ಆಟೊ ಪಲ್ಪಿ, ಮಹಿಳೆ ಸಾವು
ವಿಕ ಸುದ್ದಿಲೋಕ ತೀರ್ಥಹಳ್ಳಿ (ಶಿವಮೊಗ್ಗ)
ಆಟೊ ರಿಕ್ಷಾ ಪಲ್ಪಿಯಾಗಿ ಸಂಭವಿಸಿದ ಅಪಘಾತದಲ್ಲಿಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ತಾಲೂಕಿನ ನಾಲೂರು ಸಮೀಪದ ಬಿಳಚಿಕಟ್ಟೆ ತಿರುವಿನಲ್ಲಿನಡೆದಿದೆ.
ನಿಶ್ಚಿತಾ(28) ಮೃತಪಟ್ಟವರು. ಆಟೊದಲ್ಲಿದ್ದ ಅವರ ಪತಿ, ಪುತ್ರ ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಸ್ತೆ ಪಕ್ಕ ಇದ್ದ ಕಬ್ಬಿಣ ತಡೆಗೇಟ್ ಗೆ ಆಟೊ ಡಿಕ್ಕಿ ಹೊಡೆದ ಪರಿಣಾಮ ನಿಶ್ಚಿತಾ ಅವರ ತಲೆ, ದೇಹಕ್ಕೆ ತೀವ್ರ ಪೆಟ್ಟಾಗಿತ್ತು. ಉಡುಪಿ ಜಿಲ್ಲೆಹೆಬ್ರಿಯಲ್ಲಿಸಂಬಂಧಿಕರ ಗೃಹಪ್ರವೇಶ ಕಾರ ್ಯಕ್ರಮ ಮುಗಿಸಿಕೊಂಡು ತೀರ್ಥಹಳ್ಳಿಗೆ ವಾಪಸಾಗುತ್ತಿದ್ದಾಗ ಘಟನೆ ಸಂಭವಿಸಿದೆ. ಆಗುಂಬೆ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

