ಅಭಿಯಾನ)) ಪ್ರವಾಸಿ ತಾಣವಾಗಲಿ ಐತಿಹಾಸಿಕ ಕೋಟೆಗಳು

Contributed byshreemolu.93@gmail.com|Vijaya Karnataka

ಕಾಸರಗೋಡಿನ ಐತಿಹಾಸಿಕ ಕೋಟೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬೇಕಲ ಕೋಟೆಯನ್ನು ಹೊರತುಪಡಿಸಿ ಉಳಿದ ಕೋಟೆಗಳು ನಿರ್ವಹಣೆ ಇಲ್ಲದೆ ನಾಶದ ಅಂಚಿನಲ್ಲಿವೆ. ಪೊವ್ವಲ್‌ ಕೋಟೆ, ಕಾಸರಗೋಡು ಕೋಟೆ, ಕುಂಡಂಕುಳಿ ಕೋಟೆಗಳು ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳನ್ನು ಹೊಂದಿವೆ. ಸರಕಾರ ಸೂಕ್ತ ಯೋಜನೆಗಳನ್ನು ರೂಪಿಸಿ ಈ ಕೋಟೆಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ.

historical forts as tourist attractions kasaragod

ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಕಾಸರಗೋಡಿನ ಕೋಟೆಗಳು | ಪ್ರವಾಸೋದ್ಯಮಕ್ಕೆ ಹಲವು ಅವಕಾಶ

ಭಾಗ್ಯಶ್ರೀ ಸಿ. ಕುಂಬಳೆ

್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ

ಇಕ್ಕೇರಿ ನಾಯಕರು ತುಳುನಾಡಿನಲ್ಲಿವಶಪಡಿಸಿದ ಮತ್ತು ಕಟ್ಟಿಸಿದ ಹಲವಾರು ಕೋಟೆಗಳಲ್ಲಿಬಹುತೇಕ ಕಾಸರಗೋಡು ಜಿಲ್ಲೆಯಲ್ಲಿದೆ. ಪ್ರವಾಸಿತಾಣಗಳಾಬೇಕಿದ್ದ ಐತಿಹಾಸಿಕ ಕೋಟೆಗಳು ನಿರ್ವಹಣೆ ಇಲ್ಲದೆ ಸೊರಗಿದೆ.

ಇಕ್ಕೇರಿ ನಾಯಕರ ಆಡಳಿತದ ಇತಿಹಾಸಗಳನ್ನು ಸಾರುವ ಹಲವಾರು ಕೋಟೆಗಳನ್ನು ಕಾಸರಗೋಡು ಹೊಂದಿದ್ದರೂ ಬೇಕಲಕೋಟೆಯನ್ನು ಹೊರತುಪಡಿಸಿ ಉಳಿದ ಕೋಟೆಗಳು ಬಹುತೇಕ ನಿರ್ವಹಣೆ ಇಲ್ಲದೇ ನಾಶದ ಅಂಚಿನಲ್ಲಿದೆ. ಬೇಕಲ ಕೋಟೆಯನ್ನು ಹೊರತು ಪಡಿಸಿ, ಚಂದ್ರಗಿರಿಕೋಟೆ, ಹೊಸದುರ್ಗಕೋಟೆ, ಕುಂಬಳೆ ಅಥವಾ ಆರಿಕ್ಕಾಡಿ ಕೋಟೆ, ಕಾಸರಗೋಡು ಕೋಟೆ, ಕುಂಡಕುಳಿ ಕೋಟೆ, ಪೊವ್ವಲ್ ಕೋಟೆಗಳು ಕಾಸರಗೋಡಿನಲ್ಲಿಇವೆಯಾದರೂ ಬೇಕಲ ಕೋಟೆಯನ್ನು ಬಿಟ್ಟು ಇನ್ಯಾವುದೇ ಕೋಟೆಗಳ ಅಸ್ತಿತ್ವದ ಅರಿವೂ ಇಲ್ಲದಿರುವುದು ಐತಿಹಾಸಿಕ ತಾಣಗಳತ್ತ ತೋರುವ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.

