ಚಿರತೆ ಸೆರೆಗೆ ಬೋನು ಇಟ್ಟ ಇಲಾಖೆ
ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದ ಕಣಿವೆ ಬಳಿ ಕಾಣಿಸಿಕೊಂಡ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಅರಣ್ಯ ಇಲಾಖೆ , ಚಲನವಲನ ಪರಿಶೀಲಿಸಿ ಚಿರತೆ ಸೆರೆಗೆ ಬೋನು ಇರಿಸಿದೆ. ನೂಲ್ವಿ ಗ್ರಾಮದ ಕಣಿವೆ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿಫೆ.4ರಂದು ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿಸ್ಥಳೀಯರ ಮಾಹಿತಿ ಆಧರಿಸಿ ಚಿರತೆ ಚಲನವನ ಪರಿಶೀಲಿಸಲಾಗುತ್ತಿದೆ. ಸೋಮವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರೂ, ಯಾವುದೇ ಕುರುಹು ಪತ್ತೆಯಾಗಿಲ್ಲ. ನಿರಂತರ ನಿಗಾ ಇಟ್ಟಿದ್ದು, ಮಂಗಳವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಆರ್ .ಎಸ್ .ಉಪ್ಪಾರ ತಿಳಿಸಿದ್ದಾರೆ.

