ಹೊತ್ತಿ ಉರಿದ ಶಾಲಾ ಬಸ್

Contributed byprabhat.shenvi@timesgroup.com|Vijaya Karnataka

ಹುಕ್ಕೇರಿ ತಾಲೂಕಿನಲ್ಲಿ ಖಾಸಗಿ ಶಾಲಾ ಬಸ್ಸು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಶಾಲಾ ಅವಧಿ ಮುಗಿದ ನಂತರ ಪಾರ್ಕಿಂಗ್ ಶೆಡ್‌ನಲ್ಲಿ ನಿಲ್ಲಿಸಿದ್ದ ಬಸ್ಸು ಸಂಜೆ ಹೊತ್ತಿಗೆ ಹೊತ್ತಿ ಉರಿದಿದೆ. ಪಕ್ಕದ ಮನೆಯವರು ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡಿ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಬರುವಷ್ಟರಲ್ಲಿ ಬಸ್ಸು ಸಂಪೂರ್ಣ ಸುಟ್ಟು ಹೋಗಿತ್ತು.

fire engulfs school bus firefighters unable to save it

ವಿಕ ಸುದ್ದಿಲೋಕ ಹುಕ್ಕೇರಿ

ತಾಲೂಕಿನ ಖಾಸಗಿ ಶಾಲಾ ಬಸ್ ಗೆ ಸೋಮವಾರ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಉರಿದುಹೋಗಿದೆ.

ಶಾಲಾ ಅವಧಿ ಮುಗಿದ ನಂತರ ಚಾಲಕನು ವಾಹನವನ್ನು ಪಾರ್ಕಿಂಗ್ ಶೆಡ್ ನಲ್ಲಿನಿಲ್ಲಿಸಿ ಹೋಗಿದ್ದರು. ಸಂಜೆ ಏಕಾಏಕಿ ಶಾಲಾ ವಾಹನದಲ್ಲಿಬೆಂಕಿ ಕಾಣಿಸಿಕೊಂಡಿದ್ದನ್ನು ಪಕ್ಕದ ಮನೆಯವರು ನೋಡಿ ಶಾಲಾ ಆಡಳಿತ ಮಂಡಳಿಗೆ ತಿಳಿಸಿದರು. ಅವರು ಅಗಮಿಸಿ ಅಗ್ನಿಶಾಮಕ ಇಲಾಖೆಗೆ ತಿಳಿಸಿದರು. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿವಾಹನ ಸುಟ್ಟು ಭಸ್ಮವಾಗಿತ್ತು.

- 9ಹುಕ್ಕೇರಿ 5

ಹುಕ್ಕೇರಿಯಲ್ಲಿಶಾಲಾ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿರುವುದು.