26 ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಸಿದ್ಧ
* ನೀಧಿರಿನ ಸಧಿಮಸ್ಯೆ ನಿಧಿವಾಧಿರಧಿಣೆಗೆ ತಾಧಿಲೂಕು ಆಧಿಡಧಿಳಿತ ಸಿಧಿದ್ಧಧಿತೆ
* ಖಾಸಗಿ ಕೊಳವೆಬಾವಿ ಮಾಲೀಕರೊಂದಿಗೆ ಒಡಂಬಡಿಕೆ ಶುರು
* ಕಳೆದ ಸಾಲಿನ ಉತ್ತಮ ಮುಂಗಾರು ತಂದ ಆತ್ಮವಿಶ್ವಾಸ
ಪಿ.ವೀರೇಂದ್ರಗೌಡ ಸಂಡೂರು
ಘ್ಕಿvಛ್ಟಿಛ್ಞಿd್ಟaಜಟ್ಠdಃಜಞaಜ್ಝಿ.್ಚಟಞ
ಕಳೆದ ಸಾಲಿನ ಮುಂಗಾರಿನಲ್ಲಿಉತ್ತಮ ಮಳೆಯಾಧಿಗಿಧಿದ್ದಧಿರಿಂದ ಈ ವಧಿರ್ಷ ಬೇಸಿಗೆಧಿಯಧಿಲ್ಲಿಕುಡಿಯುವ ನೀರಿನ ಬವಣೆಗೆ ಜಗ್ಗದ ಆತ್ಮ ವಿಶ್ವಾಸ ಹುಟ್ಟಿಸಿದೆ. ಆದರೂ ಕೆಲ ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆ ತಲೆದೂರಬಹುದು ಎಂಬ ಆತಂಕ ನಿವಾರಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ತಾಲೂಕಿನ ಕುಡಿಯುವ ನೀರಿನ ಕೊಳವೆಬಾವಿಗಳ ಅಂತರ್ಜಲ ಮರುಪೂರಣಕ್ಕಾಗಿ 0.81 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯದ ನಾರಿಹಳ್ಳ ಜಲಾಶಯ ಸಧಿಹಧಿಕಾಧಿರಿಧಿಯಾಧಿಗಿಧಿದ್ದು, ಪುರಸಭೆ ವ್ಯಾಪ್ತಿಯ 48 ಸಾವಿರ ಜನಸಂಖ್ಯೆಗೆ ನೀರು ಕೊಡುತ್ತಿದೆ. ನೀರಿಧಿನ 2 ಟ್ಯಾಂಕ್ ಗಳಲ್ಲಿ45 ಲಕ್ಷ ಲೀ. ನೀರು ಸಂಗ್ರಹಣೆಯಾಗುತ್ತಿದ್ದು, ಹೆಚ್ಚುವರಿಯಾಗಿ ತಲಾ 10 ಲಕ್ಷ ಲೀ. ನೀರು ಸಂಗ್ರಹಣೆಗೆ 2 ಹೊಸ ಟ್ಯಾಂಕ್ ಗಳು ನಿರ್ಮಾಣಗೊಳ್ಳುತ್ತಿವೆ. ಉಳಿದಂತೆ ಪುರಸಭೆ ವ್ಯಾಪ್ತಿಯಲ್ಲಿಕೊರೆಸಲಾದ 135 ಕೊಳವೆಬಾವಿಗಳನ್ನು ದುರಸ್ತಿ ಮಾಡಲಾಗಿದೆ. 4-5 ದಿನಕ್ಕೊಮ್ಮೆ ನೀರು ಸರಬರಾಜು ಕ್ರಮ ಮುಂದುವರಿದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರಗೌಡ ತಿಳಿಸಿಧಿದ್ದಾಧಿರೆ.
