ದಲಿತರಿಗೆ ನ್ಯಾಯ, ಬಹಿರಂಗಪಡಿಸಲು ಆಗ್ರಹ

Contributed byrudraiah4084@gmail.com|Vijaya Karnataka

ಬಿಜೆಪಿ ಮುಖಂಡ ಕೆ.ಪಿ.ವೆಂಕಟೇಶ್‌ ಅವರು ಶಾಸಕ ಎಚ್‌.ಡಿ.ತಮ್ಮಯ್ಯ ವಿರುದ್ಧ ದಲಿತರಿಗೆ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್‌ ಮುಖಂಡರು ಪ್ರತಿಕ್ರಿಯಿಸಿ, ವೆಂಕಟೇಶ್‌ ಅವರ ಹಿಂದಿನ ನಿಲುವುಗಳನ್ನು ಪ್ರಶ್ನಿಸಿದರು. ತಮ್ಮ ಸ್ವಾರ್ಥಕ್ಕಾಗಿ ದಲಿತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಪಕ್ಷವು ತೊಂದರೆ ನೀಡಿದ ಮುಖಂಡರನ್ನು ಉಚ್ಛಾಟನೆ ಮಾಡಿದೆ ಎಂದು ತಿಳಿಸಿದರು.

bjp dalit leaders misusing their position for political gain fight for justice

ದಲಿತರಿಗೆ ನ್ಯಾಯ, ಬಹಿರಂಗಪಡಿಸಲು ಆಗ್ರಹ

ವಿಕ ಸುದ್ದಿಲೋಕ ಚಿಕ್ಕಮಗಳೂರು

ಶಾಸಕ ಎಚ್ .ಡಿ.ತಮ್ಮಯ್ಯ ಅವರಿಂದ ದಲಿತರಿಗೆ ರಕ್ಷಣೆ ಇಲ್ಲಎಂದು ಆರೋಪಿಸಿರುವ ಬಿಜೆಪಿ ಎಸ್ಸಿ ಮೋರ್ಚಾ ಮುಖಂಡ ಕೆ.ಪಿ.ವೆಂಕಟೇಶ್ ಅವರು ಈವರೆಗೆ ಎಷ್ಟು ಮಂದಿ ದಲಿತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಸಂಶೋಧನಾ ವಿಭಾಗದ ಜಿಲ್ಲಾಧ್ಯಕ್ಷ ಎಚ್ .ಎಸ್ .ಶಿವಕುಮಾರ್ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ತಮ್ಮ ಸ್ವಾರ್ಥಕ್ಕಾಗಿ ದಲಿತರ ಕಾಲೊನಿಗಳಲ್ಲಿಇಂದ್ದಂತಹ ಅಂಬೇಡ್ಕರ್ ಯುವಕ ಸಂಘಗಳನ್ನು ಒಡೆದು ಆಳುವ ನೀತಿ ಅನುಸರಿಸಿರುವ ಅವರು ಶಾಸಕ ಎಚ್ .ಡಿ.ತಮ್ಮಯ್ಯ ಅವರನ್ನು ವಿರೋಧಿಸಿದರೆ ಮೂಡಿಗೆರೆ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅದರಿಂದ ಅವರು ಹೊರಬರಲಿ ಎಂದರು.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿನಕ್ಸಲ್ ಚಟುವಟಿಕೆ ನಡೆಯುತ್ತಿದೆ ಎಂದು ಸಿ.ಟಿ.ರವಿ ಅವರು ಜಿ.ಪಂ. ಸಭೆಯಲ್ಲಿಬಹಿರಂಗ ಆರೋಪ ಮಾಡಿ ವಿದ್ಯಾರ್ಥಿಗಳನ್ನು ಅವಮಾನಿಸಿದ್ದಾಗ ವೆಂಕಟೇಶ್ ಅವರ ಸ್ವಾಭಿಮಾನ ಎಲ್ಲಿಅಡಗಿತ್ತು? ದಲಿತಪರ ಹೋರಾಟಗಾರರು ನಗರ ನಕ್ಸಲರು ಎಂದು ಸಿ.ಟಿ.ರವಿ ಅವಮಾನಿಸಿದಾಗ ಬಿಜೆಪಿ ದಲಿತ ಮುಖಂಡರು ಎಲ್ಲಿಹೋಗಿದ್ದರು? ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಮಾಜಿ ಶಾಸಕ ಹಲ್ಲೆಮಾಡಿದ್ದಾಗ ಆ ಘಟನೆಯನ್ನು ಈ ಮುಖಂಡ ಖಂಡಿಸಲಿಲ್ಲಏಕೆ ಎಂಬ ಪ್ರಶ್ನೆಗಳನ್ನು ಮುಂದಿಟ್ಟರು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದಲಿತರನ್ನು ಮುಂದು ಮಾಡುವುದನ್ನು ವೆಂಕಟೇಶ್ ಮೊದಲು ಕೈಬಿಡಲಿ ಎಂದರು.

ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಅಧ್ಯಕ್ಷ ಮಲ್ಲೇಶಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡನೊಬ್ಬನಿಂದ ಕುಟುಂಬವೊಂದಕ್ಕೆ ತೊಂದರೆಯಾಗಿದೆ ಎಂಬ ವಿಚಾರ ಗಮನಕ್ಕೆ ಬಂದಕೂಡಲೇ ಆತನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಎಲ್ಲದಕ್ಕೂ ಶಾಸಕರನ್ನೇ ಹೊಣೆ ಮಾಡುವುದರಲ್ಲಿಅರ್ಥವೇನಿದೆ ಎಂದರು.

ಕೆ.ಪಿ.ವೆಂಕಟೇಶ್ ಅವರಿಗೆ ದಲಿತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಬಿಜೆಪಿಯಲ್ಲಿಎಸ್ಸಿ ಘಟಕಕ್ಕೆ ಬೇರೆ ದಲಿತ ನಾಯಕರಿಗೆ ಅವಕಾಶ ನೀಡಬೇಕು. ಸಾರ್ವಕಾಲಿಕ ಅಧ್ಯಕ್ಷರಾಗಿ ಅವರೇ ಉಳಿಯುವುದಕ್ಕಿಂತ ಬೇರೆಯವರಿಗೆ ಆ ಹುದ್ದೆ ಬಿಟ್ಟು ಕೊಡಲಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ರಾಜೇಶ್ , ಸಂತೋಷ್ ಲಕ್ಯಾ, ಲಾಕೇಶ್ ಮತ್ತಿತರರಿದ್ದರು.

ಫೋಟೋ:3ರುದ್ರಯ್ಯ-ಪಿ1- ಎಚ್ .ಎಸ್ .ಶಿವಕುಮಾರ್