ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ದಶಮಾನೋತ್ಸವ: ಪುಸ್ತಕ, ಕಿಟ್ ವಿತರಣೆ

Contributed byjayaangadidar@gmail.com|Vijaya Karnataka

ಹೊಸಂಗಡಿ ಆದಿಕ್ಷೇತ್ರ ಶ್ರೀ ರಕೇಶ್ವರಿ ದೇವಸ್ಥಾನದಲ್ಲಿ ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ದಶಮಾನೋತ್ಸವ ಆಚರಿಸಲಾಯಿತು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ನೂರು ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಪುಸ್ತಕ ವಿತರಣೆ ಹಾಗೂ ಮೂರು ಯೋಜನೆಗಳ ಭರವಸೆ ಹಸ್ತಾಂತರ ನಡೆಯಿತು. ವಿವಿಧ ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಜರುಗಿತು.

jai shriram samaj seva sansthas decadal celebration with book and kit distribution ceremony

ವಿಕ ಸುದ್ದಿಲೋಕ ಮಂಜೇಶ್ವರ

ಇಲ್ಲಿನ ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ದಶಮಾನೋತ್ಸವ ಕಾರ ್ಯಕ್ರಮ ಹೊಸಂಗಡಿ ಆದಿಕ್ಷೇತ್ರ ಶ್ರೀ ರಕೇಶ್ವರಿ ದೇವಸ್ಥಾನದ ಆದಿ ಕಲಾ ಮಂಟಪದಲ್ಲಿಜರುಗಿತು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.ಉಳ್ಳಾಲ ಕಾಪಿಕ್ಕಾಡ್ ಮಂತ್ರದೇವತೆ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿ ಪ್ರಶಾಂತ್ ಗುರೂಜಿ ಕಾಪಿಕ್ಕಾಡ್ ಉಪಸ್ಥಿತರಿದ್ದರು.ಸಂಸ್ಥೆಯ ಗೌರವ ಅಧ್ಯಕ್ಷ ನ್ಯಾಯವಾದಿ ಕೆ.ಜೆ. ನವೀನ್ ರಾಜ್ ಅಧ್ಯಕ್ಷತೆ ವಹಿಸಿದ್ದರು.

ಕಾರ ್ಯಕ್ರಮದಲ್ಲಿನೂರು ಕುಟುಂಬಗಳಿಗೆ ಕಿಟ್ ವಿತರಣೆ, ಪುಸ್ತಕ ವಿತರಣೆ, ಮೂರು ಯೋಜನೆಗಳ ಭರವಸೆ ಹಸ್ತಾಂತರ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ . ಅಶ್ವಿನಿ, ಮಂಜೇಶ್ವರ ಸರಸ್ವತಿ ಟೀಚರ್ ಮೆಮೋರಿಯಲ್ ಚಾರಿಟೆಬಲ್ ಅಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು, ಜನಜಾಗೃತಿ ವೇದಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕು ಅಧ್ಯಕ್ಷ ಡಾ.ಡಿ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ರಘು ಕಾರ್ನವರ್ , ಶಿವ ಮಾನ್ಯ, ಹರೀಶ್ ಶೆಟ್ಟಿ ಮಾಡ, ಸೇವಾ ಸಂಸ್ಥೆಯ ಅಧ್ಯಕ್ಷ ಕೃಷ್ಣ ಅಟ್ಟೆಗೋಳಿ ಮಾತನಾಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ,ಅನ್ನ ಸಂತರ್ಪಣೆ ನಡೆಯಿತು.

16ಎಂಜೆ 3 ಹೊಸಂಗಡಿ