ವಿಕ ಸುದ್ದಿಲೋಕ ಚಾಮರಾಜನಗರ
ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಭವನದಲ್ಲಿಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಅಂಚೆ ಇಲಾಖೆ ಅಪಘಾತ ವಿಮೆ ನೋಂದಣಿ ಕಾರ ್ಯಕ್ರಮದಲ್ಲಿಸಂಸದ ಸುನೀಲ್ ಬೋಸ್ ಅವರು ಪತ್ರಕರ್ತರಿಗೆ ಅಪಘಾತ ವಿಮೆ ಪಾಲಿಸಿ ಬಾಂಡ್ ವಿತರಿಸಿದರು.
ಇದೇ ವೇಳೆ ಮಾತನಾಡಿದ ಸಂಸದರು,‘‘ಪತ್ರಕರ್ತರು ಸಮಾಜಕ್ಕೆ ಆಗತ್ಯವಾಗಿರುವ ವಸ್ತುನಿಷ್ಠ ವಿಷಯಗಳನ್ನು ಸುದ್ದಿ ಮಾಡಿ ತಿಳಿಸುವ ಕೆಲಸ ಮಾಡಬೇಕಿದೆ. ಪತ್ರಕರ್ತರಿಗೆ ನಿವೇಶನ ಕೊಡಿಸುವ ನಿಟ್ಟಿನಲ್ಲಿಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,’’ ಎಂದರು.
ಕಾರ ್ಯಕ್ರಮದಲ್ಲಿಅಂಚೆ ಇಲಾಖೆಯ ವ್ಯವಸ್ಥಾಪಕ ಮನೋ ಪ್ರದೀಪ್ , ಜಿಲ್ಲಾಕಾರ ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್ .ಎನ್ .ಸಿದ್ದಲಿಂಗಸ್ವಾಮಿ, ಸಂಘದ ಪ್ರಧಾನ ಕಾರ ್ಯದರ್ಶಿ ಲಕ್ಕೂರು ಪ್ರಸಾದ್ , ರಾಜ್ಯ ಸಮಿತಿ ಸದಸ್ಯ ಮಹೇಂದ್ರ, ಖಜಾಂಚಿ ಪುಟ್ಟರಾಜು ಸೇರಿದಂತೆ ಇತರರು ಇದ್ದರು.
==
ಚಾಮರಾಜನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಭವನದಲ್ಲಿನಡೆದ ಕಾರ್ಯಕ್ರಮದಲ್ಲಿಸಂಸದ ಸುನೀಲ್ ಬೋಸ್ ಮಾತನಾಡಿದರು.

