ಭೋವಿ ಸಮುದಾಯದ ಕೊಡುಗೆ ಅಪಾರ
ವಿಕ ಸುದ್ದಿಲೋಕ ವಿಜಯನಗರ(ಹೊಸಪೇಟೆ)
‘‘ಭಾರತೀಯ ಸಂಸ್ಕೃತಿಯ ಬೆಳವಣಿಗೆಗೆ ಭೋವಿ ಸಮುದಾಯ ತನ್ನದೇ ಆದ ಕೊಡುಗೆ ನೀಡಿದೆ,’’ ಎಂದು ಕನ್ನಡ ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಶೋಧನಾ ವಿದ್ಯಾರ್ಥಿ ಎಂ.ರಮೇಶ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿಬುಧವಾರ ಹಮ್ಮಿಕೊಂಡಿದ್ದ ‘ಸಮಾಜಮುಖಿ ತಿಂಗಳ ಮಾತು-13’ ಉಪನ್ಯಾಸ
ಕಾರ್ಯಕ್ರಮದಲ್ಲಿಮಾತನಾಡಿದರು.
‘‘ಭೋವಿ ಜನ ಶಿಕ್ಷಣದ ಕೊರತೆಯಿಂದಾಗಿ ವಂಶಪಾರಂಪರ್ಯವಾಗಿ ಬಂದ ಶÜ್ರಮಾಧಾರಿತ ಕಸುಬು ಮುಂದುವರೆಸಿದ್ದಾರೆ. ಈ ಸಮಾಜದ ಶೇ.2ರಷ್ಟು ಜನ ಮಾತ್ರ ಆರ್ಥಿಕವಾಗಿ ಬೆಳವಣಿಗೆ ಹೊಂದಿರುವುದನ್ನು ಕಾಣ ಬಹುದಾಗಿದೆ. ಸರಕಾರ ಈ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕಿದೆ,’’ ಎಂದರು.
ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಯರ್ರಿಸ್ವಾಮಿ ಮಾತನಾಡಿದರು. ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ, ಕಾರ್ಯಕ್ರಮದ ಸಂಚಾಲಕ ಬಿ.ತಿಪ್ಪೇಸ್ವಾಮಿ, ಕೆ.ಮೋಹನ್ ಕುಮಾರ್ , ಹಿರಿಯ ಪ್ರಾಧ್ಯಾಪಕ ಡಾ. ಎಫ್ .ಟಿ.ಹಳ್ಳಿಕೇರಿ ಸೇರಿ ಇತರರಿದ್ದರು.
ಫೋಟೋ ಕ್ಯಾಪ್ಷನ್ : ಎಚ್ ಪಿಟಿ 4ದೇವರಾಜ3
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿಸಂಶೋಧನಾ ವಿದ್ಯಾರ್ಥಿ ಎಂ. ರಮೇಶ ಮಾತನಾಡಿದರು.

