ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಅವಶ್ಯ
ವಿಕ ಸುದ್ದಿಲೋಕ ಹನುಮಸಾಗರ
‘‘ಶಾಲಾ ಪೂರ್ವ ಶಿಕ್ಷಣ ಮಕ್ಕಳಿಗೆ ಅತ್ಯಂತ ಅವಶ್ಯಕವಿದೆ,’’ ಎಂದು ಮೆದಿಕೇರಿ ಆರ್ಟ್ ಗ್ಯಾಲರಿ ಅಧ್ಯಕ್ಷ ಏಕನಾಥ ಮೆದಿಕೇರಿ ಹೇಳಿದರು.
ಪಟ್ಟಣದ ಕರಿಸಿದ್ದೇಶ್ವರ ಮಠದ ಬಸವ ಭವನದಲ್ಲಿಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಶನ್ ನಿಂದ ನಡೆದ ಬಾಲ ಮೇಳ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ ಸಾವಿರಾರೂ ರೂಪಾಯಿ ನೀಡಿ ಖಾಸಗಿ ಶಾಲೆಯ ಪೂರ್ವ ಶಿಕ್ಷಣಕ್ಕೆ ಕಳುಹಿಸುವ ಬದಲಾಗಿ, ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸಬೇಕು. ಸರಕಾರವು ಮಕ್ಕಳ ಅಭಿವೃದ್ಧಿಗಾಗಿ ಆಟ, ಪಾಠ, ಪೌಷ್ಟಿಕ ಆಹಾರ ಒದಗಿಸುತ್ತದೆ. ಪಾಲಕರು ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಗಮನಿಸುತ್ತಿರಬೇಕು,’’ ಎಂದರು.
ಮಕ್ಕಳಿಂದ ಸಂಭಾಷಣೆ, ಬೌದ್ಧಿಕ ಚಟುವಟಿಕೆ, ನಾನಾ ರೀತಿಯ ಆಟಗಳು, ಗೀತೆಗಳು, ಚಿತ್ರಕಲೆ, ಪೋಷಕರಿಗೆ ಆಟೋಟ ನಡೆಸಲಾಯಿತು.
ಗ್ರಾಪಂ ಮಾಜಿ ಉಪಾಧ್ಯಕ್ಷೆ ಗೌರಮ್ಮ ಮುದಿಯಪ್ಪ ವಾಲ್ಮೀಕಿ ಕಾರ್ಯಕ್ರಮ ಉದ್ಘಾಟಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ ಪೂಜಾರ, ಅಜೀಂ ಪ್ರೇಮ್ ಜೀ ಫೌಂಡೇಶನ್ ಸಂಯೋಜಕರಾದ ಜಯಶ್ರೀ, ಹಾಲೇಶ, ಶ್ರೀನಿವಾಸ ಜಹಗೀರದಾರ, ಅಲ್ಪಾಜ್ ಕಲಾಲಬಂಡಿ, ಮುದಟಗಿ ಗ್ರಾಮದ ಅಂಗನವಾಡಿ ಕೇಂದ್ರ, ಪಟ್ಟಣದ 15 ಅಂಗನವಾಡಿ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪಾಲಕರು ಭಾಗವಹಿಸಿದ್ದರು.
ಕೆಪಿಎಲ್ 4ಎಚ್ ಎಸ್ ಆರ್ ಫೋಟೊ1:
ಹನುಮಸಾಗರದ ಬಸವ ಮಂಟಪದಲ್ಲಿಬುಧವಾರ ಬಾಲ ಮೇಳವನ್ನು ಉದ್ಘಾಟಿಸಲಾಯಿತು.

