ಪ್ರಸಾದ್ ಯೋಜನೆಗೆ ಕೋರ್ಟ್ ಬ್ರೇಕ್

Contributed bybeeresha.mahadeva@timesgroup.com|Vijaya Karnataka

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್‌ ಯೋಜನೆಯಡಿ ನಡೆಯುತ್ತಿದ್ದ ಕಾಮಗಾರಿಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಒಂದು ಕಾಮಗಾರಿ ಹೊರತುಪಡಿಸಿ ಉಳಿದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಪರಿಸರವಾದಿಗಳು, ಹೋರಾಟಗಾರರು ಹಾಗೂ ಸ್ಥಳೀಯರು ಈ ಯೋಜನೆಯನ್ನು ವಿರೋಧಿಸಿದ್ದರು. ಬೆಟ್ಟದ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಎಂಬುದು ಅವರ ವಾದವಾಗಿತ್ತು. ಈ ಹೋರಾಟಕ್ಕೆ ಇದೀಗ ಮೊದಲ ಯಶಸ್ಸು ದೊರೆತಿದೆ. ಮುಂದಿನ ಆದೇಶಕ್ಕಾಗಿ ಕಾಯಲಾಗುತ್ತಿದೆ.

victory for environmentalists against the pm prasad scheme

ಪ್ರಸಾದ್ ಯೋಜನೆಗೆ ಕೋರ್ಟ್ ಬ್ರೇಕ್

- ನಡೆಯುತ್ತಿರುವ ಕಾಮಗಾರಿ ಬಿಟ್ಟು ಉಳಿದವು ಸ್ಥಗಿತ | ಹೋರಾಟಗಾರರಿಗೆ ಮೊದಲ ಜಯ| ಕಾಮಗಾರಿಯನ್ನು ಶಾಶ್ವತವಾಗಿ ರದ್ದುಪಧಿಡಿಸಲು ಆಗ್ರಹ

ಬೀರೇಶ್ ಕಬಿನಿ ಮೈಸೂರು

ಘ್ಕಿಚಿಛಿಛ್ಟಿಛಿsha.ಞahadಛಿvaಃಠಿಜಿಞಛಿsಟ್ಛಜ್ಞಿಜಿdಜಿa.್ಚಟಞ

ಕೇಂದ್ರ ಪುರಸ್ಕೃತ ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದಲ್ಲಿಕೈಗೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ಬೆಟ್ಟದಲ್ಲಿಕಾಂಕ್ರಿಟೀಕರಣ ವಿರೋಧಿಸಿ ಹಾಗೂ ನಾನಾ ಪರಿಸರ ಕಾಳಜಿ ಉದ್ದೇಶಗಳನ್ನು ಇಟ್ಟುಕೊಂಡು ಪರಿಸರವಾದಿಗಳು, ಹೋರಾಟಗಾರರು, ಪರಿಸರ ಸಂಘಟನೆಗಳು ಕೈಗೊಂಡಿದ್ದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ.

