ಚಿತ್ರ 5ಬಿಎಲ್ ಕೆ3:
ಭಾಲ್ಕಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿಅನಧಿಕೃತ ಕೋಚಿಂಗ್ ಸೆಂಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ನೇತೃತ್ವದಲ್ಲಿಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
* ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ಒತ್ತಾಯ
ಅನಧಿಕೃತ ಕೋಚಿಂಗ್ ಸೆಂಟರ್ ಬಂದ್ ಮಾಡಿ
ವಿಕ ಸುದ್ದಿಲೋಕ ಭಾಲ್ಕಿ
ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡುವಂತೆ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ನೇತೃತ್ವದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರಕಾರದ ಪಧಿರವಾನಿಗೆ ಇಲ್ಲದೇ ಬೇಸಿಗೆ ವಿಶೇಷ ತರಗತಿ ನಡೆಸುವ ಹೆಸರಿನಲ್ಲಿರಾಜಾರೋಷವಾಗಿ ಪ್ರತಿವರ್ಷ ಅನಧಿಕೃತ ಕೋಚಿಂಗ್ ಸೆಂಟರ್ ಗಳ ಹಾವಳಿ ಹೆಚ್ಚುತಲೇ ಇದೆ. ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅನಧಿಕೃತ ಕೋಚಿಂಗ್ ಸೆಂಟರ್ ಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ಆದರೆ, ತಾಲೂಕಿನಲ್ಲಿಇದುವರೆಗೂ ಅನಧಿಕೃತ ಕೋಚಿಂಗ್ ಸೆಂಟರ್ ವಿರುದ್ಧ ಒಂದು ಕೂಡ ಪ್ರಕರಣ ದಾಖಲಾಗಿಲ್ಲ. ಇದನ್ನು ಗಮನಿಸಿದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಇದರಲ್ಲಿಭಾಗಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತದೆ. ಬೇಸಿಗೆ ರಜೆ ಆರಂಭಕ್ಕೆ ದಿನಗಣನೇ ಶುರುವಾಗುತ್ತಿದ್ದು, ಈಗಾಗಲೇ ಪರವಾನಿಗೆ ಇಲ್ಲದ ಕೋಚಿಂಗ್ ಸೆಂಟರ್ ಗಳು ಬೇಸಿಗೆ ತರಗತಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅನಧಿಕೃತ ಸೆಂಟರ್ ಗಳನ್ನು ಬಂದ್ ಮಾಡಿಸಿ ಸಂಬಂಧಧಿಪಟ್ಟ ಅಧಿಧಿಧಿಕಾಧಿರಿಧಿಗಳು ಎಫ್ ಐಆರ್ ದಾಖಲಿಸಬೇಕೆಂದು ಮನವಿ ಪತ್ರದಲ್ಲಿಆಗ್ರಹಿಸಿದ್ದಾರೆ.
ಪ್ರಮುಖರಾದ ಸುದೀಪ ತೂಗಾವೆ, ಪ್ರಶಾಂತ ಹಣಮಶೆಟ್ಟಿ, ಭದ್ರಯ್ಯಸ್ವಾಮಿ, ಜಗದೀಶ ಪಾಟೀಲ್ , ರಾಜು ಕುಂಬಾರ, ಮಹೇಶ ರಾಚೋಟೆ, ಸಂಗಮೇಶ ಮಾರ್ಗೆ, ರವಿ ಜವಲಕೋಟ್ ಇಧಿತಧಿರಧಿರಿಧಿದ್ದಧಿರು.

