ರೋಗ ತಧಿಡೆಗೆ ಜೀವನಶೈಲಿ ಬದಲಾವಣೆ ಅಧಿಗಧಿತ್ಯ

Contributed byphanumanthu14@gmail.com|Vijaya Karnataka

ಯಾದಗಿರಿಯಲ್ಲಿಅಂತಾರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಯಿತು. ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಪಸ್ಮಾರ ಮೆದುಳಿನ ಕಾಯಿಲೆಯಾಗಿದ್ದು, ಔಷಧಿ ಮತ್ತು ಜೀವನಶೈಲಿ ಬದಲಾವಣೆಯಿಂದ ನಿಯಂತ್ರಿಸಬಹುದು ಎಂದು ತಿಳಿಸಿದರು. ರೋಗ ಲಕ್ಷಣಗಳು, ಕಾರಣಗಳು ಹಾಗೂ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಯಿತು.

lifestyle changes for epilepsy awareness program

9ವೈಡಿಆರ್ 2:

ಯಾದಗಿರಿಯಲ್ಲಿಅಂತಾರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

9ವೈಡಿಆರ್ 2ಎ:

ಯಾದಗಿರಿಯಲ್ಲಿಅಂತಾರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿಪ್ರತಿಜ್ಞೆ ಬೋಧಿಸಲಾಯಿತು.

* ಅಂತಾರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮ

* ಡಿಎಚ್ ಒ ಡಾ.ಮಹೇಶ ಬಿರಾದಾರ ಚಾಲನೆ

ರೋಗ ತಧಿಡೆಗೆ ಜೀವನಶೈಲಿ ಬದಲಾವಣೆ ಅಧಿಗಧಿತ್ಯ

ವಿಕ ಸುದ್ದಿಲೋಕ ಯಾದಗಿರಿ

ಅಪಸ್ಮಾರ ಎಂಬುದು ಮೆದುಳಿನ ದೀರ್ಘಕಾಲದ ನರವೈಜ್ಞಾನಿಕ ಕಾಯಿಲೆಯಾಗಿದ್ದು, ತಲೆಗೆ ಪೆಟ್ಟು, ಮೆದುಳಿನ ಸೋಂಕು ಅಥವಾ ಅನುವಂಶೀಯ ಕಾರಣಗಳಿಂದ ಬರಬಹುದಾಗಿದೆ. ಔಷಧಿ ಮತ್ತು ಜೀವನಶೈಲಿ ಬದಲಾವಣೆಯಿಂದ

ನಿಯಂತ್ರಿಸಬಹುದು ಎಂದು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ಹೇಳಿದರು.

ನಗರದ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿಅಪಸ್ಮಾರ ಪ್ರತಿಜ್ಞೆ, ಕಥೆಗಳನ್ನು ಕ್ರಿಯೆಯಾಗಿ