‘‘2025ರ ಡಿಸೆಂಬರ್ ನಲ್ಲಿಚಾಮುಂಡಿಬೆಟ್ಟದ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯನ್ನು ಕೇಂದ್ರ ಸರಕಾರದ ಪ್ರಸಾದ್ ಯೋಜನೆಯಡಿ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಯಿತು. ಬೆಂಗಳೂರಿನ ಕಾರ್ಕಳ ಎಂಟರ್ ಪ್ರೈಸಸ್ ಎಂಬ ಸಂಸ್ಥೆಗೆ ಕಾಮಗಾರಿ ಜವಾಬ್ದಾರಿ ನೀಡಲಾಗಿದೆ. ಅಂತೆಯೇ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿಮಲ್ಟಿಪರ್ಪಸ್ ಏರಿಯಾ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಯಿತು. ನಂತರ ನಾನಾ ಪರಿಸರ ಸಂಘಟನೆಗಳು, ಪರಿಸರದ ಪ್ರೇಮಿಗಳು, ಕಾರ್ಯಕರ್ತರು ನಿರಂತರ ಪ್ರತಿಭಟನೆ ನಡೆಸಿದರು. ರಾಜವಂಶಸ್ಥರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಪರಿಣಾಮವಾಗಿ ಇಲಾಖೆ ಅಧಿಕಾರಿಗಳು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ನಿರಂತರವಾಗಿ ಒಂದೂವರೆ ತಿಂಗಳಿಂದ ಪ್ರತಿಭಟನೆ ನಡೆದವು. ಕೆಲವರು ನ್ಯಾಯಾಲಯದಲ್ಲಿದಾವೆ ಹೂಡಿದರು. ಇದನ್ನು ಪರಿಗಣಸಿದ ನ್ಯಾಯಾಲಯವು, ಸದ್ಯ ನಡೆಯುತ್ತಿರುವ ಒಂದು ಕಾಮಗಾರಿಯನ್ನು ಹೊರತುಪಡಿಸಿ ಉಳಿದೆಲ್ಲಾಕಾಮಗಾರಿಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ,’’ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಪುರುಷೋತ್ತಮ್ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಉದ್ದೇಶಿತ ಕಾಮಗಾರಿಗಳು ಯಾವ್ಯಾವು ?

ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನವನ್ನು (ಒಂದು ಶಕ್ತಿ ಪೀಠ) ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ 2023-24ರಲ್ಲಿ46 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಬಹುಪಯೋಗಿ (ಮಲ್ಟಿಪರ್ಪಸ್ ಏರಿಯಾ ಡೆವಲಪ್ ಮೆಂಟ್ ) ಪ್ರದೇಶ ಅಭಿವೃದ್ಧಿ, ಮಹಿಷಾಸುರ ಪ್ಲಾಜಾದ ಬಳಿ ಅಮೆನಿಟೀಸ್ ಬ್ಲಾಕ್ , ಎಂಟ್ರನ್ಸ್ ಸ್ಟೋನ್ ಆರ್ಚ್, ದೇವಿಕೆರೆ ಆವರಣದ ಹ್ಯಾಂಡ್ ರೈಲ್ಸ್ , ಸ್ಟೆಫ್ಸ್ ಮತ್ತು ಮಂಟಪ ಸೌಂದಧಿರ್ಯೀಧಿಕಧಿರಧಿಣ, ಭಕ್ತಾಧಿಗಳು ದೇವರ ದರ್ಶನಕ್ಕೆ ತೆರಳಲು ಕ್ಯೂ ಮಂಟಪ ನಿರ್ಮಾಣ, ವ್ಯೂವ್ ಪಾಯಿಂಟ್ ಅನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ನಾನಾ ಕಾಮಗಾರಿಗಳನ್ನು ಒಟ್ಟು ಆರು ಕಡೆಗಳಲ್ಲಿಹಮ್ಮಿಕೊಳ್ಳಲು ಯೋಜಿಸಲಾಗಿದೆ.

ಏನಿದು ಪ್ರಸಾದ್ ಯೋಜನೆ ?

ಕೇಂದ್ರ ಸರಕಾರದ ಪ್ರಸಾದ್ (ಪಿಲಿಗ್ರಿಮೇಜ್ ರಿಜುವೆನೇಷನ್ ಆ್ಯಂಡ್ ಸ್ಪಿರಿಚುವಲ್ ಹೆರಿಟೇಜ್ ಅಗ್ಮಂಟೇನ್ )ಪ್ರಸಾದ್ ಯೋಜನೆಯನ್ನು ಭಾರತ ಸರಕಾರದ ಪ್ರವಾಸೋದ್ಯಮ ಸಚಿವಾಲಯ 2014-15ರಲ್ಲಿಜಾರಿಗೊಳಿಸಿತು. ಈ ಯೋಜನೆಯ ಮುಖ್ಯ ಉದ್ದೇಶ ಪವಿತ್ರ ಯಾತ್ರಾ ಸ್ಥಳಗಳು ಮತ್ತು ಪಾರಂಪರಿಕ ಪ್ರದೇಶಗಳಲ್ಲಿಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಯಾತ್ರಿಕರಿಗೆ ಉತ್ತಮ ಅನುಭವ ನೀಡುವುದು. ಯೋಜನೆಗೆ ಸಂಬಂಧಿಸಿದ ಶೇ. 100ರಷ್ಟು ಅನುದಾನವನ್ನು ಆಯಾ ರಾಜ್ಯ ಸರಕಾರಗಳಿಗೆ ಕೇಂದ್ರದಿಂದಲೇ ನೀಡಲಾಗುತ್ತದೆ. ದೇಶದಾದ್ಯಂತ ಹಲವು ದೇವಾಲಯಗಳು ಮತ್ತು ಯಾತ್ರಾ ಕ್ಷೇತ್ರಗಳಲ್ಲಿಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

