ಚಿತ್ತಾಪುರ ಅಭಿವೃದ್ಧಿಗೆ ರಾಜ್ಯದಲ್ಲೇ ಹೆಚ್ಚು ಅನುದಾನ

Contributed byjagadev.j2@gmail.com|Vijaya Karnataka

ಚಿತ್ತಾಪುರ ಅಭಿವೃದ್ಧಿಗೆ ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ತರಲಾಗಿದೆ. ಅಧಿಕಾರಿಗಳು ಕಳಪೆ ಕಾಮಗಾರಿ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸೂಚಿಸಲಾಗಿದೆ. ಮಾರ್ಚ್ ೮ ರಂದು ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಚಿತ್ತಾಪುರಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಿದ್ದಾರೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.

high funding for chittapur ministers strict instructions

3ಸಿಟಿಪಿಆರ್ 1:

ಚಿತ್ತಾಪುರದ ಪ್ರಜಾಸೌಧ ಸಭಾಗಂಣದಲ್ಲಿಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿವರು ಮಂಗಳವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

* ಚಿತ್ತಾಪುರದಲ್ಲಿಸಭೆ | ಸಚಿವ ಪ್ರಿಯಾಂಕ್ ಖರ್ಗೆ ಅಧಿಧಿಧಿಕಾಧಿರಿಧಿಗಧಿಳಿಧಿಗೆ ಸೂಧಿಚಧಿನೆ| ಮದ್ಯ ಅಕ್ರಮ ಮಾರಾಟಕ್ಕೆ ಬ್ರೇಕ್ ಹಾಕಲು ತಾಕೀತು

ಚಿತ್ತಾಪುರ ಅಭಿವೃದ್ಧಿಗೆ ರಾಜ್ಯದಲ್ಲೇ ಹೆಚ್ಚು ಅನುದಾನ

ವಿಕ ಸುದ್ದಿಲೋಕ ಚಿತ್ತಾಪುರ

ಹಳ್ಳಿಗಳಲ್ಲಿಕೆಲವು ಕಿಧಿರಾಣಿ ಅಂಗಡಿಗಳಲ್ಲಿಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದಾರೆಂದು ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮುಲಾಜಿಲ್ಲದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ.

ಇಲ್ಲಿನ ಪ್ರಜಾಸೌಧ ಸಭಾಗಂಣದಲ್ಲಿಮಂಗಳವಾರ ನಾನಾ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿಅಬಕಾರಿ ಇಲಾಖೆಯವರು ಟಾರ್ಗೆಟ್ ಕೊಡುತ್ತಿರುವುದನ್ನು ಕೈಬಿಡಬೇಕು. ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮತ್ತು ಕೆಲವು ಕಡೆ ಡಾಬಾಗಳು ಸಮಯ ಮೀರಿ ಮಧ್ಯರಾತ್ರಿ 2:30ರತನಕ ತೆರೆದಿರುತ್ತವೆ ಎನ್ನುವುದು ಕೇಳಿಬರುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಕ್ಷೇತ್ರದ ಜನರ ಆಶೀರ್ವಾದಿಂದ ಸಧಿರಧಿಕಾಧಿರಧಿದಲ್ಲಿಸಚಿವನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಮಾನವ ಸಂಪನ್ಮೂಲ ಮತ್ತು ಆರ್ಥಿಕ ಸಂಪನ್ಮೂಲದ ಯಾವುದೇ ಕೊರತೆ ಇಲ್ಲ, ಅಧಿಕಾರಿಗಳ ಇಚ್ಛಾ ಶಕ್ತಿಯ ಕೊರತೆ ಇದೆ. ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸಿ ಬೆಧಿಳಗ್ಗೆ 9ರಿಂದ 5ಗಂಟೆಯತನಕ ನೌಕರಿ ಮಾಡಿ ಹೋಗುವುದಲ್ಲ. ತಮ್ಮ ಇಲಾಖೆಯ ಅಭಿವೃದ್ಧಿಗಾಗಿ ನೂತನ ಯೋಜನೆಗಳನ್ನು ಸಿದ್ಧಪಡಿಸುವ ಸಂಪೂರ್ಣ ಜವಾಬ್ದಾರಿ ಅವರ ಮೇಲಿರುತ್ತದೆ. ಕುಡಿವ ನೀರು, ರಸ್ತೆ, ಚರಂಡಿ ಸೇರಿ ಮೂಲ ಬೇಡಿಕೆಗಳಿಗಾಗಿ ರಾಜ್ಯದಲ್ಲಿಯೇ ಹೆಚ್ಚು ಅನುದಾನ ತಂದಿದ್ದೇನೆ, ಕಳಪೆ ಕಾಮಗಾರಿಯಾಗದಂತೆ ಅಧಿಕಾರಿಗಳು ನಿಗಾ ವಹಿಸಿ ಕೆಲಸ ಮಾಡಿಸಬೇಕು ಎಂದು ಸೂಧಿಚನೆ ನೀಧಿಡಿಧಿದಧಿರು.

