*ಚಿತ್ರ:3ಜಿಎಲ್ ಬಿ60*
ಚಂದ್ರಗ್ರಹಣ ಮುಕ್ತಾಯ ನಂತರ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿಅರ್ಚಕರಾದ ಗುಂಡಾಚಾರ್ಯ ನರಿಬೋಳ ನೇತೃತ್ವದಲ್ಲಿಹನುಮಾನ ದೇವರಿಗೆ ವಿಶೇಷ ಪೂಜೆ ನಡೆಯಿತು. ಭಕ್ತರು ದೇವರ ದರ್ಶನ ಪಡೆದರು.
**
*ಚಿತ್ರ:3ಜಿಎಲ್ ಬಿ62*
ಚಂದ್ರಗ್ರಹಣ ಮುಕ್ತಾಯ ನಂತರ ಶರಣಬಸವೇಶ್ವರರ ದರ್ಶನ ಪಡೆಯುತ್ತಿರುವ ಭಕ್ತರು.
**
*ಚಿತ್ರ:3ಜಿಎಲ್ ಬಿ62*
ಶರಣಬಸವೇಶ್ವರರ ದೇವಸ್ಥಾನ ಸ್ವಚ್ಛಗೊಳಿಸುತ್ತಿರುವುದು.
**
ನಗರದ ವಿವಿಧ ದೇವಸ್ಥಾನಗಳ ಶುದ್ಧೀಕರಣ | ದೇವರಿಗೆ ವಿಶೇಷ ಪೂಜೆ ಅಲಂಕಾರ (ಕಿಕ್ಕರ್ )
ಚಂದ್ರಗ್ರಹಣ ಮುಕ್ತಾಯ, ಭಕ್ತರಿಂದ ದೇವರ ದರ್ಶನ
ವಿಕ ಸುದ್ದಿಲೋಕ ಕಲಬುರಗಿ
ಚಂದ್ರಗ್ರಹಣ ಪ್ರಯುಕ್ತ ಮಂಗಳವಾರ ನಗರದ ಎಲ್ಲದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಸಂಜೆ ಗ್ರಹಣ ಮುಕ್ತಾಯಗೊಂಡ ಬಳಿಕ ಎಲ್ಲದೇವಸ್ಥಾನಗಳಲ್ಲಿಶುದ್ಧೀಕರಣಗೊಳಿಸಿ ಪುನಃ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಯಿತು.
ಕೆಲವು ದೇವಾಲಯಗಳಲ್ಲಿಗ್ರಹಣದ ಸಂದರ್ಭದಲ್ಲಿಗ್ರಹಣ ಮುಕ್ತಿಗಾಗಿ ವಿಶೇಷ ಪೂಜೆ, ಜಪ, ಪಾರಾಯಣ, ನವಗ್ರಹ ಸ್ತೊ್ರೕತ್ರ ಸೇರಿ ನಾನಾ ಕಾರ್ಯಕ್ರಮಗಳನ್ನು ಮಾಡಲಾಯಿತು. ಸಂಜೆ ಗ್ರಹಣ ಮುಗಿದ ನಂತರ ನಗರದ ಪ್ರಸಿದ್ಧ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನ, ಬ್ರಹ್ಮಪುರದ ಉತ್ತರಾದಿ ಮಠ ಸೇರಿ ಅನೇಕ ದೇವಾಲಯಗಳನ್ನು ಶುದ್ಧೀಕರಣಗೊಳಿಸಿ ವಿಶೇಷ ಪೂಜೆ ನಡೆಸಲಾಯಿತು.
**ಎಲ್ಲೇಲ್ಲಿವಿಶೇಷ ಪೂಜೆ: ನಗರದ ಪ್ರಶಾಂತ ನಗರದ ಹನುಮಾನ ದೇವಸ್ಥಾನ, ಜೇವರ್ಗಿ ಕಾಲೊನಿಯ ರಾಘವೇಂದ್ರ ಸ್ವಾಮಿ ಮಠ, ಗಂಗಾ ನಗರದಲ್ಲಿರುವ ಲಕ್ಷ್ಮೇನರಸಿಂಹ ಸ್ವಾಮಿ ದೇವಸ್ಥಾನ, ಬಿದ್ದಾಪುರ ಕಾಲೊನಿಯ ರಾಘವೇಂದ್ರ ಮಠ, ಶ್ರೀರಾಮ ಮಂದಿರ, ವಿದ್ಯಾನಗರದ ಶ್ರೀಕೃಷ್ಣ ದೇವಸ್ಥಾನ, ಹೊಸ ಜೇವರ್ಗಿ ಕಾಲೊನಿಯ ಅಂಬಾಭವಾನಿ ದೇವಸ್ಥಾನ, ಗೋದುತಾಯಿ ನಗರದ ಶಿವ ಮಂದಿರ, ಮಾಯಾ ಮಂದಿರ, ರಾಮತೀರ್ಥ ದೇವಸ್ಥಾನ, ಸಂಘತರಾಸವಾಡಿಯ ವೀರಭದ್ರ ದೇವಸ್ಥಾನ, ಕೋರಂಟಿ ಹನುಮಾನ ದೇವಸ್ಥಾನ, ಸೂಪರ್ ಮಾರ್ಕೆಟ್ ನಲ್ಲಿರವ ದತ್ತ ಮಂದಿರ, ಕೆರೆ ಯಲ್ಲಮ್ಮದೇವಿ, ಗಣೇಶ ಮಂದಿರ, ಸಾಯಿ ಮಂದಿರ, ವೈಷ್ಣವಿ ದೇವಿ ಮಂದಿರ, ಮಲ್ಲಿಕಾರ್ಜುನ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ ಪುನಃ ದೇವರ ವಿಗ್ರಹಗಳಿಗೆ ಅಭಿಷೇಕ, ಪೂಜೆ, ವಿಶೇಷ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಇದೇ ಸಂದರ್ಭದಲ್ಲಿಕೆಲವು ದೇವಸ್ಥಾನಗಳಲ್ಲಿಭಜನೆ ಕೂಡ ಮಾಡಲಾಯಿತು.
*ಬಾಕ್ಸ್ *
ಮನೆಗಳಲ್ಲಿನ ದೇವರಿಗೆ ಪೂಜೆ
ಚಂದ್ರಗ್ರಹಣ ಸಂದರ್ಭದಲ್ಲಿಜನರು ತಮ್ಮ ಮನೆಗಳಲ್ಲಿಗ್ರಹಣ ಮುಗಿಯುವರೆಗೂ ಉಪವಾಸ ಕೈಗೊಂಡಿದ್ದರು. ಗ್ರಹಣ ಮುಕ್ತಾಯ ನಂತರ ತಮ್ಮ ಮನೆಗಳನ್ನು ಶುಚಿಗೊಳಿಸಿ, ಸ್ನಾನ ಮಾಡಿದ ನಂತರ ಮನೆಯಲ್ಲಿರುವ ದೇವರುಗಳಿಗೆ ಪೂಜೆ ಮಾಡಿದರು. ನಂತರ ನಗರದ ವಿವಿಧ ದೇವಸ್ಥಾನಗಳಿಗೆ ಹೋಗಿ ದರ್ಶನ ಪಡೆದ ಬಳಿಕ ಉಪಹಾರ ಸೇವಿಸಿದರು.