ಪೊವ್ವಲ್ ಕೋಟೆ:

ಕಾಸರಗೋಡು ಪೇಟೆಯಿಂದ 11 ಕಿ.ಮೀ. ಪೂರ್ವಕ್ಕೆ ಸಾಗಿದರೆ ಪೊವ್ವಲ್ ಕೋಟೆ ಕಾಣ ಸಿಗುತ್ತದೆ. ಇದನ್ನು ಕೇರಳ ಸರಕಾರದ ಪುರಾತತ್ವ ಇಲಾಖೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿನವೀಕರಣಗೊಳಿಸಿತ್ತು. ಪೊದೆಗಳಿಂದ ಆವೃತವಾಗಿ ಪ್ರವಾಸಿಗರಿಗೆ ಕಾಣದ ರೀತಿಯಲ್ಲಿಸಂಪೂರ್ಣ ಮರೆಯಾಗಿದ್ದ ಕೋಟೆಯ ಕಾಡನ್ನು ತೆರವುಗೊಳಿಸಿದುದೇ ಇಲಾಖೆಯ ಬಹು ದೊಡ್ಡ ಸಾಧನೆ.

ಪ್ರವಾಸೋದ್ಯಮದ ಸಾಧ್ಯತೆಗಳು:

ಆಯತಾಕೃತಿಯಲ್ಲಿರುವ ವಿಶಾಲವಾದ ಸ್ಥಳಾವಕಾಶ ಹೊಂದಿರುವ ಪೊವ್ವಲ್ ಕೋಟೆ ಪ್ರಕೃತಿ ರಮಣೀಯ ಪ್ರದೇಶದಲ್ಲಿದೆ. ಕೋಟೆಯಿಂದ ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಈ ಕೋಟೆ ಪರಿಸರದಲ್ಲಿಅಮ್ಯೂಸ್ಮೆಂಟ್ ಪಾರ್ಕ್, ಸಾಯಾಹ್ನ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಸಾಕಷ್ಟು ಪ್ರವಾಸಿ ಯೋಜನೆಗಳನ್ನು ಕೈಗೊಳ್ಳಬಹುದು. ಉತ್ತಮ ನೀರಿನ ಲಭ್ಯತೆ ಇರುವ ತಾಣವೂ ಇದಾಗಿರುವುದರಿಂದ ರೆಸಾರ್ಟ್ ಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸುವಂತಹ ಸಾಕಷ್ಟು ಪ್ರವಾಸಿ ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ.

ಕಾಸರಗೋಡು ಕೋಟೆ:

ಕಾಸರಗೋಡು ಪೋರ್ಟ್ ರಸ್ತೆಯಲ್ಲಿರುವ ಹನುಮಾನ್ ಕ್ಷೇತ್ರಕ್ಕೆ ಹೊಂದಿಕೊಂಡು ಇರುವ ಕಾಸರಗೋಡು ಕೋಟೆ ಯಾವುದೇ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಕಾಸರಗೋಡು ಕೋಟೆ ಎಂಬ ನಾಮಫಲಕ ಇರುವುದೊಂದು ಬಿಟ್ಟರೆ ಕೋಟೆ ಸುತ್ತಮುತ್ತ ಕಾಡುತುಂಬಿ ಕೋಟೆ ಪ್ರವೇಶವೂ ದುರ್ಗಮವಾಗಿದೆ.

ಕುಂಡಂಕುಳಿ ಕೋಟೆ:

