ಸತ್ಯ,ಶುದ್ಧ ಕಾಯಕ ಮಾಡಿ ಮಾದರಿಯಾಗಿ

Contributed bymanjunathrd59@gmail.com|Vijaya Karnataka

ಬಮ್ಮನಕಟ್ಟಿಯಲ್ಲಿ ವಿಘ್ನೇಶ್ವರ, ಭಗಳಾಂಭಿಕಾ ದೇವಿ ಹಾಗೂ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಮತ್ತು ಉಪನಯನ ಸಂಸ್ಕಾರ ಕಾರ್ಯಕ್ರಮಗಳು ಜರುಗಿದವು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ದೇವರ ಅನುಗ್ರಹದಿಂದ ವೈಭವದಿಂದ ನಡೆದವು. ಸತ್ಯ, ಶುದ್ಧ ಕಾಯಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಸ್ವಾಮಿಗಳು ಹೇಳಿದರು. ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗುಗ್ಗಳ ಮಹೋತ್ಸವ, ನಂದಿಕೋಲು, ಪುರವಂತಿಕೆ, ಪಲ್ಲಕ್ಕಿ ಉತ್ಸವ ಮೆರವಣಿಗೆಯೂ ನಡೆಯಿತು.

truth and pure work becoming a model activity

8 ಮಂಜು 10

ಸತ್ಯ,ಶುದ್ಧ ಕಾಯಕ ಮಾಡಿ ಮಾದರಿಯಾಗಿ

ವಿಕ ಸುದ್ದಿಲೋಕ ಹಾವೇರಿ

ಜಾತ್ರಾ ಮಹೋತ್ಸವ ಕಾರ್ಯಗಳಿಗೆ ದೇವರ ಅನುಗ್ರಹ ಇರುವುದರಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ವೈಭವದಿಂದ ನಡೆಯುತ್ತಿವೆ ಎಂದು ಹುಲಗೂರ ಶ್ರೀ ಮೌನೇಶ್ವರ ಸ್ವಾಮಿಗಳು ಹೇಳಿದರು.

ತಾಲೂಕಿನ ಬಮ್ಮನಕಟ್ಟಿಯಲ್ಲಿಶ್ರೀ ವಿಘ್ನೇಶ್ವರ, ಶ್ರೀ ಭಗಳಾಂಭಿಕಾ ದೇವಿ ಹಾಗೂ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಯ ಶಾಖಾ ಮಠದ 2ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮತ್ತು ಉಪನಯನ ಸಂಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮಿಗಳು ಮಾತನಾಡಿ,‘‘ಸಮಾಜದಲ್ಲಿಎಲ್ಲಜನ್ಮಗಳಿಗಿಂತ ಶ್ರೇಷ್ಠ ಜನ್ಮ ಮಾನವ ಜನ್ಮ. ನಾವು ಮಾಡುವ ಒಳ್ಳೆಯ ಕೆಲಸಗಳೇ ನಮ್ಮ ಕೈ ಹಿಡಿಯುತ್ತವೆ. ಸತ್ಯ,ಶುದ್ಧ ಕಾಯಕ ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕು. ಹುಟ್ಟಿದ ಮೇಲೆ ತಂದೆ ತಾಯಿಗೆ ಒಳ್ಳೆ ಮಕ್ಕಳಾಗಿ ಮತ್ತೊಬ್ಬರಿಗೆ ಅನ್ಯಾಯ, ಮೋಸ ಮಾಡದೇ ಜೀವನ ನಡೆಸಬೇಕು’’ ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ದೇವಸ್ಥಾನದಲ್ಲಿಚಂಡಿಕಾ ಹೋಮ ನಡೆಯಿತು. ಏಳು ಜನ ಮಕ್ಕಳಿಗೆ ಉಪನಯನ ಸಂಸ್ಕಾರ ಉಪದೇಶ ನೀಡಲಾಯಿತು. ನಂತರ ಜರುಗಿದ ಸಾಮೂಹಿಕ ವಿವಾಹದಲ್ಲಿನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಮಾಚಾರಿ ವಿಶ್ವಬ್ರಾಹ್ಮಣ, ಏಕಾಂತ ಆಚಾರ್ಯ, ಪ್ರಸನ್ನ ಆಚಾರ್ಯ, ರಂಜಿತ್ ಆಚಾರ್ಯ, ಕೃಷ್ಣಾ ಆಚಾರ್ಯ, ವಿರಾಚಾರ್ಯ ವಿಶ್ವಬ್ರಾಹ್ಮಣ ಶಾಸ್ತೊ್ರೕಪದೇಶಗಳನ್ನು ನಿರ್ವಹಿಸಿದರು. ನಂತರ ಗುಗ್ಗಳ ಮಹೋತ್ಸವ, ನಂದಿಕೋಲು, ಪುರವಂತಿಕೆ ಜತೆಗೆ ಮಹಿಳೆಯರು ಪೂರ್ಣಕುಂಭ ಹೊತ್ತು ಗ್ರಾಮದ ಪ್ರಮುಖ ಬೀದಿಯಲ್ಲಿಸಾಗಿದರು. ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.

ಪೋಟೋ 8 ಮಂಜು 10

ಬಮ್ಮನಕಟ್ಟಿಯಲ್ಲಿವಿಘ್ನೇಶ್ವರ, ಭಗಳಾಂಭಿಕಾ ದೇವಿ ಹಾಗೂ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ತ ಸಾಮೂಹಿಕ ವಿವಾಹ ಮತ್ತು ಉಪನಯನ ನಡೆಯಿತು.