ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

Contributed byshashidonihaklu@gmail.com|Vijaya Karnataka

ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು ಆರಂಭವಾಗಲಿದೆ. ಒಟ್ಟು 37,130 ವಿದ್ಯಾರ್ಥಿಗಳು 131 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲಾಡಳಿತ ಮತ್ತು ಇಲಾಖೆ ಪರೀಕ್ಷೆ ಸುಸೂತ್ರ ನಿರ್ವಹಣೆಗೆ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳು ಯಾವುದೇ ಒತ್ತಡವಿಲ್ಲದೆ ಪರೀಕ್ಷೆ ಬರೆಯಲು ಸೂಕ್ತ ವಾತಾವರಣ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

sslc examination begins opportunity for 37130 students

ಉಭಯ ಶೈಕ್ಷಣಿಕ ಜಿಲ್ಲೆಯಿಂದ 37,130 ವಿದ್ಯಾರ್ಥಿಗಳು ನೋಂದಣಿ

ವಿಕ ಸುದ್ದಿಲೋಕ ತುಮಕೂರು

ಅವಳಿ ಶೈಕ್ಷಣಿಕ ಜಿಲ್ಲೆಗಳಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ನಡೆದಿದೆ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ23,693 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ13,437 ವಿದ್ಯಾರ್ಥಿಗಳು ಸೇರಿದಂತೆ 37,130 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ತುಮಕೂರು, ಕುಣಿಗಲ್ , ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ಸೇರಿದಂತೆ ತುಮಕೂರು ಶೈಕ್ಷಣಿಕ ಜಿಲ್ಲೆಯ 6 ತಾಲೂಕುಗಳಲ್ಲಿ82 ಹಾಗೂ ಮಧುಗಿರಿ, ಕೊರಟಗೆರೆ, ಪಾವಗಡ, ಶಿರಾ ಒಳಗೊಂಡ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ತಾಲೂಕುಗಳಿಂದ 49 ಕೇಂದ್ರಗಳು ಸೇರಿದಂತೆ ಒಟ್ಟು 131 ಕೇಂದ್ರಗಳಲ್ಲಿಪರೀಕ್ಷೆ ನಡೆಯಲಿದೆ.

ಜಿಲ್ಲೆಯಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ ನಿರ್ವಹಣೆಗೆ ಸಕಲ ಸಿದ್ಧತೆಯನ್ನು ಇಲಾಖೆ, ಜಿಲ್ಲಾಡಳಿತ ಮಾಡಿಕೊಂಡಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು ಮತ್ತು ಮಕ್ಕಳಿಗೆ ಮೂಲಸೌಲಭ್ಯಗಳು, ಸೂಕ್ತ ವ್ಯವಸ್ಥೆ, ಪರೀಕ್ಷೆಗೆ ಪೂರಕ ವಾತಾವರಣ ಇರಬೇಕೆಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕೋಟ್ :

ಮುಕ್ತ ಹಾಗೂ ಆರಾಮಾಗಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಪೂರಕ ವಾತಾವರಣವಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮಕ್ಕಳ ಬದುಕಿನ ಮಹತ್ತರ ಘಟ್ಟದ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳೇ ಯಾವುದೇ ಒತ್ತಡ, ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಶುಭವಾಗಲಿ.

- ಶುಭಾ ಕಲ್ಯಾಣ್ , ಜಿಲ್ಲಾಧಿಕಾರಿ, ತುಮಕೂರು

ಫೋಟೋ

17ಟಿಯುಎಂ11 : ಎಸ್ಸೆಸ್ಸೆಲ್ಸಿ ಪ್ರಥಮ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆ ಕ್ಷಣ.

17ಟಿಯುಎಂ12 : ಶುಭಾ ಕಲ್ಯಾಣ್ , ಜಿಲ್ಲಾಧಿಕಾರಿ, ತುಮಕೂರು