----

ಬಾಕ್ಸ್

ಹೋರಾಟಕ್ಕೆ ಸಂದ ಜಯ :

ಯೋಜನೆಗೆ ಪರಿಸರವಾದಿಗಳು, ರಾಜವಂಸ್ಥೆ ಪ್ರಮೋದಾ ದೇವಿ ಒಡೆಯರ್ , ಸ್ಥಳೀಯರು ಮತ್ತು ನಾನಾ ಪರಿಸರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೆಟ್ಟದ ಮೇಲ್ಭಾಗದಲ್ಲಿಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಅಲ್ಲಿಕಾಂಕ್ರಿಟೀಕರಣ ಹೆಚ್ಚಾಗಲಿದೆ. ಇದರಿಂದ ಬೆಟ್ಟದ ಪಾರಂಪರಿಕತೆ, ಪರಿಸರ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಧಾರಣ ಸಾಮರ್ಥ್ಯ ಮೌಲ್ಯಮಾಪನ ಇಲ್ಲದೇ ಕಾಮಗಾರಿ ಮಾಡಬಾರದು. ಇದರಿಂದ ಬೆಟ್ಟದಲ್ಲಿಮತ್ತಷ್ಟು ವಾಣಿಜ್ಯೀಕರಣ ಹೆಚ್ಚಾಗುತ್ತದೆ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳು, ಆನ್ ಲೈನ್ ಸಹಿ ಸಂಗ್ರಹ ಸೇರಿದಂತೆ ನಾನಾ ರೀತಿಯಲ್ಲಿಹೋರಾಟ ಕೈಗೊಂಡಿದ್ದರು. ಇದೀಗ ಈ ಚಳವಳಿಗೆ ಮೊದಲ ಯಶಸ್ಸು ದೊರೆತಂತಾಗಿದೆ.

=====

ಕೋಟ್

ನ್ಯಾಯಾಲಯದ ಸೂಚನೆಯಂತೆ ಸದ್ಯಕ್ಕೆ ಚಾಮುಂಡಿ ಬೆಟ್ಟದಲ್ಲಿಚಾಲನೆಯಲ್ಲಿರುವ ಒಂದು ಕಾಮಗಾರಿ ಹೊರತುಪಡಿಸಿ ಉಳಿದೆಲ್ಲಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೇವೆ. ನ್ಯಾಯಾಲಯದ ಮುಂದಿನ ಆದೇಶವನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

-ಪುರುಷೋತ್ತಮ್ , ಕಾರ್ಯಪಾಲಕ ಎಂಜಿನಿಯರ್ , ಪ್ರವಾಸೋದ್ಯಮ ಇಲಾಖೆ.

ನ್ಯಾಯಾಲಯ ಕಾಮಗಾರಿ ನಿಲ್ಲಿಸಲು ತಡೆಯಾಜ್ಞೆ ನೀಡರುವುದು ಸಂತೋಷದ ವಿಷಯ. ಆದರೆ, ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂಬುದು ನಮ್ಮ ಆಶಯವಾಗಿದೆ. ತನ್ಮೂಲಕ ಆಧ್ಯಾತ್ಮಿಕತೆ, ಪರಂಪರೆಯನ್ನು ಹೆಚ್ಚಿಸಬೇಕು.

-ಪರಶುರಾಮೇಗೌಡ, ಪರಿಸರ ಬಳಗದ ಸಂಸ್ಥಾಪಕ ಸದಸ್ಯ.