ವಿಕ ಸುದ್ದಿಲೋಕ ನಾಗಮಂಗಲ
ಪರಶುರಾಮನ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಪುರಾಣ ಪ್ರಸಿದ್ಧ ಗುಹಾಂತರ ದೇವಾಲಯದ ಪುಣ್ಯ ಕ್ಷೇತ್ರ ತಾಲೂಕಿನ ದೇವಲಾಪುರ ಹೋಬಳಿ ಹಾಲ್ತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮಹಾದ್ವಾರದ ನೂತನ ರಾಜ ಗೋಪುರ ಉದ್ಘಾಟನೆ ಹಾಗೂ ಕುಂಬಾಭಿಷೇಕ ಫೆ.11 ರಿಂದ ಫೆ.13 ರವರೆಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಹಾಲ್ತಿ ಸ್ವರ್ಗಾಶ್ರಮದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ಸೋಮವಾರ ಹಾಲ್ತಿ ಸ್ವರ್ಗಾಶ್ರಮದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ಸುಂದರ ಬೆಟ್ಟಗಳ ಸಾಲಿನ ಗುಹೆಯಲ್ಲಿನೆಲೆಸಿರುವ ಉದ್ಧವ ಲಿಂಗದ ನೆತ್ತಿಯ ಮೇಲೆ ಸದಾ ಗಂಗಾಜಲವು ಹರಿಯುತ್ತಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿ ಶ್ರೀ ಪರಶುರಾಮರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದು ಎಂದು ಇತಿಹಾಸವಿದೆ. ಇಲ್ಲಿಬೆಟ್ಟದ ತಪ್ಪಲಿನಲ್ಲಿಒಂದು ಸುಂದರ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ನಿರ್ಮಾಣವನ್ನು ಹಾಲ್ತಿ ಸ್ವರ್ಗಾಶ್ರಮದ ಶಿವೈಕ್ಯ ಶ್ರೀ ಸ್ವಾಮಿ ಅಮರಾನಂದ ಪರಮಹಂಸರು ಹಾಗೂ ಭೈರವೈಕ್ಯ ಶ್ರೀ ಡಾ.ಬಾಗಂಗಾಧರನಾಥ ಸ್ವಾಮೀಜಿಯವ ಆಶೀರ್ವಾದದಿಂದ ಹಾಗೂ ಪ್ರಸ್ತುತ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯದಲ್ಲಿಮಾಡಲಾಗಿದ್ದು.
ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ನೂತನ 64 ಅಡಿಯ ರಾಜಗೋಪುರದ ಉದ್ಘಾಟನೆ ಹಾಗೂ ಕುಂಬಾಭಿಷೇಕ ಮಹೋತ್ಸವವು ಫೆ.11 ರಿಂದ ಫೆ.13 ರವರೆಗೆ ನಾನಾ ಧಾರ್ಮಿಕ ಕಾರ್ಯ ಹಾಗೂ ಪೂಜಾ ಕಾರ್ಯಗಳು ನಡೆಯಲಿದ್ದು, ಹಾಲ್ತಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಗಣ್ಯರು, ಸಂತರು ಭಾಗವಹಿಸಲಿದ್ದಾರೆ. ದೇವರ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, 65 ದೇವರುಗಳ ಉತ್ಸವ ಸೇರಿದಂತೆ ಅನ್ನಸಂತರ್ಪಣೆ ನಡೆಯಲಿದೆ.
ಫೆ.11 ರಂದು ಗಂಗಾಪೂಜೆ, ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು, ವಾಸ್ತು ಶಾಂತಿ, ವಾಸ್ತು ಹೋಮ ಸೇರಿದಂತೆ ನಾನಾ ಪೂಜೆಗಳು, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯುತ್ತದೆ.
ಫೆ.12 ರಂದು ಗಣಪತಿ, ನವಗ್ರಹ, ದೇವತೆಗಳ ಕಳಶ ಸ್ಥಾಪಮೆ, ಹೋಮ, ಲಕ್ಷಿತ್ರ್ಮೕ ಹೋಮ, ರಾಜಗೋಪುರ ಕಲಶಗಳಿಗೆ ಸಂಪ್ರೇಕ್ಷಣೆ, ಪೂರ್ಣಹುತಿ ಪೂಜೆಗಳು ಜರುಗಲಿದ್ದು, ಸಂಜೆ 4 ಗಂಟೆಗೆ 65 ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆ ಹಾಗೂ ಪೂಜೆ ನೆರೆವೇರಲಿದೆ, ನಂತರ ಸಂಜೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.13 ರಂದು ಶುಕ್ರವಾರ ಬೆಳಗ್ಗೆ ಗಣಪತಿ ಪೂಜೆ, ದುರ್ಗಾ ಹೋಮ ಸೇರಿದಂತೆ ನಾನಾ ಪೂಜಾ ಮಹೋತ್ಸವಗಳು ನಡೆಯಲಿದ್ದು, ಬೆಳಗಿನ ಮೀನ ಲಗ್ನದಲ್ಲಿರಾಜಗೋಪುರದ ಮಹಾಕುಂಬಾಭಿಷೇಕ, ಗೋಪೂಜೆ, ರುದ್ರ ಹೋಮ ನಡೆದು ನಂತರ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಾಜಗೋಪುರ ಉದ್ಘಾಟನೆ ಹಾಗೂ ಕುಂಭಾಭಿಷೇಕ ಬಹಳ ವಿಜೃಂಭಣೆಯಿಂದ ನಡೆಯಲಿದೆ, ನಂತರ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವವು ಕೂಡ ವೈಭವದಿಂದ ನೆರೆವೇರಲಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೃಷಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ, ಮಾಜಿ ಶಾಸಕರಾದ ಸುರೇಶ್ ಗೌಡ, ಸಾ.ರಾ.ಮಹೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾಧು-ಸಂತರು, ಭಕ್ತರು ಮತ್ತು ಗ್ರಾಮಸ್ಥರು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಧಿಧಿಧಿಧಿಧಿ-
ಮಹಾಶಿವರಾತ್ರಿ ಹಬ್ಬ ಪ್ರಯುಕ್ತ ತಾಲೂಕಿನ ಹಾಲ್ತಿ ಸ್ವರ್ಗಾಶ್ರಮ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರದಲ್ಲಿಫೆ.15 ರಿಂದ 22 ರವರೆಗೆ ಗೀತಾ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಭಕ್ತರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸುವರು,
ಧಿಧಿಧಿಧಿ-
ಚಿತ್ರ ಎಂಡಿವೈ 9-1.2: ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕಾರ್ಯದರ್ಶಿ, ಹಾಲ್ತಿ ಸ್ವರ್ಗಾಶ್ರಮ,

