ರಾಗಿ ಮಾರಲು ರೈತರ ನೂಕು ನುಗ್ಗಲು

Contributed bysukesh2365@gmail.com|Vijaya Karnataka

ಜಗಳೂರು ಎಪಿಎಂಸಿ ಯಲ್ಲಿ ರಾಗಿ ಮಾರಾಟಕ್ಕೆ ರೈತರ ನೂಕು ನುಗ್ಗಲು ಉಂಟಾಗಿದೆ. ಕ್ವಿಂಟಲ್‌ಗೆ 4,886 ರೂ. ಬೆಂಬಲ ಬೆಲೆ ನಿಗದಿ ಆಗಿರುವುದರಿಂದ ರೈತರು ಮುಗಿ ಬಿದ್ದಿದ್ದಾರೆ. 50 ಕ್ವಿಂಟಲ್‌ ರಾಗಿ ಖರೀದಿಸುವ ನಿಯಮದಿಂದ ಹೆಚ್ಚಿನ ರೈತರು ಹೆಸರು ನೋಂದಾಯಿಸಿದ್ದಾರೆ. ರಾಗಿ ತುಂಬಿದ ಟ್ರ್ಯಾಕ್ಟರ್‌ಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿವೆ. ಮಳೆ ಬಂದರೆ ರಾಗಿ ಹಾಳಾಗುವ ಭೀತಿ ರೈತರಲ್ಲಿದೆ.

farmers intense struggle for ragi sales tanks in jagaluru

ಕಿಕ್ಕರ್ : ಜಗಳೂರು ಎಪಿಎಂಸಿಯಲ್ಲಿಸಾಲುಗಟ್ಟಿದ ಟ್ರ್ಯಾಕ್ಟರ್ ಗಳು | ಕ್ವಿಂಟಲ್ ಗೆ 4,886 ರೂ. ಬೆಂಬಲ ಬೆಲೆ ನಿಗದಿ

----

ರಾಗಿ ಮಾರಲು ರೈತರ ನೂಕು ನುಗ್ಗಲು

ಎಧಿಸ್ .ಎಂ. ಸೋಧಿಮಧಿನಧಿಗೌಡ ಜಗಳೂರು

ಘ್ಕಿdvಜಛಿdಜಿಠಿಟ್ಟಃಜಞaಜ್ಝಿ.್ಚಟಞ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಮತ್ತು ನಾಗರಿಕ ಸರಬರಾಜು ಖರೀದಿಸುತ್ತಿರುವ ರಾಗಿ ಮಾರಾಟ ಮಾಡಲು ತಾಲೂಕಿನ ರೈತರು ಮುಗಿ ಬಿದ್ದಿದ್ದಾರೆ.

2025-26ನೇ ಸಾಲಿನ ಮುಂಗಾರು ಹಂಗಾಮಿನ ರಾಗಿ ಮಾರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕ್ವಿಂಟಲ್ ಗೆ 4,886 ರೂ. ಬೆಂಬಲ ಬೆಲೆ ನಿಗದಿ ಪಡಿಸಿರುವ ಕಾರಣ, ತಾಲೂಕಿನ ಎಪಿಎಂಸಿಯಲ್ಲಿರಾಗಿ ಮಾರಾಟಕ್ಕೆ ಹೆಚ್ಚಿನ ಪ್ರಮಾಣದ ರೈತರು ಮುಂದಾಗಿದ್ದಾರೆ.

ಒಬ್ಬ ರೈತನಿಂದ 50 ಕ್ವಿಂಟಲ್ ರಾಗಿ ಖರೀದಿಸುವುದಾಗಿ ನಿಯಮ ರೂಪಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಫೆ.16ರಂದು ಪಟ್ಟಣದ ಎಪಿಎಂಸಿಯಲ್ಲಿಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ನೇರವಾಗಿ ರಾಗಿ ಖರೀದಿಗೆ ಮುಂದಾಗಿದ್ದು, 3149 ರೈತರಿಂದ 89,441 ಕ್ವಿಂಟಲ್ ರಾಗಿ ಖರೀದಿ ಆರಂಭವಾಗಿದೆ.

