ಸಂಕ್ಷಿಪ್ತ ಸುದ್ದಿಗಳು 10ರಂದು ವಿದ್ಯುತ್ ವ್ಯತ್ಯಯ

Contributed byraju.manjunath67@gmail.com|Vijaya Karnataka

ರಾಮನಗರ ತಾಲೂಕಿನ ಅಳ್ಳಿಮಾರನಹಳ್ಳಿ, ದೊಡ್ಡಮುದುವಾಡಿ, ಚಿಕ್ಕಮುದುವಾಡಿ, ದೊಡ್ಡಕಲ್ಬಾಳು, ಕೊಟ್ಟಗಾಳು ಪಂಚಾಯಿತಿ ವ್ಯಾಪ್ತಿ ಹಾಗೂ ಹಳೆಹೊನ್ನಿಗನಹಳ್ಳಿ, ಹೊಸಕೋಟೆ, ತಾಮಸಂದ್ರ ಗ್ರಾಮಗಳಲ್ಲಿ ಫೆ.10ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಇರುವುದಿಲ್ಲ. ಫೆ.12ರಂದು ಕನಕಪುರ ನಗರಸಭೆಯ 2026-27ನೇ ಸಾಲಿನ ಬಜೆಟ್ ಸಿದ್ಧಪಡಿಸಲು ಸಾರ್ವಜನಿಕರ ಪೂರ್ವಭಾವಿ ಸಭೆ ನಡೆಯಲಿದೆ. ಇಂದು ಶ್ರೀ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.

power outage in kannada on the 10th in kanakapura

ಸಂಕ್ಷಿಪ್ತ ಸುದ್ದಿಗಳು

10ರಂದು ವಿದ್ಯುತ್ ವ್ಯತ್ಯಯ

ರಾಮನಗರ: ಕಾಮಗಾರಿ ನಿರ್ವಹಣೆ ಹಿನ್ನೆಲೆಯಲ್ಲಿತಾಲೂಕಿನ ಅಳ್ಳಿಮಾರನಹಳ್ಳಿ, ದೊಡ್ಡಮುದುವಾಡಿ, ಚಿಕ್ಕಮುದುವಾಡಿ, ದೊಡ್ಡಕಲ್ಬಾಳು, ಕೊಟ್ಟಗಾಳು ಪಂಚಾಯಿತಿ ವ್ಯಾಪ್ತಿ ಹಾಗೂ ಹಳೆಹೊನ್ನಿಗನಹಳ್ಳಿ, ಹೊಸಕೋಟೆ, ತಾಮಸಂದ್ರ ಗ್ರಾಮಗಳಿಗೆ ಫೆ.10 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ಕನಕಪುರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ (ವಿ) ಪ್ರಕಟಣೆಯಲ್ಲಿತಿಳಿಸಿದ್ದಾರೆ.

-----

12ರಂದು ಬಜೆಟ್ ಸಭೆ

ರಾಮನಗರ: ಕನಕಪುರ ನಗರಸಭೆಯ 2026-27ನೇ ಸಾಲಿನ ಆಯ-ವ್ಯಯ ಸಿದ್ದಪಡಿಸುವ ಸಂಬಂಧ ಸಾರ್ವಜನಿಕರ ಪೂರ್ವಬಾವಿ ಸಭೆಯನ್ನು ಫೆ.12ರಂದು ಬೆಳಿಗ್ಗೆ 11 ಗಂಟೆಗೆ ಕನಕಪುರ ನಗರಸಭೆಯ ಪೌರಾಯುಕ್ತರ ಅಧ್ಯಕ್ಷತೆಯಲ್ಲಿಕನಕಪುರ ನಗರಸಭಾ ಸಭಾಂಗಣದಲ್ಲಿಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ.

ಸಭೆಗೆ ಮಾಜಿ ನಗರಸಭಾ ಸದಸ್ಯರು, ಆಸಕ್ತ ಜನಪ್ರತಿನಿಧಿಗಳು, ಸಾರ್ವಜನಿಕರು, ಹಿರಿಯ ನಾಗರಿಕರು, ಸರ್ಕಾರೇತರ ಸಂಘ ಸಂಸ್ಥೆಗಳು ಆಗಮಿಸಿ ಕನಕಪುರ ನಗರಸಭಾ ವ್ಯಾಪ್ತಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡುವಂತೆ ಕನಕಪುರ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

--------------

ಇಂದು ಶ್ರೀಕಾಯಕ ಶರಣರ ಜಯಂತಿ

ರಾಮನಗರ: ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಫೆ.10ರ ಮಂಗಳವಾರ ಬೆಳಗ್ಗೆ 10.30ಕ್ಕೆ ನಗರದ ಕಂದಾಯ ಭವನದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ: 409ರಲ್ಲಿಆಯೋಜಿಸಲಾಗಿದೆ.

ಶ್ರೀಕಾಯಕ ಶರಣ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾಸಮುದಾಯದ ಅಧ್ಯಕ್ಷರು, ಕಾರ್ಯದರ್ಶಿಗಳು, ಮುಖಂಡರು, ಎಲ್ಲಾಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಮತ್ತು ತಾಲೂಕು ಮಟ್ಟದ ಎಲ್ಲಾಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

09ಆರ್ ಎನ್ ಆರ್ ಎಂ5: ಕಾಯಕ ಶರಣ