ನೇತ್ರದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

Contributed bysaleem.balabatti@timesofindia.com|Vijaya Karnataka

ಗದಗದ ವೀರೇಶ್ವರ ನಗರದ ನಿವಾಸಿ ಸರ್ವಮಂಗಳ ವೀರಲಿಂಗಯ್ಯನಮಠ ಅವರು ನಿಧನರಾಗಿದ್ದಾರೆ. ಅವರ ಕುಟುಂಬವು ಮೃತರ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಲಯನ್ಸ್‌ ಕ್ಲಬ್‌ ಹಾಗೂ ನೇತ್ರಾಲಯ ಆಸ್ಪತ್ರೆಯ ಸಹಕಾರದೊಂದಿಗೆ ನೇತ್ರದಾನ ಯಶಸ್ವಿಯಾಗಿದೆ. ಸಮಾಜದಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಈ ಕುಟುಂಬದ ನಿರ್ಧಾರ ಶ್ಲಾಘನೀಯವಾಗಿದೆ.

the eye donation of the family of sarvamangal veeralingayyana math who passed away on sunday

ನೇತ್ರದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

ವಿಕ ಸುದ್ದಿಲೋಕ ಗದಗ

ಇಲ್ಲಿನ ವೀರೇಶ್ವರ ನಗರದ ನಿವಾಸಿ ಸರ್ವಮಂಗಳ ವೀರಲಿಂಗಯ್ಯನಮಠ (78) ಮಂಗಳವಾರ ನಿಧನರಾಗಿದ್ದು, ಅವರ ಕುಟುಂಬಸ್ಥರು ಮೃತರ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂಸಾರ್ಥಕತೆ ಮೆರೆದಿದ್ದಾರೆ.

ಗದಗ-ಬೆಟಗೇರಿ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳ ಮಾರ್ಗದರ್ಶನ ಹಾಗೂ ಹುಬ್ಬಳ್ಳಿಯ ನೇತ್ರಾಲಯ ಆಸ್ಪತ್ರೆಯ ಸಹಕಾರದೊಂದಿಗೆ ನೇತ್ರದಾನ ಪ್ರಕ್ರಿಯೆಯು ಯಶಸ್ವಿಯಾಗಿ ನಡೆಯಿತು. ಸಮಾಜದಲ್ಲಿನೇತ್ರದಾನದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಈ ಕುರಿತು ಮಾತನಾಡಿದ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ರಕ್ತದಾನ, ನೇತ್ರದಾನ ಹಾಗೂ ದೇಹದಾನದ ಮೂಲಕ ಸಾರ್ವಜನಿಕರು ಇತರರಿಗೆ ನೆರವಾಗಿ ಮಾದರಿಯಾಗಬೇಕೆಂಬ ನಮ್ಮ ಕ್ಲಬ್ ನ ಆಶಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ವೀರಲಿಂಗಯ್ಯನಮಠ ಕುಟುಂಬದ ಈ ನಿರ್ಧಾರ ಶ್ಲಾಘನೀಯ ಎಂದರು.

ನೇತ್ರ ಸ್ವೀಕಾರದ ಸಂದರ್ಭದಲ್ಲಿಕ್ಲಬ್ ನ ಅಧ್ಯಕ್ಷ ರಾಜು ವೇರ್ಣೆಕರ, ಕೋಶಾಧ್ಯಕ್ಷ ರೇಣುಕಪ್ರಸಾದ ಹಿರೇಮಠ, ಪ್ರಮುಖರಾದ ರಮೇಶ ಶಿಗ್ಲಿ, ರಾಹುಲ್ ಅರಳಿ, ವೀರೇಶ ಪಟ್ಟಣಶೆಟ್ಟಿ, ರತನ್ ದೇಸಾಯಿ, ಅಶ್ವಥ್ ಸುಲಾಖೆ, ಮಂಜುನಾಥ ವೀರಲಿಂಗಯ್ಯನಮಠ ಹಾಗೂ ಮೃತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಫೋಟೊ: 4 ಸಲೀಮ 5: ಸರ್ವಮಂಗಳ ವೀರಲಿಂಗಯ್ಯನಮಠ