ಸ್ಪೋರ್ಟ್ಸ್ ಮೆಡಿಸಿನ್ ಪರಿಣತ ಡಾ. ಶಂಕರ್

Contributed bymary.joseph@timesgroup.com|Vijaya Karnataka

ಬೆಂಗಳೂರಿನ ಖ್ಯಾತ ಮೂಳೆ ಮತ್ತು ಕೀಲು ತಜ್ಞ ಡಾ. ಶಂಕರ್ ಅವರು 3000ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಇವರು ಸಾಂಪ್ರದಾಯಿಕ ಮತ್ತು ರೋಬೊಟಿಕ್ ವಿಧಾನಗಳಲ್ಲಿ ಪರಿಣತಿ ಹೊಂದಿದ್ದಾರೆ. ಕ್ರೀಡಾ ಆಟಗಾರರಿಗೂ ಚಿಕಿತ್ಸೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯಲ್ಲದೆ, ಆರ್ಥೊಬಯೋಲಾಜಿಕ್ಸ್ ವಿಧಾನಗಳ ಮೂಲಕವೂ ನೋವು ನಿವಾರಣೆ ಮಾಡುತ್ತಾರೆ. ಇವರಿಗೆ ಉದಯೋನ್ಮುಖ ಆರ್ಥೋಪಿಡಿಕ್ ಸರ್ಜನ್ ಪ್ರಶಸ್ತಿ ಲಭಿಸಿದೆ.

top sports medicine expert dr shankar

ಆರ್ಥೊಪಿಡಿಕ್ ಸರ್ಜನ್ , ಡಾ. ಶಂಕರ್ ಆರ್ಥೋಪಿಡಿಕ್ಸ್ ಆ್ಯಂಡ್ ಸ್ಪೆಷಾಲಿಟಿ ಸೆಂಟರ್ , ಬಸವೇಶ್ವರನಗರ, ಬೆಂಗಳೂರು

ಎರಡು ದಶಕಗಳ ವೃತ್ತಿ ಅನುಭವ ಹೊಂದಿರುವ ಡಾ. ಶಂಕರ್ ಇ. ಅವರು ಮೂಳೆ ಮತ್ತು ಕೀಲು ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿಹೆಸರುವಾಸಿಯಾಗಿದ್ದಾರೆ. ಬೆಂಗಳೂರು ಪಶ್ಚಿಮ ಭಾಗದ ಬಸವೇಶ್ವರ ನಗರದಲ್ಲಿಡಾ. ಶಂಕರ್ ಆರ್ಥೋಪಿಡಿಕ್ಸ್ ಆ್ಯಂಡ್ ಸ್ಪೆಷಾಲಿಟಿ ಸೆಂಟರ್ ನಡೆಸುತ್ತಿರುವ ಇವರು ವಿಶೇಷ ಪರಿಣತಿಯೊಂದಿಗೆ ಸೇವೆ ನೀಡುವ ಮೂಲಕ ಮಾದರಿ ಶಸ್ತ್ರಚಿಕಿತ್ಸಕರಾಗಿ ಗುರುತಿಸಿಕೊಂಡಿದ್ದಾರೆ. ಸ್ಪೋರ್ಟ್ಸ್ ಮೆಡಿಸಿನ್ ನಲ್ಲೂಪರಿಣತಿ ಹೊಂದಿರುವ ಇವರು ಖೋಖೊ ಸೇರಿ ಹಲವು ಕ್ರೀಡಾ ವಲಯದಆಟಗಾರರಿಗೆಚಿಕಿತ್ಸೆ ನೀಡಿದ್ದಾರೆ. ಸಾಂಪ್ರದಾಯಿಕ ಮತ್ತು ರೋಬೊಟಿಕ್ ವಿಧಾನಗಳ ಮೂಲಕ ಮಂಡಿ ಚಿಪ್ಪು ಬದಲಾವಣೆ (k್ಞಛಿಛಿ ್ಕಛಿp್ಝa್ಚಛಿಞಛ್ಞಿಠಿ) ಶಸ್ತ್ರಚಿಕಿತ್ಸೆ ನಡೆಸುವಲ್ಲಿಸಿದ್ಧಹಸ್ತರೆನಿಸಿದ್ದಾರೆ.

