ವಿಶೇಷಚೇತನ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಉದ್ಯೋಗ ಮೇಳ

Contributed bycrastalp19@gmail.com|Vijaya Karnataka

ಕಾಸರಗೋಡು ಎಲ್‌ಬಿಎಸ್‌ ಕಾಲೇಜಿನಲ್ಲಿ ವರ್ಚುವಲ್‌ ಉದ್ಯೋಗ ಮೇಳ ನಡೆಯಿತು. ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ವಿಶೇಷಚೇತನರಿಗೆ ಸುಮಾರು 685 ಉದ್ಯೋಗಾವಕಾಶಗಳನ್ನು ಒದಗಿಸಲಾಯಿತು. ಟಿಸಿಎಸ್‌ ಅಯೋನ್‌, ಟಾಟಾ ಎಲ್‌್ಕಸ್‌ ಸೇರಿದಂತೆ ಹಲವು ಕಂಪನಿಗಳು ಪಾಲ್ಗೊಂಡಿದ್ದವು. ಶಾಸಕ ಎಂ. ರಾಜಗೋಪಾಲನ್‌ ಮೇಳವನ್ನು ಉದ್ಘಾಟಿಸಿದರು. ಇದು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಯಿತು.

mega virtual job fair providing employment opportunities for national level special needs candidates

ಕಾಸರಗೋಡು: ಕಾಸರಗೋಡು ಎಲ್ ಬಿಎಸ್ ಕಾಲೇಜಿನಲ್ಲಿನಡೆದ ಆನ್ ಲೈನ್ ಉದ್ಯೋಗ ಮೇಳ ದಲ್ಲಿನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಎಸ್ಸೆಧಿಸ್ಸೆಲ್ಸಿ, ಪ್ಲಸ್ ಟು, ಪದವಿ, ಡಿಪ್ಲೊಮಾ, ಪಿಜಿ, ಐಟಿಐ ಮೊದಲಾದ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ದೇಶ ಮತ್ತು ವಿದೇಶಗಳಲ್ಲಿಕೆಲಸ ಮಾಡಲು ಅವಕಾಶಗಳನ್ನು ಒದಗಿಸಲು ವರ್ಚುವಲ್ ಉದ್ಯೋಗ ಮೇಳ ನಡೆಯಿತು. ವಿಶೇಷಚೇತನ ವಿಭಾಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಸುಮಾರು 685 ಉದ್ಯೋಗಾವಕಾಶಗಳನ್ನು ಮೇಳದಲ್ಲಿಒದಗಿಸಲಾಯಿತು.

ಟಿಸಿಎಸ್ ಅಯೋನ್ , ಟಾಟಾ ಎಲ್ ್ಕಸ್ , ಎಲ್ ಆ್ಯಂಡ್ ಟಿ ಕನ್ ಸ್ಟ್ರಕ್ಷನ್ಸ್ , ಅಪೊಲೊ ಟೈರ್ಸ್ , ಅಶೋಕ್ ಲೇಲ್ಯಾಂಡ್ ಮತ್ತು ಚಿಕಿಂಗ್ ಸೇರಿದಂತೆ ಹಲವು ಕಂಪನಿಗಳು ವರ್ಚುವಲ್ ಉದ್ಯೋಗ ಮೇಳದಲ್ಲಿಭಾಗವಹಿಸಿದ್ದವು. ಶಾಸಕ ಎಂ. ರಾಜಗೋಪಾಲನ್ ಮೆಗಾ ವರ್ಚುವಲ್ ಉದ್ಯೋಗ ಮೇಳವನ್ನು ಉದ್ಘಾಟಿಸಿದರು. ಕಯ್ಯೂರು-ಚೀಮೇನಿ ಪಂಚಾಯಿತಿ ಅಧ್ಯಕ್ಷೆ ಪಿ. ವಿ. ಜಾನಕಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಕೇರಳ ಜಿಲ್ಲಾಮಿಶನ್ ಸಂಯೋಜಕ ಕೆ. ಪಿ. ರಂಜಿತ್ ಯೋಜನೆಯನ್ನು ವಿವರಿಸಿದರು. ಪಂಚಾಯಿತಿ ಸದಸ್ಯೆ ಎ. ನಿರ್ಮಲ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎ. ವಿ. ವಿಜಯನ್ , ಎಸ್ ಡಿಪಿಕೆ ನೋಡೆಲ್ ಅಧಿಕಾರಿ ಕೆ. ಜೆ. ರೆಜಿಮೋಲ್ ಮಾತನಾಡಿದರು. ತೃಕರಿಪುರ ಎಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ ಡಾ. ವಿ. ವಿ. ಮಹೇಶ್ ಸ್ವಾಗತಿಸಿಧಿದಧಿರು. ಟ್ಯಾಲೆಂಟ್ ಕ್ಯುರೇಶನ್ ಕಾರ್ಯನಿರ್ವಾಹಕ ಲಿಜಿನ್ ಲಕ್ಷತ್ರ್ಮಣ್ ವಂದಿಸಿದರು. ಎಲ್ ಬಿಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿನಡೆದ ಉದ್ಯೋಗ ಮೇಳಕ್ಕೆ ಡಿ. ಪಿ. ಎಂ. ಕೃಪ್ನ ಸಿ. ನೇತೃತ್ವ ನೀಡಿದರು.

ಚಿತ್ರ: 8ಕೆಎಸ್ ಎಲ್ ಮೇಳ-ಶಾಸಕ ಎಂ.ರಾಜಗೋಪಾಲನ್ ಮೆಗಾ ವರ್ಚುವಲ್ ಉದ್ಯೋಗ ಮೇಳವನ್ನು ಉದ್ಘಾಟಿಸಿದರು.