ತಾಲೂಕಿನ ದರೋಜಿ ಕೆರೆ 0.61 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದ್ದು, ಮಳೆಗಾಲದಲ್ಲಿಸಂಪೂರ್ಣ ತುಂಬಿದ್ದರಿಂದ ಸುತ್ತಲಿನ ಗ್ರಾಮಗಳ ಕೊಳವೆ ಬಾವಿಗಳಲ್ಲಿಸಾಕಷ್ಟು ನೀರಿದೆ. ತಾಲೂಕಿನಲ್ಲಿಜಿ.ಪಂ. ಎಂಜಿನಿಯರಿಂಗ್ ಉಪ ವಿಭಾಗಕ್ಕೆ ಸೇರಿದ 21, ಸಣ್ಣ ನೀರಾವರಿ ಇಲಾಖೆಗೆ ಸೇರಿದ 48 ದೊಡ್ಡ ಕೆರೆ ಹಾಗೂ ಜಿನುಗು ಕೆರೆಗಳಿದ್ದು ಮಳೆಗಾಲದಲ್ಲಿಎಸ್ .ಓಬಳಾಪುರ, ಜಿಗೇನಹಳ್ಳಿ, ಆವಿನಮಡಗು ಸೇರಿ 5 ಕೆರೆಗಳು ಸಂಪೂರ್ಣ ತುಂಬಿವೆ. ಉಳಿದ ಕೆರೆಗಳಲ್ಲಿಶೇ.80 ರಷ್ಟು ನೀರು ಸಂಗ್ರಹಣೆಯಾಗಿದ್ದು, ಕೊಂಚ ನೆಮ್ಮದಿ ಮೂಡಿಸಿದೆ.
ತಹಸೀಲ್ದಾರ್ ಅನಿಲ್ ಕುಮಾರ್ , ತಾ.ಪಂ.ಇಒ ಮಡಗಿನ ಬಸಪ್ಪ ನೇಧಿತೃತ್ವದಲ್ಲಿಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ, ಬೇಸಿಗೆಯಲ್ಲಿಕುಡಿಯುವ ನೀರಿನ ತೊಂದರೆ ಎದುರಾಗಬಹುದಾದ ಚೋರನೂರು, ಬಂಡ್ರಿ, ಸ್ವಾಮಿಹಳ್ಳಿ, ಹೀರಾಳ್ , ಯರಯ್ಯನಹಳ್ಳಿ, ಜಿ.ಎಲ್ .ಹಳ್ಳಿ ಸೇರಿ ಸಮಸ್ಯಾತ್ಮಕ 26 ಗ್ರಾಮಗಳ ಪಟ್ಟಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ಧಿನೈರ್ಮಲ್ಯ ಇಲಾಖೆ ಸಿದ್ಧಪಡಿಸಿದೆ. ಧಿಜತೆಗೆ ಈಗಾಗಲೇ ಸಮಸ್ಯಾತ್ಮಕ ಗ್ರಾಮಗಳಿಗೆ ಸಮೀಪದಲ್ಲಿನ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, ಮಾಲೀಕರಿಂದ ಬಾವಿಗಳನ್ನು ಬಾಡಿಗೆ ಪಡೆಯಲು ಒಡಂಬಡಿಕೆ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
*ಬಾಧಿಕ್ಸ್ ಧಿ*
ಜೆಧಿಜೆಎಂ ಕಾಧಿಮಧಿಗಾರಿ ಸ್ಥಿಧಿತಿ
ಕೋಡಾಲ್ ಸೇರಿ 33 ಗ್ರಾಮಗಳಲ್ಲಿಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ನಳ ಸಂಪರ್ಕಿಸಿ ನೀರು ಕೊಡಲಾಗಿದೆ. ಉಳಿದಂತೆ ದರೋಜಿ, ತೋರಣಗಲ್ಲು, ಕುರೇಕುಪ್ಪ ಸೇರಿ 8 ಗ್ರಾಮಗಳ ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದೆಯಾದರೂ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 6 ತಿಂಗಳು ಬೇಕಾಗಲಿದೆ. ನಿಡಗುರ್ತಿ ಸೇರಿ 62 ಹಳ್ಳಿಗಳ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳಲು ಒಂದು ವರ್ಷ ಬೇಕಾಗಲಿದೆ.