ಬೆಂಗಳೂರಿನ ಎಂ.ಎಸ್ . ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿಎಂಬಿಬಿಎಸ್ ಹಾಗೂ ಮೈಸೂರಿನ ಜೆಎಸ್ ಎಸ್ ವೈದ್ಯಕೀಯ ಕಾಲೇಜಿನಲ್ಲಿಸ್ನಾತಕೋತ್ತರ ಪದವಿ ಹಾಗೂ ಕೊಯಮತ್ತೂರಿನ ಕೆ.ಜಿ.ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯದಲ್ಲಿಆರ್ಥೊಪಿಡಿಕ್ ಸರ್ಜರಿ ವಿಷಯದಲ್ಲಿಡಿಎನ್ ಬಿ ಪೂರೈಸಿರುವ ಡಾ.ಶಂಕರ್ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆ, ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆ, ನಾಗರಭಾವಿಯ ಜಿಎಂ ಆಸ್ಪತ್ರೆ, ಪೀಪಲ್ಸ್ ಟ್ರೀ ಸೇರಿ ಹಲವು ಆಸ್ಪತ್ರೆಗಳಿಗೆ ವಿಸಿಟಿಂಗ್ ಕನ್ಸಲ್ಟೆಂಟ್ ಆಗಿಯೂ ಸೇವೆ ಸಲ್ಲಿಸುತ್ತಿದ್ದು ಸಾವಿರಾರು ರೋಗಿಗಳ ಬಾಳಿನಲ್ಲಿಹೊಸ ಹೆಜ್ಜೆ ಮೂಡಿಸಿದ ಹಿರಿಮೆ ಹೊಂದಿದ್ದಾರೆ.

ಭಾರತೀಯ ಆರ್ಥೊಪೆಡಿಕ್ ಸೊಸೈಟಿ, ಕರ್ನಾಟಕ ಆರ್ಥೋಪಿಡಿಕ್ ಅಸೋಸಿಯೇಷನ್ ನ ಸಕ್ರಿಯ ಸದಸ್ಯರಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿನ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿಮುಂಚೂಣಿಯಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಪ್ರವರ್ಧಮಾನಕ್ಕೆ ಬರುತ್ತಿರುವ ರೋಬೊಟಿಕ್ ಶಸ್ತ್ರಚಿಕಿತ್ಸಾ ವಿಧಾನದಲ್ಲೂಪರಿಣತಿ ಹೊಂದಿದ್ದಾರೆ. ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚಿನ ರಕ್ತಸ್ರಾವ ಇಲ್ಲದೇ ಹಾಗೂ ಕಡಿಮೆ ನೋವಿನೊಂದಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ರೋಗಿಗಳ ಪಾಲಿಗೆ ಬೆಳಕಾಗಿದ್ದಾರೆ.

---------

3000 ಯಶಸ್ವಿ ಶಸ್ತ್ರಚಿಕಿತ್ಸೆ

ಡಾ. ಶಂಕರ್ ಅವರು ತಮ್ಮ ವೃತ್ತಿ ಜೀವನದಲ್ಲಿಇದುವರೆಗೂ 3000ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ರೋಗಿಗಳ ಪಾಲಿಗೆ ನಂಬಿಗಸ್ಥ ಆರ್ಥೊಪಿಡಿಕ್ ಸರ್ಜನ್ ಎನಿಸಿಕೊಂಡಿದ್ದಾರೆ. ವೈದ್ಯ ವೃತ್ತಿ ಜೀವನದ ಆರಂಭದಲ್ಲಿಸೀನಿಯರ್ ಡಾಕ್ಟರ್ ಗಳ ಮಾರ್ಗದರ್ಶನದಲ್ಲಿ98 ವರ್ಷದ ವೃದ್ಧೆಗೂ ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ಹಿರಿಮೆ ಹೊಂದಿದ್ದಾರೆ. ಆರ್ಥೊಪ್ಲಾಸ್ಟ್ , ಮಂಡಿ ಚಿಪ್ಪು ಬದಲಾವಣೆ ಹಾಗೂ ಆರ್ಥೊಸ್ಕೋಪಿಕ್ ನಂಥ ಕೀ ಹೋಲ್ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿಸಾಮಾನ್ಯವಾಗಿ ಕ್ರೋಮಿಯಂ ಕೋಬಾಲ್ಟ… ಹಾಗೂ ಕೆಲವು ಸಂದರ್ಭಗಳಲ್ಲಿಆಕ್ಸಿನಿಯಮ್ ಕೀಲುಗಳನ್ನು ಬಳಸಲಾಗುತ್ತದೆ.

