ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಡಿಎಸ್ ಎಸ್
ಶೆಡ್ ತೆರವಿಗೆ ವಿರೋಧ
ವಿಕ ಸುದ್ದಿಲೋಕ ವಿಜಯಪುರ
ಕೊಲ್ಹಾರ ತಾಲೂಕಿನ ಮಟ್ಟಿಹಾಳದಲ್ಲಿದಲಿತ ಕುಟುಂಬಗಳು ವಾಸಿಸುತ್ತಿದ್ದ ಶೆಡ್ ಗಳನ್ನು ಏಕಾಏಕಿ ತೆರವುಗೊಳಿಸಿದ್ದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿಅಪರ ಜಿಲ್ಲಾಧಿಕಾರಿ ಔದ್ರಾಮಗೆ ಮನವಿ ಸಲ್ಲಿಸಿತು.
ಡಿಎಸ್ ಎಸ್ ಬೆಳಗಾವಿ ವಿಭಾಗೀಯ ಸಂಚಾಲಕ ಸಂಜು ಕಂಬಾಗಿ,‘‘ ಮಟ್ಟಿಹಾಳ ಗ್ರಾಮದ ಗಾಂವಠಾಣ ಜಾಗದಲ್ಲಿವಾಸವಾಗಿದ್ದ 12 ದಲಿತ ಕುಟುಂಬಗಳಿಗೆ ಯಾವುದೇ ನೋಟಿಸ್ ನೀಡದೇ ಅಧಿಕಾರಿಗಳು ಶೆಡ್ ತೆರವುಗೊಳಿಸಿದ್ದಾರೆ. ಇದರಿಂದ ಆ ಕುಟುಂಬಗಳು ಬೀದಿಗೆ ಬಂದಿವೆ. ಶೆಡ್ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಜತೆಗೆ ಕುಟುಂಬಗಳಿಗೆ ಸೌಲಭ್ಯ ಒದಗಿಸಬೇಕು,’’ ಎಂದು ಆಗ್ರಹಿಸಿದರು.
ಪ್ರತಿಭಾ ಹೊಸಮನಿ, ಚೈತನ್ ತೂರವಿ, ಭೀಮು ಉತ್ತನಾಳ, ಸವಿತಾ ವಗ್ಗರ್ , ಮಹಾಂತೇಶ್ ರಾಠೋಡ, ವಿಜಯ ಮೇತ್ರಿ, ದಿಲೀಪ್ , ರಣದೇವಿ, ಶಂಕರ್ ಚಲವಾದಿ ಇದ್ದರು.
ಫೋಟೋ: ಮಟ್ಟಿಹಾಳ-04-01
ಮಟ್ಟಿಹಾಳದಲ್ಲಿದಲಿತ ಕುಟುಂಬಗಳು ವಾಸಿಸುತ್ತಿದ್ದ ಶೆಡ್ ಗಳನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯಪುರದಲ್ಲಿಅಪರ ಜಿಲ್ಲಾಧಿಕಾರಿ ಔದ್ರಾಮಗೆ ಮನವಿ ಸಲ್ಲಿಸಿತು.

