ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಪೂಜೆ

Contributed byrmgvklvy@gmail.com|Vijaya Karnataka

ಹೊಳಲ್ಕೆರೆ ತಾಲ್ಲೂಕಿನ ಕಲ್ಲವ್ವನಾಗತೀಹಳ್ಳಿ ಗ್ರಾಮದಲ್ಲಿ 84.58 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್‌ ಆರೋಗ್ಯ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿತು. ಶಾಸಕ ಡಾ.ಎಂ. ಚಂದ್ರಪ್ಪ ಅವರು ಈ ಯೋಜನೆಯನ್ನು ರೈತರು ಮತ್ತು ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಕೈಗೊಂಡಿದ್ದಾರೆ. ಇದರಿಂದ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕಲಿದೆ. ಹಳೆಯ ಉಪಕೇಂದ್ರಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಈ ಹೊಸ ನಿರ್ಮಾಣವು ಅತ್ಯಗತ್ಯವಾಗಿದೆ.

inauguration of hi tech health centre in rural area

ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಪೂಜೆ

----

ವಿಕ ಸುದ್ದಿಲೋಕ ಹೊಳಲ್ಕೆರೆ

ಕ್ಷೇತ್ರದ ರೈತರು, ಜನಸಾಮಾನ್ಯರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿಹೈಟೆಕ್ ಆರೋಗ್ಯ ಉಪಕೇಂದ್ರ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಧಿಳಿದರು.

ತಾಲೂಕಿನ ಚಿಕ್ಕಜಾಜೂರು ಸಮೀಪದ ಕಲ್ಲವ್ವನಾಗತೀಹಳ್ಳಿ ಗ್ರಾಮದಲ್ಲಿ84.58 ಲಕ್ಷ ರೂ. ವೆಚ್ಚದಲ್ಲಿಆರೋಗ್ಯ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ, ಮಾತನಾಡಿದರು.

ಈಗಾಗಲೇ ತಾಲೂಕಿನ ಬಹುತೇಕ ಆರೋಗ್ಯ ಉಪಕೇಂದ್ರಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಅಲ್ಲಿಎಎನ್ ಎಂಗಳು ವಾಸ ಮಾಡುವುದಿರಲಿ, ಜನರಿಗೆ ಸೇವೆ ನೀಡಲು ಕೂಡ ಆಗುತ್ತಿಲ್ಲ. ಹಳ್ಳಿಗಳಲ್ಲಿವಯಸ್ಸಾದವರು, ನಿರಾಶ್ರಿತರು, ಬಡವರು ಚಿಕಿತ್ಸೆಗೆಂದು ಪಟ್ಟಣಕ್ಕೆ ತೆರಳಬೇಧಿಕಾಧಿಗಿಧಿದೆ. ಇದನ್ನು ಮನಗಂಡು ಹೈಟೆಕ್ ಆರೋಗ್ಯ ಉಪಕೇಂದ್ರ ನಿರ್ಮಿಸುತ್ತಿದ್ದೇನೆ. ಎಎನ್ ಎಂಗಳು ವಾಸಿಸಲು, ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಗ್ರಾಮೀಣ ಜನರಿಗೆ ಉತ್ತಮ ಸೇವೆ ಕೂಡ ಸಿಗಲಿದೆ ಎಂದರು.

ಬಿಜೆಪಿ ಮಾಜಿ ಅಧ್ಯಕ್ಷ ಸಿದ್ದೇಶ್ , ಮುಖಂಡರಾದ ಕುಮಾರಸ್ವಾಮಿ, ಗುರು ಶಾಂತಪ್ಪ, ರಾಜಪ್ಪ, ರವಿಕುಮಾರ್ , ಲೋಕೇಶಪ್ಪ, ಜಗದೀಶ್ , ಕುಬೇರಪ್ಪ, ಗ್ರಾಪಂ ಸದಸ್ಯ ಪರಮೇಶ್ವರನಾಯ್ಕ, ವೈದ್ಯಾಧಿಕಾರಿ ಡಾ. ಸುಹೇಲ…, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಚಂದ್ರಮ್ಮ, ಹಸೀನಾ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.

----

ಫೆ.9.ಹೆಚ….ಎಲ….ಕೆ.1

ಹೊಳಲ್ಕೆರೆಯ ಬಿ ದುರ್ಗ ಹೋಬಳಿಯ ಕಲ್ಲವ್ವನಾಗತಿಹಳ್ಳಿ ಗ್ರಾಮದಲ್ಲಿಆರೋಗ್ಯ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಸೋಮವಾರ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.