--------

ಪ್ರಶಸ್ತಿಗಳು

2017ರಲ್ಲಿದಿಲ್ಲಿಯಲ್ಲಿನಡೆದ ಅಂತಾರಾಷ್ಟ್ರೀಯ ಆರೋಗ್ಯ ಶೃಂಗದಲ್ಲಿಡಾ. ಶಂಕರ್ ಇ ಅವರಿಗೆ ದಕ್ಷಿಣ ಭಾರತದ ಉದಯೋನ್ಮುಖ ಆರ್ಥೋಪಿಡಿಕ್ ಸರ್ಜನ್ ಪ್ರಶಸ್ತಿ ಬಂದಿದೆ. ಇನ್ನೂ ಹಲವು ಪುರಸ್ಕಾರಗಳು ಸಂದಿವೆ. ಆರ್ಥೊಪೆಡಿಕ್ ಕ್ಷೇತ್ರದ ಕುರಿತು ಹಲವು ವೈಜ್ಞಾನಿಕ ಲೇಖನಗಳನ್ನೂ ಬರೆದಿದ್ದಾರೆ. ಲಯನ್ಸ್ ಕ್ಲಬ್ , ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಾಪ್ಟರ್ , ಬೆಂಗಳೂರು ಆರ್ಥೊಪೆಡಿಕ್ ಸೊಸೈಟಿಯ ಚಾಪ್ಟರ್ ಗಳಲ್ಲಿಇವರು ಸಂಪನ್ಮೂಲ ವ್ಯಕ್ತಿಯಾಗಿ ಮೂಳೆ ಹಾಗೂ ಕೀಲು ಸಂಬಂಧಿತ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದ್ದಾರೆ.

----------

ಆರ್ಥೊಬಯೋಲಾಜಿಕ್ಸ್ ಅಳವಡಿಕೆ

ಮೂಳೆ ಮತ್ತು ಕೀಲುಗಳ ನೋವಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸುವ ಆರ್ಥೊಬಯೋಲಾಜಿಕ್ಸ್ ವಿಧಾನಗಳನ್ನೂ ಡಾ. ಶಂಕರ್ ಬಳಸುತ್ತಾರೆ. ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಇಲ್ಲದ ಅಥವಾ ಒಂದಷ್ಟು ಕಾಲ ಸರ್ಜರಿ ಮುಂದೂಡುವ ಸಂದರ್ಭಗಳಲ್ಲಿರೋಗಿಗಳಿಗೆ ಇಂಥ ಆಯ್ಕೆಯು ಅನುಕೂಲಕರವಾಗಿರುತ್ತದೆ. ಇಲ್ಲಿರೋಗಿಯ ರಕ್ತದಲ್ಲಿರುವ ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ (P್ಕP) ಪಡೆದು ಅಥವಾ ಅಸ್ಥಿಮಜ್ಜೆ ಇಲ್ಲವೇ ಕೊಬ್ಬಿನಿಂದ ಕಾಂಡಕೋಶಗಳನ್ನು ಪಡೆದು ಸುಧಾರಿತ ತಂತ್ರಜ್ಞಾನದೊಂದಿಗೆ ಪರಿಶೋಧಿಸಿ ಹಾನಿಗೊಳಗಾದಅಸ್ಥಿರಜ್ಜು, ಸ್ನಾಯುಗಳು ಮತ್ತು ಕೀಲುಗಳ ಭಾಗದಲ್ಲಿಇಂಜೆಕ್ಷನ್ ರೂಪದಲ್ಲಿನೀಡಿ ಗುಣಪಡಿಸಲಾಗುತ್ತದೆ.