ್ ನಲ್ಲಿಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡುವರು. ಬೆಳಗ್ಗೆ 10ಕ್ಕೆ ರೈತರಿಂದ ರಾಗಿ ಖರೀದಿಗೆ ಚಾಲನೆ ನೀಡುವರು. 11ಕ್ಕೆ ತಾಲೂಕು ಆಸ್ಪತ್ರೆ ವೈದ್ಯರ ಸಭೆಯಲ್ಲಿಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಪಂಚಾಯಿತಿ ಅಭಿವೃದ್ಧಿ ಸಭೆಯಲ್ಲಿಭಾಗಹಿಸುವರು. 3ಕ್ಕೆ ತಾಲೂಕಿನ ವಡೇರಪುರ ಗ್ರಾಮದ ಡೇರಿ ಕಟ್ಟಡÜ ಉದ್ಘಾಟನೆ ಕಾರ್ಯಕ್ರಮದಲ್ಲಿಭಾಗವಹಿಸುವರು. 3.20ಕ್ಕೆ ತಾಲೂಕಿನ ಹೊಸಮನೆ ಗ್ರಾಮದಲ್ಲಿಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವರು. ಸಂಜೆ 4ಕ್ಕೆ ವಡೇರಹಳ್ಳಿ ಡೇರಿ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿಭಾಗಹಿಸುವರು.

