ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಎಸ್ . ವಿನಯ್ ಸಲಹೆ
ವಿಕ ಸುದ್ದಿಲೋಕ ಗುಂಡ್ಲುಪೇಟೆ
ಭವಿಷ್ಯಕ್ಕಾಗಿ ಸನ್ನದ್ಧರಾಗಲು ತಾಲೂಕಿನ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಾಂಶುಪಾಲ ಎಸ್ . ವಿನಯ್ ಸಲಹೆ ನೀಡಿದರು.
ಕೌಶಲಾಭಿವೃದ್ಧಿ ಸಲುವಾಗಿ 2007 ರಲ್ಲಿಪಟ್ಟಣದಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಪ್ರಾರಂಭವಾಗಿದೆ. ಅಚ್ಚುಗಳ ತಯಾರಿಕೆ(ಟೂಲ್ ಆ್ಯಂಡ್ ಡೈಮೇಕಿಂಗ್ )ಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದ್ದ ಸಂಸ್ಥೆಯಲ್ಲಿಪ್ರಸ್ತುತ ಕೃತಕ ಬುದ್ಧಿಮತ್ತೆ ಕಾಲಕ್ಕೆ ಅನುಗುಣವಾಗಿ ತರಬೇತಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.
‘‘ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಡಿಮೆ ಪ್ರವೇಶ ಶುಲ್ಕವನ್ನು ಕಂತುಗಳಾಗಿ ಪಾವತಿಸುವ ಅವಕಾಶದೊಂದಿಗೆ ನಮ್ಮ ಕೇಂದ್ರದಲ್ಲಿತರಬೇತಿ ನೀಡಲಾಗುತ್ತಿದೆ. ನಾಲ್ಕು ವರ್ಷ ಅವಧಿಗೆ ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ , ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ , ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ , ಮೂರು ಅವಧಿಗೆ ಡಿಟಿಡಿಎಂ, ಡಿಇಇಇ ಮತ್ತು ಡಿಎಂಸಿಎಚ್ ಅನ್ನು ಪಾಶ್ರ್ವ ಪ್ರವೇಶಾತಿ ಮೂಲಕ ನೀಡಲಾಗುತ್ತಿದೆ. ಒಟ್ಟು 190 ಮಂದಿ ಕೋರ್ಸ್ ಗಳ ಅನುಕೂಲ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಟೂಲ್ ರೂಂ ಮಿಷನಿಷ್ ್ಟ, ಬೇಸಿಕ್ ಎಲೆಕ್ಟ್ರಿಕಲ್ , ಸಿಎನ್ ಸಿ ಪೋ›ಗ್ರಾಮಿಂಗ್ , ಬೇಸಿಕ್ ಕಮ್ಯುನಿಕೇಷನ್ ಸ್ಕಿಲ್ , ಕ್ಯಾಡ್ , ಬೇಸಿಕ್ ಕಂಪ್ಯೂಟರ್ , ಸಿಎನ್ ಸಿ ಟರ್ನಿಂಗ್ ಮತ್ತು ಮಿಲ್ಲಿಂಗ್ ಹೀಗೆ ಅಲ್ಪಾವಧಿ, ಸರಕಾರಿ ಪ್ರಾಯೋಜಿತ ಕೋರ್ಸ್ ಗಳು ಲಭ್ಯ ಇವೆ. ಇಂಟರ್ನ್ ಶಿಫ್ ಆಧಾರದಲ್ಲಿಕೈಗಾರಿಕೆ ತರಬೇತಿ ಕೋರ್ಸ್ ಗಳು ನಮ್ಮಲ್ಲಿಲಭ್ಯವಿವೆ,’’ ಎಂದು ಮಾಹಿತಿ ನೀಡಿದರು.
‘‘ನಮ್ಮ ಕೇಂದ್ರದಲ್ಲಿಈಗಾಗಲೇ ತರಬೇತಿ ಪಡೆದ 850 ಮಂದಿ ಪ್ರತಿಷ್ಠಿತ ಕಂಪನಿಗಳಲ್ಲಿಕೆಲಸ ನಿರ್ವಹಿಸುತ್ತಿದ್ದಾರೆ. 100 ಕ್ಕೂ ಹೆಚ್ಚು ಮಂದಿ ಸ್ವಂತ ಉದ್ಯಮ ಸ್ಥಾಪನೆ ಮಾಡಿದ್ದಾರೆ. ವಿದ್ಯಾರ್ಥಿ ನಿಲಯದ ಸೌಲಭ್ಯ ಇದೆ. ಖಾಸಗೀ ಡಿಪ್ಲೊಮಾ ಕಾಲೇಜುಗಳಿಗೂ ಉತ್ತಮ ಗುಣಮಟ್ಟದ ಕಲಿಕೋಪಕರಣ ಮತ್ತು ನುರಿತ ಬೋಧಕರು ನಮ್ಮಲ್ಲಿಇದ್ದಾರೆ. ಕನ್ನಡದಲ್ಲೇ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗುತ್ತದೆ,’’ ಎಂದು ತಿಳಿಸಿದರು.
ಸ್ವಯಂ ಉದ್ಯೋಗಕ್ಕೆ ಅವಕಾಶ: ‘‘ಸಿಸಿ ಕ್ಯಾಮೆರಾ ಅಳವಡಿಕೆ, ಫೈರ್ ಸೇಫ್ಟಿ, ಎಲೆಕ್ಟ್ರಿಷಿಯನ್ ಆಗಲು ಬೇಕಾದ ಕೌಶಲ ಕಲಿಸುವ ಅವಕಾಶ ಮಾಡಲಾಗಿದೆ. ಆದ್ದರಿಂದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಯೋಜನವನ್ನು ಸ್ಥಳೀಯ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು,’’ ಎಂದು ಪತ್ರಿಕಾಗೋಷ್ಠಿಯಲ್ಲಿಮನವಿ ಮಾಡಿದರು. ತರಬೇತುದಾರರಾದ ಅಕ್ಷಯ್ , ಶಿವಪ್ರಸಾದ್ , ಕೃಪಾಲಿನಿ, ರಾಜಶೇಖರ್ ಹಾಜರಿದ್ದರು.
ಸಿಎಚ್ ಎನ್ 13ಜಿಪಿಟಿ1
ಗುಂಡ್ಲುಪೇಟೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲ ