ಗದಗ ಗ್ರಾಮೀಣ ಬಿಜೆಪಿ ಮಂಡಲದ
ವಿವಿಧ ಮೋರ್ಚಾಗಳಿಗೆ ನೇಮಕ
ವಿಕ ಸುದ್ದಿಲೋಕ ಗದಗ
ವಿಧಾನಸಭೆ ಮತಕ್ಷೇತ್ರದ ಗದಗ ಗ್ರಾಮೀಣ ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಯುವ ಮೋರ್ಚಾ ಅಧ್ಯಕ್ಷರಾಗಿ ಅರವಿಂದ ಅಣ್ಣಿಗೇರಿ (ಸೊರಟೂರ), ಪ್ರಧಾನ ಕಾರ್ಯದರ್ಶಿಗಳಾಗಿ ಕಾಳು ತೋಟದ (ಬೆಳದಡಿ ತಾಂಡೆ) ಹಾಗೂ ಕಿರಣ ಬಾತಾಖಾನಿ (ಗದಗ) ನೇಮಕಗೊಂಡಿದ್ದಾರೆ. ರೈತ ಮೋರ್ಚಾ ಅಧ್ಯಕ್ಷರಾಗಿ ನಿಂಗಯ್ಯ ಇಟಗಿಮಠ (ಕಳಸಾಪೂರ), ಪ್ರಧಾನ ಕಾರ್ಯದರ್ಶಿಗಳಾಗಿ ಸಿದ್ದಪ್ಪ ಈರಗಾರ (ಹೊಸಳ್ಳಿ) ಹಾಗೂ ಶ್ರೀಕಾಂತ ಹೊಸಮನಿ (ಕುರ್ತಕೋಟಿ) ಆಯ್ಕೆಯಾಗಿದ್ದಾರೆ. ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ರೇಖಾ ಮದ್ನೂರ (ಅಂತೂರ-ಬೆಂತೂರ), ಪ್ರಧಾನ ಕಾರ್ಯದರ್ಶಿಗಳಾಗಿ ಶಶಿಕಲಾ ಅಮಾಟೆ (ನಾಗಾವಿ) ಹಾಗೂ ಗಿರಿಜಾ ಮಲ್ಲಸಮುದ್ರಮಠ (ಕಣವಿ) ನೇಮಕಗೊಂಡಿದ್ದಾರೆ. ಎಸ್ ಟಿ ಮೋರ್ಚಾ ಅಧ್ಯಕ್ಷರಾಗಿ ಲಕ್ಷ ್ಮಣ ರಣತೂರ (ಸೊರಟೂರ), ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ ದೊಡ್ಡಮನಿ (ಕಲ್ಲೂರ) ಹಾಗೂ ಲಕ್ಷ ್ಮಣ ಹ. ಕಟಗಿ (ಶಿರುಂಧ) ಆಯ್ಕೆಯಾಗಿದ್ದಾರೆ. ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ಹನುಮಂತಪ್ಪ ದಿಂಡಣ್ಣವರ (ಕುರ್ತಕೋಟಿ), ಪ್ರಧಾನ ಕಾರ್ಯದರ್ಶಿಗಳಾಗಿ ಗೋಪಾಲ ನಾಯಕ (ಬೆಳದಡಿ ತಾಂಡೆ) ಹಾಗೂ ಸತ್ಯನಾರಾಯಣ ಘೋಡ್ಕೆ (ಕಳಸಾಪೂರ) ನೇಮಕಗೊಂಡಿದ್ದಾರೆ. ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಮಹೇಶ ಕಮ್ಮಾರ (ಹರ್ತಿ), ಪ್ರಧಾನ ಕಾರ್ಯದರ್ಶಿಗಳಾಗಿ ಮೋಹನ್ ಕೋರಿ (ಹುಲಕೋಟಿ) ಹಾಗೂ ಪ್ರಶಾಂತ ತ. ಬಡಿಗೇರ (ಬೆಳದಡಿ) ಆಯ್ಕೆಯಾಗಿದ್ದಾರೆ. ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಅಲ್ಲಾಸಾಬ್ ಪಿರಖಾನವರ (ನಾಗಾವಿ), ಪ್ರಧಾನ ಕಾರ್ಯದರ್ಶಿಗಳಾಗಿ ಮೊಹ್ಮದರಫೀಕ್ ದಾಲಾಯತ್ (ಕುರ್ತಕೋಟಿ) ಹಾಗೂ ಸೈಜನಸಾಬ್ ಹಳೆಮನಿ (ಚಿಂಚಲಿ) ನೇಮಕಗೊಂಡಿದ್ದಾರೆ.