ಬಹುತೇಕ ಶಿಥಿಲಗೊಂಡಿರುವ ಕುಂಡಂಕುಳಿ ಕೋಟೆ, ಕಾಸರಗೋಡಿನ ಭವ್ಯ ಇತಿಹಾಸವನ್ನು ಸಾರುತ್ತದೆ. ಕರಾವಳಿ ಪಟ್ಟಣಗಳಿಂದ ಮೈಸೂರು ನಗರದೆಡೆಗಿನ ವ್ಯಾಪಾರ ವಹಿವಾಟುಗಳನ್ನು ಸುಲಭ ಹಾಗೂ ಸುಗಮಗೊಳಿಸುವ ನಿಟ್ಟಿನಲ್ಲಿಈ ಕೋಟೆಯನ್ನು ನಿರ್ಮಿಸಲಾಗಿದೆ ಎಂಬುದು ಇತಿಹಾಸ. ಕುಂಡಂಕುಳಿ ಶಿವ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕುಂಡಂಕುಳಿ ಕೋಟೆ ಶಿಥಿಲಗೊಂಡಿದೆ. ಕೋಟೆಯ ಗೋಡೆಯ ಪಳೆಯುಳಿಕೆಗಳಷ್ಟೇ ಪ್ರವಾಸಿಗರಿಗೆ ಕಾಣಸಿಗುತ್ತಿದೆ.

ಕುಂಡಂಕುಳಿ ಕೇರಳದ ಕಾಸರಗೋಡು ಜಿಲ್ಲೆಯ ಬೇಡಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿಬರುವ ಪ್ರಶಾಂತ, ಪ್ರಕೃತಿ ಸಮೃದ್ಧ ಗ್ರಾಮವಾಗಿದ್ದು, ಐತಿಹಾಸಿಕ ಕುಂಡಂಕುಳಿ ಕೋಟೆ ಮತ್ತು ಪ್ರಾಚೀನ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಹುಲ್ಲುಗಾವಲುಗಳು, ನದಿಗಳು ಮತ್ತು ಜಲಪಾತಗಳು ಇಲ್ಲಿವೆ. ಕುಂಡಂಕುಳಿ ಕೋಟೆಯನ್ನು ನವೀಕರಿಸಿ ಪ್ರವಾಸಿ ತಾಣವಾಗಿ ಮಾರ್ಪಾಡುಗೊಳಿಸಿದಲ್ಲಿಪರಿಶುದ್ಧ ಪ್ರಕೃತಿ ರಮಣೀಯ ತಾಣವಾಗಿ ಪ್ರವಾಸಿಗರ ಕಣ್ಮನ ಸೆಳೆಯಲಿದೆ.

ಕೋಟ್

ಕೇರಳ ಸರಕಾರವು ಹಲವಾರು ಪ್ರವಾಸಿ ಯೋಜನೆಗಳನ್ನು ಮಾಡುತ್ತಿವೆಯಾದರೂ ಯಾವುದನ್ನೂ ಸಮರ್ಪಕವಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ. ಕೇರಳ ಸಾರಿಗೆ ಬಸ್ ಗಳು ರಾಜ್ಯದ ಹಲವಾರು ಪ್ರವಾಸಿ ತಾಣಗಳಿಗೆ ಬಸ್ ಸೌಕರ್ಯಗಳನ್ನು ನೀಡುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಕಾಸರಗೋಡು ಜಿಲ್ಲೆಯ ಕೋಟೆಗಳಿಗೆ ಪ್ರವಾಸ ಹೋಗುವಂತೆ ಬಸ್ ಸೌಲಭ್ಯ ಒದಗಿಸಿ ಐತಿಹಾಸಿಕ ಕೋಟೆಗಳು ಕಣ್ಮರೆಯಾಗದಂತೆ ಸರಕಾರ ಯೋಜನೆ ಮಾಡಬೇಕಾಗಿದೆ. ಇದರಿಂದ ಹಲವಾರು ಇತಿಹಾಸಗಳು ಮತ್ತೆ ಜೀವ ಪಡೆದುಕೊಳ್ಳುವುದರ ಜತೆಗೆ ಹಲವಾರು ಜನಸಾಮಾನ್ಯರಿಗೆ ಸ್ವ ಉದ್ಯೋಗ ಅವಕಾಶಗಳೂ ನೀಡಲಿದೆ.

- ನಾಸರ್ ಚೆರ್ಕಳ, ಸಮಾಜ ಸೇವಕ, ಕಾಸರಗೋಡು

09ಕೆಯುಕುಂಡಂಕುಳಿಕೋಟೆ

09ಕೆಯುಪೊವ್ವಲ್ ಕೋಟೆ

09ಕೆಯುನಾಸರ್