ವಿಕ ಸುದ್ದಿಲೋಕ ಮುಳಬಾಗಲು
ರೈತರು ಸ್ವ ಪ್ರೇರಣೆಯಿಂದ ಸಂಘಟಿತರಾಗಿ ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆ ಮರು ಸ್ಥಾಪನೆಗೆ ಕಾರ್ಯನಿರ್ವಹಿಸಿದಾಗ ಮಾತ್ರ ಕೃಷಿಕರಿಗೆ ನ್ಯಾಯ ಸಿಗಲಿದೆ ಎಂದು ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಡಿಕಲ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಸಂಗಸಂದ್ರ ಕೆರೆಯ ಭತ್ತದ ಗದ್ದೆಯಲ್ಲಿನೀರುಗಂಟಿ ಮುನೆಯ್ಯರವರ ಉಪಸ್ಥಿತಿಯಲ್ಲಿಬಲರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾರತೀಯ ಕಿಸಾನ್ ಸಂಘದ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತ ಉಳಿದರೆ ದೇಶ ಉಳಿಯಲಿದೆ. ಗಡಿಯಲ್ಲಿಸೈನಿಕ, ಹೊಲದಲ್ಲಿರೈತ ಕಾರ್ಯನಿರ್ವಹಿಸಿದರೆ ಮಾತ್ರ ದೇಶ ಸುಭಿಕ್ಷೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.
ಮಹಾಭಾರತದ ಕಾಲಘಟ್ಟದಲ್ಲೇ ಭಗವಾನ್ ಶ್ರೀಕೃಷ್ಣನ ಅಣ್ಣ ಬಲರಾಮ ವಿಶ್ವಕ್ಕೆ ಕೃಷಿಯ ಪರಂಪರೆಯನ್ನು ಪರಿಚಯಿಸಿದ ನೇಗಿಲು ಹೊತ್ತು ರೈತರನ್ನು ಪ್ರತಿನಿಧಿಸಿದ ಕೃಷಿಕರ ಆರಾಧ್ಯ ದೈವ. ಬಲರಾಮ ಜಯಂತಿಯನ್ನು ಅಂತಾರಾಷ್ಟ್ರೀಯ ರೈತರ ದಿನವಾಗಿ ಸೆಪ್ಟಂಬರ್ ತಿಂಗಳಿನಲ್ಲಿಘೋಷಣೆ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಭಾರತೀಯ ಕಿಸಾನ್ ಸಂಘ ರಾಷ್ಟ್ರವ್ಯಾಪಿ ಒತ್ತಡ ತಂದು ನಮ್ಮ ದೇಶೀಯ ಸಂಸ್ಕೃತಿ ಪರಂಪರೆಗಳನ್ನು ಉಳಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಕಿಸಾನ್ ಸಂಘದ ಪ್ರಾಂತ ಮಹಿಳಾ ಪ್ರಮುಖ್ ಚಳ್ಳಕೆರೆ ಆರ್ .ಅಮೃತ ಮಾತನಾಡಿ, ಭಾರತೀಯ ಕಿಸಾನ್ ಸಂಘಕ್ಕೆ ಪ್ರತಿಯೊಬ್ಬ ರೈತ ನಾಯಕ ಎಂಬ ತತ್ವದ ಅಡಿ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲೂಗ್ರಾಮ ಸಮಿತಿಗಳ ಮೂಲಕ ರೈತರ ಸಮಸ್ಯೆಗಳು ಗ್ರಾಮದ ಎಲ್ಲಾಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆಯಲು ಸಮಸ್ಯೆಗಳ ಮನವಿ ಪತ್ರ ಸಲ್ಲಿಸಿ ಬಗೆಹರಿಯದಿದ್ದಲ್ಲಿಹೋರಾಟ, ಧರಣಿ ನಡೆಸಲಾಗುವುದು. ಆ ಮೂಲಕ ಗ್ರಾಮದ ರೈತರೆ ನಾಯಕರಾಗಿ ಮುನ್ನುಗ್ಗಿದಾಗ ಮಾತ್ರ ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗುತ್ತದೆ. ಜತೆಗೆ ಸಮಸ್ಯೆಗಳು ಪರಿಹಾರವಾಗಿ ನಾಯಕತ್ವ ಬೆಳೆಯುತ್ತದೆ. ಇದರಿಂದ ಬೇರೆಯವರನ್ನು ಅವಲಂಬನೆ ಮಾಡುವುದು ತಪ್ಪುತ್ತದೆ ಎಂದರು.
ಬಿಕೆಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಎನ್ .ನಾರಾಯಣಸ್ವಾಮಿ, ಪ್ರಾಂತ ಉಪಾಧ್ಯಕ್ಷ ಎ.ಅಪ್ಪಾಜಿಗೌಡ, ತಾಲೂಕು ಅಧ್ಯಕ್ಷ ಉಗನಿ ಆರ್ .ನಾರಾಯಣ ಗೌಡ, ತಾಲೂಕು ಕಾರ್ಯದರ್ಶಿ ಪಿ.ಗಂಗಾಪುರ ಮುನಿರಾಮಯ್ಯ, ಜಿಲ್ಲಾಮಹಿಳಾ ಪ್ರಮುಖ್ ಭೀಮಾಪುರ ಬಿ.ಎಸ್ .ಶಶಿಕಲಾ, ತಾಲೂಕು ಮಹಿಳಾ ಪ್ರಮುಖರಾದ ಮಡಿಯನೂರು ಜಯಲಕ್ಷ್ಮಮ್ಮ , ಶಿವಕೇಶವನಗರದ ಪ್ರೇಮಮ್ಮ, ಸಂಗಸಂದ್ರ ಗ್ರಾಮ ಸಮಿತಿ ಪ್ರಮುಖರಾದ ಆರ್ .ಶ್ರೀಧರ್ , ಶ್ರೀನಿವಾಸ್ , ಬಾಬಾಜಾನ್ , ಚಂದ್ರ, ಶಿವ, ನಾರಾಯಣಸ್ವಾಮಿ , ನೀರುಗಂಟಿ ಮುನೆಯ್ಯ, ಭಜರಂಗಿ ಚಲಪತಿ ಮತ್ತಿತರರು ಇದ್ದರು.
5 ಎಂ.ಬಿ.ಎಲ್ ಪೋಟೋ 1 ಮುಳಬಾಗಿಲು ತಾಲೂಕಿನ ಸಂಗಸಂದ್ರ ಗ್ರಾಮದ ಕೆರೆಯ ಭತ್ತದ ಗದ್ದೆಯಲ್ಲಿಭಾರತೀಯ ಕಿಸಾನ್ ಸಂಘ ಸಂಸ್ಥಾಪನಾ ದಿನ ಆಚರಿಸಲಾಯಿತು.