ಪರಿವರ್ತಿಸುವುದು ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಪಸ್ಮಾರ ಕಾಯಿಲೆ ಎಲ್ಲವಯಸ್ಸಿನವರಲ್ಲಿಕಂಡುಬರುತ್ತದೆ. ಅಸಹಜ ವಿದ್ಯುತ್ ಚಟುವಟಿಕೆಯಿಂದಾಗಿ ಪದೇಪದೆ ಪ್ರಜ್ಞೆ ತಪ್ಪುವಿಕೆ ಅಥವಾ ದೇಹದ ಸೆಳೆತ ಉಂಟಾಗುತ್ತದೆ. ಇಂತಹವರು ಔಷಧಿ ಪಡೆಯುವುದರ ಜಧಿತೆಗೆ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಜಿಲ್ಲಾಎನ್ .ಸಿ.ಡಿ ಕಾರ್ಯಕ್ರಮ ಅಧಿಕಾರಿ ಡಾ.ಪದ್ಮಾನಂದ ಗಾಯಕ್ವಾಡ ಮಾತನಾಡಿ, ಅಪಸ್ಮಾರದ ರೋಗನಿರ್ಣಯವು ರೋಗಗ್ರಸ್ತವಾಗುವಿಕೆಗಳು ಸಂಭವಿಸುವ ಮೊದಲು ಹೊಂದಿದ್ದ ಯಾವುದೇ ಲಕ್ಷಣಗಳು, ವಿಚಿತ್ರ ಭಾವನೆ ಅಥವಾ ಯಾವುದೇ ಇತರ ಎಚ್ಚರಿಕೆ ಚಿಹ್ನೆಗಳ ಮೂಲಕ ಅಪಸ್ಮಾರದ ರೋಗ ನಿರ್ಣಯ ಮಾಡಲಾಗುತ್ತದೆ. ಅಪಸ್ಮಾರದ ರೋಗ ನಿರ್ಣಯವು ರೋಗಗ್ರಸ್ತವಾಗುವಿಕೆಗಳ ಇತಿಹಾಸವನ್ನು ಆಧರಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿಡಿಎಂಒ ಅಧಿಕಾರಿಗಳಾದ ಡಾ.ಮುಬಾಶೀರ್ ಅಹ್ಮದ್ , ಜಿಲ್ಲಾಸರ್ವೇಕ್ಷಣಾಧಿಕಾರಿ ಡಾ.ಎಂ.ಎಸ್ .ಪಾಟೀಲ್ , ಜಿಲ್ಲಾಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಕಟ್ಟಿಮನಿ, ಜಿಲ್ಲಾಆರ್ .ಸಿ.ಎಚ್ ಅಧಿಕಾರಿ ಡಾ.ಮಲ್ಲಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಮೆಡಿಕಲ್ ಆಫಿಸರ್ ಡಾ.ವರ್ಧಮಾನ, ಡಾ.ವಿನುತಾ, ಡಾ.ಮೋಹನ್ ರೆಡ್ಡಿ, ಸ್ಟಾಪ್ ರ್ಸ್ ಸಿದ್ದಾರೂಡ, ಡಾ.ರಶೀದ್ , ತುಳಸಿರಾಮ್ , ಆರೋಗ್ಯ ಇಲಾಖೆಯ ಸಿಬ್ಬಂದಿ, ನಮ್ಮ ಕ್ಲಿನಿಕ್ ಸಿಬ್ಬಂದಿ, ಆಶಾ

ಕಾರ್ಯಕರ್ತೆಯರು ಇಧಿದ್ದರು. ಜಿಲ್ಲಾಸಂಯೋಜಕಿ ನಾಗರತ್ನ ವಂದಿಸಿದರು.

ಬಾಕ್ಸ್

ಅಪಸ್ಮಾರ ರೋಗದ ಕುರಿತು

ಅಪಸ್ಮಾರ ರೋಗಕ್ಕೆ ಮಿದುಳಿನ ಗಾಯ, ತಲೆಗೆ ಗಾಯ ಅಥವಾ ಗಾಯಗಳು, ಮಿದುಳಿನ ಸ್ಥಿತಿಗಳು, ಗಡ್ಡೆಗಳು, ಪಾಶ್ರ್ವವಾಯು ಅಥವಾ ಸೋಂಕುಗಳು ಕಾರಣಗಳಾಗಿದ್ದು, ಅಸ್ವಸ್ಥತೆಗಳು ಅಥವಾ ಮೆದುಳಿನ ವಿರೂಪಗಳು ಬೆಳವಣಿಗೆಯ ಅಂಶಗಳಾಗಿವೆ. ಯಾವಾಗಲೂ ಅಲ್ಲದಿದ್ದರೂ ಅನುವಂಶಿಕವಾಗಿರುತ್ತವೆ. ಅತಿಯಾದ ಒತ್ತಡ, ನಿದ್ರೆಯ ಕೊರತೆ ಮತ್ತು ಅಪರೂಪದ ಸಂದರ್ಭಗಳಲ್ಲಿನಿರ್ದಿಷ್ಟ ಸಂವೇದನಾ ಪ್ರಚೋದಕಗಳು ಇತರ ಅಂಶಗಳಾಗಿವೆ.