* ಬಾಕ್ಸ್ *
ರಾಧಿಸಾಧಿಯಧಿನಿಕ ಬಧಿಳಕೆ ದೂಧಿರು
ತಾಲೂಕಿನಲ್ಲಿ151 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು 2 ರೂ.ಗೆ 20 ಲೀ. ಶುದ್ಧ ನೀರು ನೀಡಲಾಗುತ್ತಿದೆ. ಆದರೂ ಖಾಸಗಿ ಘಟಕಗಳು ಅಣಬೆಯಂತೆ ಪ್ರತಿ ಓಣಿಗಳಲ್ಲೂಸ್ಥಾಪನೆಯಾಗಿವೆ. 20 ಲೀ. ನೀರಿಗೆ 10 ರೂ. ತೆರಬೇಕಿದೆ. ಖಾಸಗಿ ಘಟಕಗಳಿಗೆ ಸರಕಾರದ ಉಸ್ತವಾರಿಯಿಲ್ಲದ ಕಾರಣಕ್ಕೆ ರಾಸಾಯನಿಕಗಳ ಅತಿಯಾದ ಬಳಕೆಯ ದೂರು ವ್ಯಾಪಕವಾಗಿದ್ದು, ಜನ ಮೂಕವೇದನೆ ಅನುಭವಿಸುತ್ತಿಧಿದ್ದಾಧಿರೆ.
*ಕೋಟ್ :*
ನಮ್ಮೂರಲ್ಲಿಜೆಜೆಎಂ ಕೆಲಸ ಮುಗಿದು ವರ್ಷವಾಗಿದ್ದರೂ ನೀರು ಬರುಧಿತ್ತಿಲ್ಲ, ಜಧಿತೆಧಿಗೆ ಅಲ್ಲಲ್ಲಿನಳಗಳು ಮುರಿದಿವೆ. 1 ಮತ್ತು 4ನೇ ವಾರ್ಡ್ ನಲ್ಲಿಜಿಂದಾಲ್ ನವರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ 2 ವರ್ಷವಾಗುತ್ತ ಬಂದರೂ ಗ್ರಾ.ಪಂ.ನಿಂದ ಈವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೀರಿನ ತೊಂದರೆ ಮೇ ಸಂದರ್ಭದಲ್ಲಿಕಾಣಿಸಿಕೊಳ್ಳಬಹುದು.
-ಎಸ್ .ಕಾಲೂಬಾ, ತಾಳೂರು ಗ್ರಾಮಸ್ಥ, ಸಂಡೂರು ತಾಲೂಧಿಕು
*ಕೋಟ್ :*
ತಾಲೂಕಿನಲ್ಲಿ26 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಕೋಡಾಲು ಸೇರಿ 33 ಹಳ್ಳಿಗಳಲ್ಲಿಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಚೋರನೂರು, ಬಂಡ್ರಿ ಭಾಗದಲ್ಲಿಕುಡಿಯುವ ನೀರಿನ ತೊಂದರೆ ಕಾಣಿಸಿಕೊಳ್ಳಬಹುದು ಎಂದು ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದೇವೆ.
-ಎಂ.ಎನ್ .ವಿನಾಯಕ, ಎಇಇ, ಆರ್ ಡಬ್ಲುಎಸ್ ಇಲಾಖೆ
* ಬಿಎಲ್ ವೈ 4 ಎಸ್ಡಿಆರ್ 1:
ಸಂಡೂರಿನ ತೋರಣಗಲ್ಲುಹೋಬಳಿಯ ತಾಳೂರಿನಲ್ಲಿಜೆಜೆಎಂ ಅಡಿ ಹಾಕಲಾದ ನಳ ಮುರಿದಿಧಿರುಧಿವುಧಿದು.
* ಬಿಎಲ್ ವೈ 4 ಎಸ್ಡಿಆರ್ 2:
ಸಂಡೂರಿನ ತೋರಣಗಲ್ಲುಹೋಬಳಿಯ ತಾಳೂರಿನಲ್ಲಿಜಿಂದಾಲ್ ನಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗ್ರಾ.ಪಂ.ನಿಂದ ಈವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲದ ಕಾಧಿರಧಿಣ ಸ್ಮಾರಕದಂತಾಗಿದೆ.
* ಬಿಎಲ್ ವೈ 4 ಎಸ್ಡಿಆರ್ 3: ( ಎಸ್ .ಕಾಲೂಬಾ
* ಬಿಎಲ್ ವೈ 4 ಎಸ್ಡಿಆರ್ 4: ( ಎಂ.ಎನ್ .ವಿನಾಯಕ, ಎಇಇ

