(ಬಿಇಒ ವೆಂಕಟೇಶಪ್ಪ)
ವಿಕ ಸುದ್ದಿಲೋಕ ಬಾಗೇಪಲ್ಲಿ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿ ಹೊರಹೊಮ್ಮುವ ವಿಶ್ವಾಸವಿದೆ ಎಂದು ಬಿಇಒ ಎನ್ . ವೆಂಕಟೇಶಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಬಿಇಒ ಕಚೇರಿಯಲ್ಲಿಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮಾ.18ರಿಂದ ಏ.2ರವರೆಗೆ ನಡೆಯುವ ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿಅಗತ್ಯ ಪೂರ್ವ ಸಿದ್ಧತೆ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಈ ಬಾರಿ ಪರೀಕ್ಷೆಯಲ್ಲಿಉತ್ತಮ ಫಲಿತಾಂಶಕ್ಕಾಗಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ಶಿಕ್ಷಕ ಸಮೂಹವೇ ನಿರಂತರ ಪ್ರಯತ್ನ, ಪ್ರತಿ ವಿದ್ಯಾರ್ಥಿಯ ಪೋಷಕರ ಸಹಕಾರ ಸ್ಮರಿಸಬೇಕಿದೆ. ತಾಲೂಕಿನಲ್ಲಿಪ್ರೌಢಶಾಲೆಗಳು, ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಒಳಗೊಂಡಂತೆ ಒಟ್ಟು 2353 ಮಂದಿ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪರೀಕ್ಷೆ ಎದುರಿಸುತ್ತಿದ್ದಾರೆ. ಬಾಲಕರ 1177, ಬಾಲಕಿಯರ 1176 ಒಟ್ಟು 9 ಪರೀಕ್ಷಾ ಕೇಂದ್ರದಲ್ಲಿ2353 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.
ತಾಲೂಕಿನಲ್ಲಿಒಟ್ಟು 9 ಪರೀಕ್ಷೆ ಕೇಂದ್ರಗಳನ್ನು ಗುರುತಿಸಿ ಪ್ರತಿ ಕೊಠಡಿಯಲ್ಲಿಸಿಸಿ ಕ್ಯಾಮೆರಾ ಅಳವಡಿಸಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಮತ್ತು ಭದ್ರತೆಗಾಗಿ ಕ್ರಮ ವಹಿಸಲಾಗಿದೆ. ಪರೀಕ್ಷಾ ಕಾರ್ಯಗಳಿಗೆ ನಾನಾ ವರ್ಗದ ಅಧಿಕಾರಿಗಳನ್ನು ನಿಯೋಜಿಸಿದ್ದು, ಅಧೀಕ್ಷಕರು 9, ಉಪ ಮುಖ್ಯ ಅಧೀಕ್ಷಕರು 1, ಪಶ್ನೆ ಪತ್ರಿಕೆ ಅಭಿರಕ್ಷಕರು 9, ಜಾಗೃತದಳ ಅಧಿಕಾರಿಗಳು 9, ಮೊಬೈಲ್ ಸ್ವಾಧೀನಾಧಿಕಾರಿಗಳು 9 ಹಾಗೂ 150 ಮಂದಿ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರದ ಹೊರ ಆವರಣದಲ್ಲಿಸೆಕ್ಷನ್ 144 ಜಾರಿ, ಜತೆಗೆ ಪೊಲೀಸ್ , ಆರೋಗ್ಯ ಇನ್ನಿತರೆ ಇಲಾಖೆಗಳ ಸಹಯೋಗ ಹೊಂದಿರುವುದಾಗಿ ಅವರು ತಿಳಿಸಿದರು.
ಪರೀಕ್ಷೆ ಕೇಂದ್ರಗಳು : ತಾಲೂಕಿನಲ್ಲಿಒಟ್ಟು 9 ಪರೀಕ್ಷಾ ಕೇಂದ್ರಗಳಿದ್ದು, ಪಟ್ಟಣದಲ್ಲಿ4 ಪರೀಕ್ಷಾ ಕೇಂದ್ರಗಳು ಸರಕಾರಿ ಬಾಲಕರ ಪ್ರೌಢಶಾಲೆ, ಸರಕಾರಿ ಬಾಲಕಿಯರ ಪ್ರೌಢಶಾಲೆ, ಯಂಗ್ ಇಂಡಿಯಾ ಶಾಲೆ, ಬಿಜಿಎಸ್ ಶಾಲೆ, ಸರಕಾರಿ ಪ್ರೌಢಶಾಲೆ ಗೂಳೂರು, ಕೆಪಿಎಸ್ ಶಾಲೆ, ಚೇಳೂರು, ಪ್ರಶಾಂತಿ ಪ್ರೌಢಶಾಲೆ ಚೇಳೂರು, ಸರಕಾರಿ ಪ್ರೌಢಶಾಲೆ ಪಾತಪಾಳ್ಯ, ಸರಕಾರಿ ಪ್ರೌಢಶಾಲೆ ಮಿಟ್ಟೇಮರಿ ಈ ಕೇಂದ್ರದಲ್ಲಿಪರೀಕ್ಷೆ ನಡೆಯಲಿದೆ ಎಂದರು.
17 ಬಿಪಿಎಲ್ 3

