ಚಿಕ್ಕಬಳ್ಳಾಪುರ : ಪ್ರಯೋಗ ಶೈಕ್ಷಣಿಕ ಸಂಶೋಧನಾ ಸಂಸ್ಥೆಯು ‘‘ಸರೋವರಗಳು ಮತ್ತು ಜಲಾಶಯಗಳ ಕುರಿತು 3 ದಿನಗಳ ರಾಷ್ಟ್ರೀಯ ಸಮ್ಮೇಳನ’’ವನ್ನು ಮಾ.24ರಿಂದ 26ರವರೆಗೆ ಕೇಂದ್ರ ಸರಕಾರದ ಜಲಶಕ್ತಿ ಮಂತ್ರಾಲಯ ಹಾಗೂ ರಾಜ್ಯ ಸರಕಾರದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದಲ್ಲಿವಿಷಯ ತಜ್ಞರ ವಿಶೇಷ ಉಪನ್ಯಾಸಗಳು, ವಿಚಾರ ಸಂಕಿರಣ ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಈ ವಿಭಾಗಗಳಲ್ಲಿಮೌಖಿಕ ಪ್ರಸ್ತುತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಯೋಗ ಸಂಸ್ಥೆಯ ವೆಬ್ ತಾಣ ಡಿಡಿಡಿ.p್ಟayಟಜa.ಟ್ಟಜ.ಜ್ಞಿ ವೀಕ್ಷಿಸಬಹುದು. ಡಾ. ಎ.ಎಂ. ರಮೇಶ್ , ಯೋಜನಾ ಮುಖ್ಯಸ್ಥರು, ಯುಗಾ ಕಾರ್ಯ ಯೋಜನೆ, ಪ್ರಯೋಗಾ ಶೈಕ್ಷಣಿಕ ಸಂಶೋಧನಾ ಸಂಸ್ಥೆ, ರಾವುಗೊಡ್ಲುಗ್ರಾಮ, ಕನಕಪುರ ರಸ್ತೆ, ಬೆಂಗಳೂರು-560116, ಮೊಬೈಲ್ 9845258894ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

