ಮಸ್ಕತ್ ನಿಂದ ಬಂದು ನಾಪತ್ತೆ, ತುಮಕೂರಲ್ಲಿಪತ್ತೆ!

Contributed byPrabhavati.Hegde@timesgroup.com|Vijaya Karnataka

ಮಸ್ಕತ್‌ನಲ್ಲಿ ಕೆಲಸ ಮಾಡುತ್ತಿದ್ದ ಭಟ್ಕಳದ ಜಾಕೀರ್‌ ಬೇಗ್‌ ಮದುವೆಗಾಗಿ ಚಿನ್ನ ಖರೀದಿಸಲು ಊರಿಗೆ ಬಂದಿದ್ದರು. ಹಣವಿಲ್ಲದ ಕಾರಣ ಮನೆಯವರಿಗೆ ತಿಳಿಸಲು ಹೆದರಿ ನಾಪತ್ತೆಯಾಗಿದ್ದರು. ತಮ್ಮ ಮೊಬೈಲ್‌ ಮಾರಾಟ ಮಾಡಿ ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಜಾಕೀರ್‌ ಬೇಗ್‌ ಅವರನ್ನು ಪತ್ತೆ ಮಾಡಿ ಭಟ್ಕಳಕ್ಕೆ ಕರೆತಂದಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

man missing from muscat found in tumkur what do lawyers and kovid fear

ಮದುವೆಗೆ ಕರೆಸಿದರು, ಹಣವಿಲ್ಲದೆ ಮರ್ಯಾದೆಗೆ ಅಂಜಿದ: ಎಸ್ಪಿ

ವಿಕ ಸುದ್ದಿಲೋಕ ಕಾರವಾರ

ಮದುವೆಗಾಗಿ ಚಿನ್ನಾಭರಣ ಖರೀದಿಗೆ ಭಟ್ಕಳಕ್ಕೆ ಬಂದು ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ತುಮಕೂರಿನಲ್ಲಿಪತ್ತೆಯಾಗಿದ್ದು, ಹಣವಿಲ್ಲದ ಕಾರಣ ಮರ್ಯಾದೆಗೆ ಅಂಜಿ ಕಾಣೆಯಾಗಿದ್ದ ಕುರಿತು ಪೊಲೀಸ್ ತನಿಖೆಯಲ್ಲಿತಿಳಿದು ಬಂದಿದೆ.

ಈ ಕುರಿತು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಭಟ್ಕಳ ಮೂಲದ ಜಾಕೀರ್ ಬೇಗ್ ಕಾಣೆಯಾಗಿದ್ದ ವ್ಯಕ್ತಿ. 2025ರ ಅ.18ರಂದು ಜಾಕೀರ ಕಾಣೆಯಾದ ಬಗ್ಗೆ ಅವರ ಸಹೋದರ ಗಫೂರ್ ಬೇಗ್ ಅವರು ಭಟ್ಕಳ ಠಾಣೆಯಲ್ಲಿದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರಿಂದ ವಿಶೇಷ ಪ್ರಕರಣ ಬೆಳಕಿಗೆ ಬಂದಿದೆ.

ಕಾಣೆಯಾಗಿದ್ದ ಜಾಕೀರ್ ಬೇಗ್ , ಮಸ್ಕತ್ ನಲ್ಲಿಕೆಲಸ ಮಾಡುತ್ತಿದರು. ಹೀಗಾಗಿ ಅವರ ಬಳಿ ಸಾಕಷ್ಟು ಹಣವಿದೆ, ಮದುವೆ ಮಾಡಬೇಕು ಎಂದು ಮನೆಯವರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿಮದುವೆ ತಯಾರಿ ಮಾಡಿಕೊಂಡು ಭಟ್ಕಳದಲ್ಲಿಚಿನ್ನ ಖರೀದಿಸಲು ಅವರನ್ನು ಕರೆಸಿದ್ದರು. ಆದರೆ ಅಸಲಿಯತ್ತೇ ಬೇರೆಯಾಗಿತ್ತು. ಜಾಕೀರ್ ಬಳಿ ಅಷ್ಟು ಹಣವಿರಲಿಲ್ಲ. ಈ ಮಾಹಿತಿಯನ್ನು ಮನೆಯವರಿಗೆ ತಿಳಿಸಲು ಅಂಜಿದ ಜಾಕೀರ್ ಯಾರಿಗೂ ಹೇಳದೇ ಕಾಣೆಯಾಗಿದ್ದರು. ಬಳಿಕ ತನ್ನ ಮೊಬೈಲ್ ಕೂಡ ಮಾರಾಟ ಮಾಡಿ ತುಮಕೂರಿನ ಫುಡ್ ಪಾರ್ಕಿನಲ್ಲಿಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಪೊಲೀಸರು ಅವರನ್ನು ಪತ್ತೆ ಮಾಡಿದ್ದು ಭಟ್ಕಳಕ್ಕೆ ಕರೆ ತಂದಿದ್ದಾರೆ ಎಂದು ಎಸ್ಪಿ ದೀಪನ್ ಮಾಹಿತಿ ನೀಡಿದ್ದಾರೆ.

9ಕೆಆರ್ ಡಬ್ಲೂ2

ದೀಪನ್ ಎಂ.ಎನ್ ಎಸ್ಪಿ, ಉತ್ತರಕನ್ನಡ

------