ತಾಲೂಕಿನಲ್ಲಿಪ್ರಗತಿ ಪಥ ಮತ್ತು ಕಲ್ಯಾಣ ಪಥದ ಯೋಜನೆಯಲ್ಲಿ110 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಬೇಡಿಕೆ ಇತ್ತು, ಸದ್ಯ 70 ಕಿ,ಮೀ ರಸ್ತೆ ನಿರ್ಮಾಣ ಕಾಮಗಾರಿಯಾಗಿದೆ. ಲೋಕಪಯೋಗಿ, ಶಿಕ್ಷಣ, ಕುಡಿವ ನೀರು, ಸಣ್ಣ ನೀರಾವರಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಆರೋಗ್ಯ, ಸಮಾಜ ಕಲ್ಯಾಣ ಸೇರಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಮಾಹಿತಿ ಪಡೆದರು.

* ಓವರ್ ಲೋಡ ವಾಹನಗಳಿಂದ ರಸ್ತೆ ಹಾಳು:

ರಸ್ತೆ ನಿರ್ಮಾಣಕ್ಕಾಗಿ ಸಾವಿರಾರು ಕೋಟ್ಟಿಗಟ್ಟಲೇ ಅನುದಾನ ತಂದು ರಸ್ತೆ ನಿರ್ಮಾಣ ಮಾಡಿದ್ದೇನೆ, ಮುರುಮ್ ಮತ್ತು ಮರುಳು ಗಾಡಿಗಳು ನಿತ್ಯ 20ರಿಂದ 30 ಟನ್ ಓವರ್ ಲೋಡ್ ಮಾಡಿಕೊಂಡು ಸಂಚರಿಸುವ ಟ್ರಕ್ , ವಾಹನಗಳಿಂದ ರಸ್ತೆಗಳು ಹಾಳಾಗುತ್ತಿವೆ. ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿವಿಧಾನಸಭೆಯ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ತೊಗರಿ ಮಂಡಳಿ ಅಧ್ಯಕ್ಷ ಮಹೇಮೂದ್ ಸಾಹೇಬ್ , ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ , ಜಿಪಂ ಸಿಇಒ ಭವರಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್ ಪಿ ಮಹೇಶ ಮೇಘಣ್ಣನವರ್ , ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಧಿಹಧಿಸೀಧಿಲ್ದಾರ್ ನಾಗಯ್ಯ ಹಿರೇಮಠ ಸೇರಿ ನಾನಾ ಇಲಾಖೆಯ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

-ಬಾಕ್ಸ್ -

* ಮಾ.8ಕ್ಕೆ ಎಐಸಿಸಿ ಅಧ್ಯಕ್ಷ, ಸಿಎಂ ಆಗಮನ

ಮಾ.8ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ಸಿದ್ದರಾಮಯ್ಯ, ಡಿಧಿಸಿಎಂ ಡಿ.ಕೆ.ಶಿವಕುಮಾರ ಸೇರಿ ನಾನಾ ಮಂತ್ರಿಗಳು ಚಿತ್ತಾಪುರಕ್ಕೆ ಆಗಮಿಸಲಿದ್ದಾರೆ. ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಿ. ಸಾವಿರ ಕೋಟಿ ವೆಚ್ಚದಲ್ಲಿನಾನಾ ಕಾಮಗಾರಿಗಳ ಅಡಿಗಲ್ಲುಮತ್ತು 85 ಕೋಟಿ ವೆಚ್ಚದಲ್ಲಿನಾನಾ ಕಾಮಾಗಾರಿ ಉದ್ಘಾಟನೆ ಮಾಡಲಿದ್ದಾರೆ.