ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮನವಿ

Contributed bydevarajanayaka75@gmail.com|Vijaya Karnataka

ಹೊಸಪೇಟೆಯಲ್ಲಿ ನಡೆದ ನಾಗರಿಕ ಬಂದೂಕು ತರಬೇತಿಯಲ್ಲಿ ಹಣ ಪಡೆದು ರಸೀದಿ ನೀಡದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಆರ್‌ಎಸ್ ಪಕ್ಷದ ಜಿಲ್ಲಾ ಸಮಿತಿ ಎಸ್ಪಿ ಎಸ್. ಜಾಹ್ನವಿ ಅವರಿಗೆ ಮನವಿ ಸಲ್ಲಿಸಿದೆ. ಡಿಸೆಂಬರ್‌ನಲ್ಲಿ 120ಕ್ಕೂ ಹೆಚ್ಚು ನಾಗರಿಕರಿಂದ ತರಬೇತಿಗಾಗಿ ತಲಾ 2500 ರೂ. ಪಡೆದಿದ್ದು, ಯಾರಿಗೂ ರಸೀದಿ ನೀಡಿಲ್ಲ. ಭ್ರಷ್ಟಾಚಾರದ ಶಂಕೆ ವ್ಯಕ್ತವಾಗಿದೆ. ಟ್ರಾಫಿಕ್ ಪೊಲೀಸರು ಬಾಡಿ ಕ್ಯಾಮೆರಾ ಧರಿಸದೆ ದಂಡ ವಸೂಲಿ ಮಾಡುತ್ತಿರುವವರ ಮೇಲೂ ಕ್ರಮಕ್ಕೆ ಒತ್ತಾಯಿಸಲಾಗಿದೆ.

petition for action against gun training misconduct

ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮನವಿ

ವಿಕ ಸುದ್ದಿಲೋಕ ವಿಜಯನಗರ(ಹೊಸಪೇಟೆ)

ನಗರದಲ್ಲಿನಾಗರಿಕ ಬಂದೂಕು ತರಬೇತಿ ನೀಡಲಾಗಿದ್ದು ಇದರಲ್ಲಿಭಾಗವಹಿಸಿದವರಿಂದ ತರಬೇತಿ ಹಣ ಪಡೆದು ಪಡೆದ ಹಣಕ್ಕೆ ರಸೀದಿ ನೀಡಿಲ್ಲ, ಆದ್ದರಿಂದ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಕೆಆರ್ ಎಸ್ ಪಕ್ಷದ ಜಿಲ್ಲಾಸಮಿತಿಯಿಂದ ಎಸ್ಪಿ ಎಸ್ . ಜಾಹ್ನವಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕೆಆರ್ ಎಸ್ ಪಕ್ಷದ ಜಿಲ್ಲಾಪ್ರಧಾನ ಕಾರ್ಯದರ್ಶಿ ವರುಣ್ ತೋರಣಗಟ್ಟೆ ಮಾತನಾಡಿ, ‘‘ಡಿಸೆಂಬರ್ ನಲ್ಲಿಹೊಸಪೇಟೆಯಲ್ಲಿನಾಗರಿಕ ಬಂದೂಕು ತರಬೇತಿ ನೀಡಲಾಗಿದ್ದು ಇದರಲ್ಲಿ120 ಕ್ಕೂ ಹೆಚ್ಚು ನಾಗರಿಕರಿಗೆ ಬಂದೂಕು ತರಬೇತಿ ನೀಡಲಾಗಿದ್ದು ಪ್ರತಿಯೊಬ್ಬ ನಾಗರಿಕರಿಂದ 2500 ರೂ. ತರಬೇತಿಗೆ ಪಡೆದಿದ್ದು ಯಾರಿಗೂ ರಸೀದಿ ನೀಡಿಲ್ಲ. ಇದರಿಂದ ಇಲ್ಲಿಭ್ರಷ್ಟಾಚಾರವಾಗಿರುವ ಶಂಕೆಯಿದೆ. ಇದರಿಂದ ರಸೀದಿ ನೀಡದೆ ಇರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಟ್ರಾಫಿಕ್ ಪೊಲೀಸರು ನಗರದಲ್ಲಿಬಾಡಿ ಕ್ಯಾಮೆರಾಗಳನ್ನು ಧರಿಸದೆ ದಂಡವಸೂಲಿ ಮಾಡುತ್ತಿದ್ದಾರೆ ಅಂತವರ ವಿರುದ್ದ ಕ್ರಮ ಜರಗಿಸಬೇಕು,’’ ಎಂದು ಒತ್ತಾಯಿಸಿದರು.

ರಾಜ್ಯ ಎಸ್ಸಿ, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಪ.ಯ. ಗಣೇಶ್ , ತಾಲೂಕು ಅಧ್ಯಕ್ಷ ನಜೀರ್ , ತಾಲೂಕು ಉಪಾಧ್ಯಕ್ಷ ಚಲುವಾದಿ ಆನಂದ, ಲೋಕೇಶ್ , ಓಬಳೇಶ, ಶಿವರಾಮಪ್ಪ, ರಾಜಣ್ಣ, ನಾಗರಾಜ ಇತರರಿದ್ದರು.

ಪೋಟೊ:ಎಚ್ ಪಿಟಿ17ದೇವರಾಜ02: ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳವಂತೆ ಕೆಆರ್ ಎಸ್ ಪಕ್ಷದ ಜಿಲ್ಲಾಘಟಕದಿಂದ ಎಸ್ಪಿ ಎಸ್ .ಜಾಹ್ನವಿ ಅವರಗೆ ಮನವಿ ಸಲ್ಲಿಸಲಾಯಿತು.