ಇನ್ಸಿ$್ಟಟ್ಯೂಟ್ ಆಫ್ ಎಂಜಿನಿಯರ್ಸ್ ಚೇರ್ಮನ್ ಸಿ.ಬಿ.ಹಿರೇಮಠ ಮಾಹಿತಿ
ವಿಕ ಸುದ್ದಿಲೋಕ ಬೆಳಗಾವಿ
ಬೆಳಗಾವಿಯ ದಿ ಇನ್ಸಿ$್ಟಟ್ಯೂಟ್ ಆಫ್ ಎಂಜಿನಿಯರ್ಸ್ ಹಾಗೂ ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಸಹಯೋಗದಲ್ಲಿಜಲಸಂಪನ್ಮೂಲ ಯೋಜನೆಗಳು ಮತ್ತು ನಿರ್ವಹಣೆ, ಸುಸ್ಥಿರತೆ ಕುರಿತು ಫೆ. 6 ಮತ್ತು 7ರಂದು ಇಲ್ಲಿನ ಶಿವಬಸವನಗರದ ಎಂಜಿನಿಯರ್ಸ್ ಇನ್ ಸ್ಟಿಟ್ಯೂಟ್ ಸಭಾಂಗಣದಲ್ಲಿರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಚೇರ್ಮನ್ ಸಿ.ಬಿ.ಹಿರೇಮಠ ತಿಳಿಸಿದರು.
ನಗರದಲ್ಲಿಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಹವಾಮಾನ ವೈಪರೀತ್ಯದಿಂದಾಗಿ ಜಲಸಂಪನ್ಮೂಲ ಯೋಜನೆಗಳ ನಿರ್ವಹಣೆಯಲ್ಲಿವ್ಯತ್ಯಾಸವಾಗುತ್ತಿದೆ. ಹೀಗಾಗಿ ಜಲಸಂಪನ್ಮೂಲ ಯೋಜನೆಗಳ ಕ್ಷಮತೆ, ಸುಸ್ಥಿರತೆ ಹಾಗೂ ಅವುಗಳ ಸ್ಥಿತಿಸ್ಥಾಪಕತ್ವದ ಬಗ್ಗೆ ಚರ್ಚಿಸಲು ಸಂಕಿರಣ ಹಮ್ಮಿಕೊಳ್ಳಲಾಗಿದೆ,’’ಎಂದರು.
‘‘ಫೆ. 6ರಂದು ಬೆಳಗ್ಗೆ 10 ಗಂಟೆಗೆ ಜನ ಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯದರ್ಶಿ ಜಯಪ್ರಕಾಶ ಉದ್ಘಾಟಿಸುವರು. ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಕಾರ್ಯದರ್ಶಿ ಐಜಾಝ ಹುಸೇನ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಅಮ್ಮಿನಬಾವಿ, ಕೆ.ಬಿ.ಕುಲಕರ್ಣಿ, ನಿವೃತ್ತ ಮುಖ್ಯ ಎಂಜಿನಿಯರ್ ಮಹದೇವ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ,’’ ಎಂದರು.
‘‘9 ಜನ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಲಿದ್ದಾರೆ. ಜನ ಸಂಪನ್ಮೂಲ ಇಲಾಖೆಯ ಸುಮಾರು 100 ಜನ ಎಂಜಿನಿಯರ್ ಸೇರಿದಂತೆ ನಾನಾ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಲಿದ್ದಾರೆ,’’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಲಾಸ ಬಾದಾಮಿ, ಎಸ್ .ವೈ.ಕುಂದರಗಿ, ಬಿ.ವೆಂಕಟೇಶ್ , ಎಸ್ .ಮೇಟಿ ಉಪಸ್ಥಿತರಿದ್ದರು.
ಪೋಟೋ4ಪರಶು4: ಸುದ್ದಿಗೋಷ್ಠಿಯಲ್ಲಿಇನ್ ಸ್ಟಿಟ್ಯೂಟ್ ಚೇರ್ಮನ್ ಸಿ.ಬಿ.ಹಿರೇಮಠ ಮಾತನಾಡಿದರು.

