ವಿಕ ಸುದ್ದಿಲೋಕ ಚಿಕ್ಕೋಡಿ
ಶ್ರೀ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ತಾಲೂಕಿನ ಕರೋಶಿ ಶಾಖೆಯ 9 ನೇ ವಾರ್ಷಿಕೋತ್ಸವ ಸೋಮವಾರ ಆಚರಿಸಲಾಯಿತು.
ಡಾ. ಎಸ್ .ಆರ್ . ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹೇಶ ಭಾತೆ ಪಾಲ್ಗೊಂಡಿದ್ದರು. ಅಧ್ಯಕ್ಷ ವಿಜಯ ಕೋಠಿವಾಲೆ ಹಾಗೂ ಉಪಾಧ್ಯಕ್ಷ ಮಾರುತಿ ಹಿರೇಕೋಡಿ ಅವರನ್ನು ಸತ್ಕರಿಸಲಾಯಿತು. ಗುರಪ್ಪ ನಿರ್ವಾಣಿ ಸ್ವಾಗತಿಸಿದರು. ಶಾಖೆಯ ವ್ಯವಸ್ಥಾಪಕ ದರಿಗೌಡಾ ಉಮಡಾಲೆ ವಂದಿಸಿದರು.
ಗ್ರಾಪಂ ಅಧ್ಯಕ್ಷ ಪಂಚಾಕ್ಷರಿ ಹಳಿಜೋಳೆ, ಸಹಕಾರ ರತ್ನ ಡಾ.ಸಿ.ಬಿ. ಕುರುಬಟ್ಟಿ, ಪ್ರತಾಪ ಪಟ್ಟಣಶೆಟ್ಟಿ, ಕಿಶೋರ್ ಬ್ಯಾಳಿ, ಸುರೇಶ ಶೆಟ್ಟಿ, ರವೀಂದ್ರ ಹಿರೇಕೋಡಿ, ಸಂಜಯ ಕಾಂಬಳೆ, ಬ್ಯಾಂಕ್ ಆಡಳಿತ ಮಂಡಳಿಯವರು, ಸಿಬ್ಬಂದಿ ಇದ್ದರು.
- 3ಸಿಕೆಡಿ 2
ಶ್ರೀ ಮಹಾತ್ಮ ಬಸವೇಶ್ವರ ಸಹಕಾರ ಸಂಘದ ಕರೋಶಿ ಶಾಖೆ ವಾರ್ಷಿಕೋತ್ಸವ ಸಮಾರಂಭದಲ್ಲಿವಿಜಯ ಕೋಠಿವಾಲೆ ಹಾಗೂ ಮಾರುತಿ ಹಿರೇಕೋಡಿ ಅವರನ್ನು ಸತ್ಕರಿಸಲಾಯಿತು.

