8ಮಹೇಶ4
ನಿಯಮಿತ ಆರೋಗ್ಯ ತಪಾಸಣೆ ಅವಶ್ಯ
ವಿಕ ಸುದ್ದಿಲೋಕ ಧಾರವಾಡ
ಆಧುನಿಕ ಒತ್ತಡ ಬದುಕಿನ ಮಧ್ಯದಲ್ಲಿಮನುಷ್ಯ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದಿರದಿದ್ದರೆ ಆರೋಗ್ಯವೂ ಹದಗೆಡುವ ಸಾಧ್ಯತೆಯಿದೆ ಎಂದು ಬಿಜೆಪಿ ಮುಖಂಡ ರಾಕೇಶ ನಾಝರೆ ಹೇಳಿದರು.
ನಗರದ ಹೊಸಯಲ್ಲಾಪೂರ ಛಾವಣಿ ಓಣಿ ಶ್ರೀ ವಿಠ್ಠಲ ಮಂದಿರದಲ್ಲಿಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿಜನರು ತಮ್ಮ ಕೆಲಸದ ಒತ್ತಡದಿಂದ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಹೀಗಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ನಮಗೆ ಯಾವುದೇ ಕಾಯಿಲೆ ಇಲ್ಲವೆಂದು ತಪಾಸಣೆ ಮಾಡಿಸದಿರುವುದು ಬಹಳ ತಪ್ಪು. ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಕಡೆಗೆ ಗಮನ ನೀಡುವುದು ಮಹತ್ವದ್ದಾಗಿದೆ ಎಂದು ತಿಳಿಸಿದರು.
ಬಡ ಕುಟುಂಬಸ್ಥರು ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಲು ಹಣ ಖರ್ಚಾಗುತ್ತದೆ ಎನ್ನುತ್ತಾರೆ. ಅವರಿಗೆ ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಿವೆ. ರಕ್ತದಾನ ಶಿಬಿರ ಏರ್ಪಡಿಸಿದ್ದು ಯುವಕರು ರಕ್ತದಾನ ಮಾಡಿ ಮತ್ತೊಬ್ಬರಿಗೆ ಸಹಾಯ ಮಾಡುತ್ತಿದ್ದಾರೆ. ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ನಿಮಿತ್ತ ಅವರ ಹೆಸರಿನಲ್ಲಿಶಿಬಿರ ಆಯೋಜಿಸಿ ಸಾಮಾಜಿಕ ಕಾರ್ಯ ಮಾಡುತ್ತಿರುವ ಶ್ರೀ ವಿಠ್ಠಲ ಮಂದಿರದ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.
ಶಿಬಿರದಲ್ಲಿಸುರೇಶ ಚವ್ಹಾಣ, ಸುರಂಜನ ಗುಂಡೆ, ಸುರೇಶ ಚಾಬೂಕಸವಾರ, ಪ್ರಣೀತ ರಾಮನಗೌಡರ, ಸಾಗರ ಸೂರ್ಯವಂಶಿ, ಅಮೋಘ ಕದಂ, ರವಿಕುಮಾರ, ಸಂತೋಷ ನಾಝರೆ, ಶುಭಂ ಚವ್ಹಾಣ, ರಾಕೇಶ ಪವಾರ, ಅಮೀತ ಚಾಬೂಕಸವಾರ ಸೇರಿದಂತೆ ವಿವಿಧ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.
ಪೋಟೊ: 8ಮಹೇಶ4
ಧಾರವಾಡ ಹೊಸಯಲ್ಲಾಪೂರ ಛಾವಣಿ ಓಣಿ ಶ್ರೀ ವಿಠ್ಠಲ ಮಂದಿರದಲ್ಲಿಭಾನುವಾರ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಲಾಯಿತು.

