ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ | ಕೃಷಿ ಅಧಿಕಾರಿಗೆ ಮನವಿ ಸಲ್ಲಿಕೆ
ತೊಗರಿ ಬೆಳೆ ವಿಮೆ ಪರಿಹಾರ ನೀಡಿ
ವಿಕ ಸುದ್ದಿಲೋಕ ದೇವರಹಿಪ್ಪರಗಿ
ತೊಗರಿ ಬೆಳೆಗೆ ವಿಮೆ ತುಂಬಿದ ತಾಲೂಕಿನ ರೈತರಿಗೆ ಕೂಡಲೇ ವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೃಷಿ ಅಧಿಕಾರಿ ಶರಣಗೌಡ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಹಾಗೂ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ‘‘ಅಕಾಲಿಕ ಮಳೆ ಹಾಗೂ ಹವಾಮಾನದಲ್ಲಿಏರುಪೇರು ಹೀಗೆ ಹಲವಾರು ಕಾರಣಗಳಿಂದ ಈ ಬಾರಿ ಶೇ. 90ರಷ್ಟು ತೊಗರಿ ಬೆಳೆ ಹಾಳಾಗಿದ್ದು, ರೈತರಿಗೆ ನಷ್ಟವಾಗಿದೆ. ಕಲಬುರಗಿ ಜಿಲ್ಲೆಯ ರೈತರಿಗೆ ವಿಮೆ ಪರಿಹಾರ ಜಮೆ ಆಗಿದೆ. ಆದರೆ, ವಿಜಯಪುರ ಜಿಲ್ಲೆಯ ರೈತರಿಗೆ ವಿಮೆ ಕಂಪನಿಯಿಂದ ಇಲ್ಲಿವರೆಗೂ ಪರಿಹಾರ ಜಮೆ ಆಗಿಲ್ಲ. ರೈತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಓರಿಯೆಂಟಲ್ ವಿಮಾ ಕಂಪನಿ ಅಧಿಕಾರಿಗಳಿಗೆ ಆಗ್ರಹಿಸಿದರು.
ಮುಖಂಡರಾದ ಚಂದ್ರಕಾಂತ ಪ್ಯಾಟಿ, ಸಂಪತ್ ಜಮಾದಾರ, ಶಾಖೀರಾ ಹೆಬ್ಬಾಳ, ಚನ್ನಮ್ಮ ಮೇತ್ರಿ, ಸುನಂದಾ ಸೊನ್ನಳ್ಳಿ, ಮಲ್ಲನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಕಾಶಿನಾಥ ಬಿರಾದಾರ, ಚಂದ್ರಕಾಂತ ಕುಂಬಾರ, ಲಕ್ಕಪ್ಪ ಹೂಗಾರ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಫೋಟೊ
03ಡಿಎಚಪಿ02
ತೊಗರಿ ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ದೇವರಹಿಪ್ಪರಗಿಯಲ್ಲಿರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.

