ವಿಕಸುದ್ದಿಲೋಕ ಬೇಲೂರು
ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿಪಟ್ಟಣದ ಶ್ರೀಚನ್ನಕೇಶವಸ್ವಾಮಿ ದೇವಾಲಯದಲ್ಲಿವಿಶೇಷ ಧಾರ್ಮಿಕ ಕ್ರಮಗಳನ್ನು ನಡೆಸಿ, ದೇವಾಲಯದ ಗರ್ಭಗುಡಿ ಬಾಗಿಲನ್ನು ಹಾಕಲಾಯಿತು.
ಗ್ರಹಣ ಮುಗಿದ ಬಳಿಕ ರಾತ್ರಿ ಸುಮಾರು 7 ಗಂಟೆಯ ನಂತರ ದೇವಾಲಯದಲ್ಲಿಶುದ್ಧಿಕಾರ್ಯಗಳು ಆರಂಭವಾದವು. ಶಾಸ್ತೊ್ರೕಕ್ತವಾಗಿ ವಿಧಾನದಲ್ಲಿತಿಥಿ ಪುಣ್ಯಾಹವಾಚನ, ಆಲಯ ಅರ್ಚನೆ, ವಿಶೇಷ ಅಭಿಷೇಕ ಹಾಗೂ ಸಂಪ್ರೋಕ್ಷಣೆಯಂತಹ ವಿಧಿವಿಧಾನಗಳು ನೆರವೇರಿಸಿ, ಮಹಾನೈವೇದ್ಯ ಸಮರ್ಪಣೆ ಮಾಡಲಾಯಿತು.
ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ಹಾಗೂ ನರಸಿಂಹ ಪ್ರಿಯ ಭಟ್ ಮಾತನಾಡಿ, ‘‘ಶುದ್ಧಿಕಾರ್ಯಗಳು ಪೂರ್ಣಗೊಂಡ ಬಳಿಕ ಬುಧವಾರ ಬೆಳಗ್ಗೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಗ್ರಹಣದ ಸಂದರ್ಭಗಳಲ್ಲಿದೇವಾಲಯಗಳಲ್ಲಿಅನುಸರಿಸಲಾಗುವ ಈ ಕ್ರಮಗಳು ಆಚಾರ-ವಿಚಾರಗಳ ಭಾಗವಾಗಿದ್ದು, ಸಂಪ್ರದಾಯದ ಪ್ರಕಾರ ದೈವ ಸಾನ್ನಿಧ್ಯವನ್ನು ಶುದ್ಧವಾಗಿರಿಸುವ ಉದ್ದೇಶದಿಂದ ಪಾಲಿಸಲಾಗುತ್ತದೆ,’’ ಎಂದರು.
ದೇಗುಲದಲ್ಲಿದೇವರ ದರ್ಶನ ಇರುವುದಿಲ್ಲಎಂಬುದನ್ನು ತಿಳಿಯದೇ ಬಂದ ಭಕ್ತರು ನಿರಾಸೆಗೊಂಡು, ಶಿಲ್ಪಕಲೆಗಳನ್ನು ವಿಕ್ಷಿಸಿ ತೆರಳಿದರು.
ಚಿತ್ರದುರ್ಗ ಜಿಲ್ಲೆಹೊಸದುರ್ಗ ತಾಲೂಕಿನ ನಾಗರಾಜು, ಶಿಲ್ಪ ನವಜೋಡಿಗಳು ಮಾತನಾಡಿ, ‘‘ಹೊಸದಾಗಿ ಮದುವೆಯಾದ ಕಾರಣ ಮನೆದೇವರಾದ ಚನ್ನಕೇಶವಸ್ವಾಮಿ ದರ್ಶನ ಪಡೆಯಲು ಬಂದೆವು ಆದರೆ ದರ್ಶನ ಸಿಗದೇ ಬೇಸರವಾಯಿತು, ಪುನಂ ಮತ್ತೊಂದು ದಿನ ಬಂದು ದರ್ಶನ ಪಡೆಯುತ್ತೇವೆ,’’ ಎಂದರು.
03 ಬಿಎಲ್ ಆರ್ 03 ಪಿ02 ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ಬಾಗಿಲು ಹಾಕಲಾಗಿತ್ತು.

