(ನೋಡಿಲ್ಲ)ಸೇವೆಗೆ ಮುಡುಪಿಟ್ಟ ಡಾ. ಶ್ರೀನಾಥ್

Contributed bychanna mallikarjuna|Vijaya Karnataka

ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಯುರೊಲಜಿ ವಿಭಾಗಕ್ಕೆ 'ಮೂತ್ರಶಾಸ್ತ್ರದಲ್ಲಿ ಶ್ರೇಷ್ಠ ಸೇವೆ' ಪ್ರಶಸ್ತಿ ಲಭಿಸಿದೆ. ಪ್ರೊ. ಮೇಜರ್‌ ಜನರಲ್‌ ಡಾ. ಶ್ರೀನಾಥ್‌ ಅವರು ಪ್ರಶಸ್ತಿ ಸ್ವೀಕರಿಸಿದರು. 1,400 ಹಾಸಿಗೆಯ ಈ ಆಸ್ಪತ್ರೆ ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಡಾ. ಶ್ರೀನಾಥ್‌ ಅವರು 36 ವರ್ಷಗಳ ಸೇನಾ ಸೇವೆಯ ನಂತರ ಇಲ್ಲಿ ಯುರೊಲಜಿ ವಿಭಾಗವನ್ನು ಅಭಿವೃದ್ಧಿಪಡಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ 80 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.

dr shrinath a distinguished urologist committed to service
ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಯುರಾಲಜಿ ವಿಭಾಗಕ್ಕೆ ‘ಮೂತ್ರಶಾಸ್ತ್ರದಲ್ಲಿ ಶ್ರೇಷ್ಠ ಸೇವೆ’ ( Service Excellence in Urology ) ಪ್ರಶಸ್ತಿ ಲಭಿಸಿದೆ. ಮೇಜರ್ ಜನರಲ್ ಡಾ. ಶ್ರೀನಾಥ್ ಅವರು ಕಾಲೇಜಿನ ಪರವಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು. ಸುಮಾರು 1,400 ಹಾಸಿಗೆಗಳ ಸಾಮರ್ಥ್ಯವಿರುವ ಈ ಆಸ್ಪತ್ರೆ ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಡಾ. ಎ.ಸಿ. ಷಣ್ಮುಗಂ ಅವರ ನಾಯಕತ್ವದಲ್ಲಿ ಇಲ್ಲಿಯವರೆಗೆ 1,25,000 ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಯುರಾಲಜಿ ವಿಭಾಗವು ಅತ್ಯಾಧುನಿಕ ಸಲಕರಣೆಗಳೊಂದಿಗೆ 80 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ದಿನನಿತ್ಯದ ತಪಾಸಣೆ ಮತ್ತು ಚಿಕಿತ್ಸೆ ನೀಡಿದೆ.

ಮೇಜರ್ ಜನರಲ್ ಡಾ. ಶ್ರೀನಾಥ್ ಅವರು ಭಾರತೀಯ ಸೇನೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ, ರಾಷ್ಟ್ರಪತಿಗಳಿಂದ ‘ವಿಶಿಷ್ಟ ಸೇವಾ ಮೆಡಲ್’ ಪಡೆದಿದ್ದಾರೆ. 2018ರಲ್ಲಿ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ಯುರಾಲಜಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡು, ವಿಭಾಗವನ್ನು ಅಭಿವೃದ್ಧಿಪಡಿಸಿದ್ದಾರೆ. ಎಂಡೊ ಯುರಾಲಜಿ, ಲ್ಯಾಪ್ರೊಸ್ಕೊಪಿಕ್ ಪ್ರೊಸೀಜರ್‌ಗಳಂತಹ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸಿ, ಮೂತ್ರಪಿಂಡದ ಶಸ್ತ್ರಚಿಕಿತ್ಸೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಎಲ್ಲ ಚಿಕಿತ್ಸೆಗಳು ಲಭ್ಯವಾಗುವಂತೆ ಮಾಡಿ ಜನಪ್ರಿಯರಾಗಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
"ನಾನು ಡಾಕ್ಟರ್ ಆಗಬೇಕು ಎನ್ನುವುದು ನನ್ನ ತಾಯಿಯ ಆಸೆಯಾಗಿತ್ತು, ಅದನ್ನು ನಾನು ಪೂರೈಸಿದೆ" ಎನ್ನುತ್ತಾರೆ ಡಾ. ಶ್ರೀನಾಥ್. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದರು. 1981ರಲ್ಲಿ ಭಾರತೀಯ ಸೇನೆಗೆ ಸೇರಿ, 36 ವರ್ಷಗಳ ಕಾಲ ಯುರಾಲಜಿ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ದೆಹಲಿ, ಬೆಂಗಳೂರು, ಪುಣೆ, ಲೇ-ಲಡಾಖ್, ಉಧಂಪುರದಲ್ಲಿರುವ ಕಮಾಂಡೆಂಟ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನೆಯಲ್ಲಿದ್ದಾಗಲೇ ಸೀನಿಯರ್ ಕನ್ಸಲ್ಟೆಂಟ್ ಇನ್ ಸರ್ಜರಿಯಾಗಿ ಪದೋನ್ನತಿ ಪಡೆದರು. ಉಧಂಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ 2018ರಲ್ಲಿ ರಾಷ್ಟ್ರಪತಿಗಳಿಂದ ವಿಶಿಷ್ಟ ಸೇವಾ ಮೆಡಲ್ ಸ್ವೀಕರಿಸಿದರು.

ಡಾ. ಶ್ರೀನಾಥ್ ಅವರು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠವನ್ನೂ ಹೇಳಿಕೊಡುತ್ತಾರೆ. "ನಾನು ಓದುವಾಗ ಇದ್ದ ತಂತ್ರಜ್ಞಾನ ಈಗ ಹಳೆಯದಾಗಿದೆ. ನಾವೂ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಲೇಬೇಕಿದೆ. ಇಲ್ಲವಾದರೆ ಈಗಿನ ಜೆನ್ ಜಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕಷ್ಟ. ಆಧುನಿಕ ಉಪಕರಣಗಳು ಹಾಗೂ ತಂತ್ರಜ್ಞಾನಗಳನ್ನು ಬಳಸುವ ಮೂಲಕ ನಾವೂ ಅಪ್‌ಡೇಟ್ ಆಗಿದ್ದೇವೆ. ನಮ್ಮ ವಿಭಾಗಕ್ಕೆ ಪ್ರಶಸ್ತಿ ದೊರೆತಿರುವುದು ಖುಷಿಯ ಸಂಗತಿ," ಎಂದು ಅವರು ಹೇಳುತ್ತಾರೆ. ಅವರ ಫೋನ್ ನಂಬರ್ 9622133884.