ಕ್ಯೂ ನಿಂತ ಟ್ರ್ಯಾಕ್ಟರ್ ಗಳು:

ಏಕಾ ಏಕಿ ರಾಗಿ ಮಾರಾಟ ಮಾಡಲು ಸೋಮವಾರ ರೈತರು ಬಂದಿದ್ದಾರೆ. ಅಧಿಕಾರಿಗಳು ಹೇಳಿದ ದಿನಾಂಕದಂದು ರಾಗಿ ತಾರದೇ ಮುಂಗಡವಾಗಿ ತಂದಿರುವುದರಿಂದ ಎಪಿಎಂಸಿಯಲ್ಲಿಕಿ.ಮೀ.ಗಟ್ಟಲೆ ರಾಗಿ ತುಂಬಿದ ಟ್ರ್ಯಾಕ್ಟರ್ ಗಳು ಕ್ಯೂ ನಿಂತಿವೆ. ಹೀಗಾಗಿ ರೈತರು ರಾಗಿ ಬಿಟ್ಟು ಮನೆಗೂ ಹೋಗುವಂತಿಲ್ಲ. ‘ಮಳೆ ಬಂದರೆ ರಾಗಿ ನೆನೆಯುತ್ತವೆ. ಹೀಗಾಗಿ ಬೇಗ ಮಾರಾಟ ಮಾಡಿದರೆ ಸಾಕು. ಈಗಾಗಲೇ ಸಮಯ ಮೀರಿದಿ. ಮನೆಯಲ್ಲಿಹೆಗ್ಗಣ, ಇಲಿ ಕಾಟ. ಬೇಗ ಮಾರಾಟ ಮಾಡೋಣವೆಂದು ಬಂದಿದ್ದೇವೆ’ ಎಂದು ರೈತರು ವಿಕಗೆ ಪ್ರತಿಕ್ರಿಯೆ ನೀಡಿದರು.

-----

ಬಾಕ್ಸ್ ...

ಫ್ರೂಟ್ ತಂತ್ರಾಂಶ ದುರ್ಬಳಕೆ

ನಿಜ ರೈತರ ಮಧ್ಯೆ ಹೊರಗಡೆಯಿಂದ ರಾಗಿ ಖರೀದಿಸಿ ಎಪಿಎಂಸಿಯಲ್ಲಿರಾಗಿ ಮಾರಾಟ ಮಾಡುವವರು ಇರುವ ಬಗ್ಗೆ ರೈತರೇ ಶಂಕೆ ವ್ಯಕ್ತಪಡಿಸಿದ್ದಾರೆ. ಅನೇಕ ಮಧ್ಯವರ್ತಿಗಳು ರೈತರಿಂದ 3400 ಅಥವಾ 3500 ರೂ.ಗೆ ಕ್ವಿಂಟಲ್ ರಾಗಿ ಖರೀದಿಸುತ್ತಿದ್ದಾರೆ. ಅವರಿಗೆ ಪರಿಚಯವಿರುವ ರೈತರ ಫ್ರೂಟ್ ತಂತ್ರಾಂಶ ಪಡೆದು ಎಪಿಎಂಸಿಯಲ್ಲಿನೋಂದಾಯಿಸಿಕೊಂಡು, ಹಣ ಅವರ ಖಾತೆಗೆ ಬಂದ ನಂತರ ಅವರಿಗೆ ಇಂತಿಷ್ಟು ಹಣ ಕೊಟ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ. ವರ್ತಕರು ಮತ್ತು ಅಧಿಕಾರಿಗಳ ಮಧ್ಯೆ ಅಂಡರ್ ಸ್ಟಾತ್ರ್ಯಂಡಿಗ್ ನಡೆದಿದೆಯಾ ಎಂದು ಅನುಮಾನ ಮೂಡಿದೆ ಎನ್ನುತ್ತಾರೆ ರೈತರು.

----

ಮಧ್ಯವರ್ತಿಗಳ ಕಾಟ ತಪ್ಪಿಸಿ

‘2023ರಲ್ಲಿರಾಗಿ ಖರೀದಿಯಲ್ಲಾದ ಅವ್ಯವಹಾರ ಇಡೀ ರಾಜ್ಯಕ್ಕೆ ಜಗಳೂರು ಹೆಸರಾಗಿತ್ತು. ಜಿಲ್ಲಾಧಿಕಾರಿ, ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಅಷ್ಟೇ ಅಲ್ಲಅನೇಕ ಮಧ್ಯವರ್ತಿಗಳು ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿವಿತರಿಸುವ ರಾಗಿಯನ್ನು ಜನರಿಂದ ಖರೀದಿಸಿ ಮತ್ತೆ ಎಪಿಎಂಸಿಗೆ ಬಿಟ್ಟು ಹಣ ಪಡೆಯುತ್ತಿದ್ದಾರೆ. ನಿಯಮಗಳು ಪಾಲನೆಯಾಗುತ್ತಿಲ್ಲ, ಕೂಲಂಕಷವಾಗಿ ತನಿಖೆಯಾಗಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.

-----

2ಜೆಎಲ್ ಆರ್ 3ಎ

ಜಗಳೂರು ಪಟ್ಟಣದ ಎಪಿಎಂಸಿಯಲ್ಲಿರಾಗಿ ಮಾರಾಟ ಮಾಡಲು ನಿಂತಿರುವ ಟ್ರ್ಯಾಕ್ಟರ್ ಗಳು.