ಮಾದರ ಚನ್ನಯ್ಯ ಸೇವಾ ಸಮಿತಿಗೆ ಆಯ್ಕೆ
ವಿಕ ಸುದ್ದಿಲೋಕ ಇಳಕಲ್
ಶಿವಶರಣ ಮಾದರ ಚನ್ನಯ್ಯ ಸೇವಾ ಸಮಿತಿಯ ಇಳಕಲ್ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಲಕ್ಷ್ಮಣ ಚಂದ್ರಗಿರಿ ತಿಳಿಸಿದ್ದಾರೆ.
ಇಳಕಲ್ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಮಾದರ, ಉಪಾಧ್ಯಕ್ಷರಾಗಿ ಆನಂದ ತುಂಬದ, ಮುತ್ತಪ್ಪ ಮಲಗಿಹಾಳ, ಸಿದ್ದಲಿಂಗಪ್ಪ ಕ್ಯಾದಿಗುಪ್ಪ, ಸುರೇಶ ಮಾದರ, ಬಸವರಾಜ ಮಾದರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ದೇವರಾಜ ಹೊಸಮನಿ, ಮೌನೇಶ ಮಾದರ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಬುಮಪ್ಪ ಮಾದರ, ಹಣಮಂತ ಮಾದರ, ಮಹಾಂತೇಶ ಮಾಳ, ಗಣೇಶ ಮಾದರ, ಉದಯಕುಮಾರ ಮಾದರ, ದುರಗೇಶ ಹರಿಜನ ಹಾಗೂ ಖಜಾಂಚಿಯಾಗಿ ಮೂಡಬಸು ಮಲಗಿಹಾಳ ಅವರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿಜಿಲ್ಲಾಸದಸ್ಯರಾದ ಚಿದಾನಂದ ಹುಬ್ಬಳ್ಳಿ, ಸಿದ್ದಪ್ಪ ಮಾದರ, ಸೀತಿಮಾ ವಜ್ಜಲ್ , ಕಿರಣ ಹೊಸಮನಿ, ಎಚ್ .ಎಂ. ಹಾಗೇದಾಳ, ಹನುಮಂತ ಪೂಜಾರ ಮತ್ತಿತರರು ಭಾಗವಹಿಸಿದ್ದರು ಎಂದು ಲಕ್ಷ್ಮಣ ಚಂದ್ರಗಿರಿ ತಿಳಿಸಿದ್ದಾರೆ.
(ಫೋಟೊ:3-ಐಎಲ್ಕೆ-3)-
ಮಾದರ ಚನ್ನಯ್ಯ ಸೇವಾ ಸಮಿತಿ ಇಳಕಲ್ ತಾಲೂಕು ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು.

