ಬ್ಲರ್ಬ್ ) ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಲ್ಲಿಒಂದಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಇಂದಿನಿಂದ ಆರಂಭವಾಗುತ್ತಿದೆ. ಇದು ವಿದ್ಯಾರ್ಥಿಗಳ ಜ್ಞಾನದ ಮಟ್ಟ ಅಳೆಯಲು ಇರುವ ಮಾನದಂಡ ಮಾತ್ರ. ಆದ್ದರಿಂದ ಪರೀಕ್ಷೆ ಬಗ್ಗೆ ಯಾವುದೆ ಭಯ, ಆತಂಕ, ಗೊಂದಲವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಪ್ರಶ್ನೆಪತ್ರಿಕೆಯನ್ನು ಒಮ್ಮೆ ಸಂಪೂರ್ಣ ಓದಿ ನಂತರ ಉತ್ತರ ಬರೆಯಲು ಆರಂಭಿಸಿ. ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಎಲ್ಲವಿದ್ಯಾರ್ಥಿಗಳಿಗೂ ವಿಜಯ ಕರ್ನಾಟಕದಿಂದ ಆಲ್ ದಿ ಬೆಸ್ಟ್ .
ವಿಕ ಇನ್ಪೋ
ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭ
ಜಿಲ್ಲೆಯಲ್ಲಿಮಾ.18ರಿಂದ ಏಪ್ರಿಲ್ 2ರ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸುಗಮ, ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ.
ಒಟ್ಟು ಪರೀಕ್ಷಾ ಕೇಂದ್ರಗಳು - 79
ಶಿವಮೊಗ್ಗ-20, ಭದ್ರಾವತಿ-15, ಶಿಕಾರಿಪುರ-11, ಸೊರಬ-10, ಸಾಗರ-9, ಹೊಸನಗರ-7 ತೀರ್ಥಹಳ್ಳಿ-7
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ - 23,262
ನಾಲ್ಕು ವಿಧದ ವಿದ್ಯಾರ್ಥಿಗಳು- ರೆಗ್ಯುಲರ್ ಫ್ರೆಶ್ , ರೆಗ್ಯುಲರ್ ರಿಪೀಟರ್ , ರೆಗ್ಯುಲರ್ ಪ್ರೈವೇಟ್ , ಪ್ರೈವೇಟ್ ರಿಪೀಟರ್ .
** ಪಾರದರ್ಶಕ ಪರೀಕ್ಷೆ ನಡೆಸಲು ಕ್ರಮ
ಜಿಲ್ಲಾಮಟ್ಟದಲ್ಲಿಮೂರು ವಿಚಕ್ಷಣಾ ದಳ ರಚನೆ
ಡಯಟ್ ನಿಂದ ಜಾಗೃತದಳ ನೇಮಕ.
ಪ್ರತಿಯೊಂದು ಕೇಂದ್ರಕ್ಕೂ ಇತರೆ ಇಲಾಖೆಗಳಿಂದ ವೀಕ್ಷಕರ ನಿಯೋಜನೆ.
ಮುಖ್ಯ ಅಧೀಕ್ಷಕರ ಹೊರತಾಗಿ ಬೇರೆಯವರಿಗೆ ಮೊಬೈಲ್ ಬಳಕೆ ನಿಷಿದ್ಧ
79 ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ನಿಗದಿಪಡಿಸಿದ ಕೇಂದ್ರಗಳಿಗೆ ಉಪ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್ , ಮಾರ್ಗಾಧಿಕಾರಿಗಳು ಹಾಗೂ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳಾಗಿ ಗ್ರೂಪ್ ಬಿ ಅಧಿಕಾರಿಗಳ ನಿಯೋಜನೆ
ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ಪ್ರದೇಶ ನಿಷೇಧಿತ ವಲಯ. ಜೆರಾಕ್ಸ್ , ಸೈಬರ್ ಸೆಂಟರ್ ತೆರೆಯದಂತೆ ಕ್ರಮ.
ಎಲ್ಲಪರೀಕ್ಷಾ ಕೇಂದ್ರಗಳಿಗೂ ಪೊಲೀಸ್ ಭದ್ರತೆ.
ಪರೀಕ್ಷಾ ಗೌಪ್ಯ ವಸ್ತುಗಳನ್ನು ಶೇಖರಿಸಿರುವ ಖಜಾನೆಗಳಿಗೆ ಪೂರ್ಣಾವಧಿಯ ಸಶಸ್ತ್ರ ಪೊಲೀಸ್ ಪಹರೆ ನಿಯೋಜನೆ.
ಜಿಲ್ಲಾಹಂತದಲ್ಲಿಪ್ರತಿ 6 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ 15 ಸಿಬ್ಬಂದಿ ವೆಬ್ ಕಾಸ್ಟಿಂಗ್ ತಂಡ ರಚನೆ.
ದೂರದ ಊರುಗಳಿಂದ ಹಾಜರಾಗುವ ವಿದ್ಯಾರ್ಥಿಗಳಿಗೆ ಶಾಲೆಯಿಂದ ಪರೀಕ್ಷಾ ಕೇಂದ್ರಗಳಿಗೆ ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆ.

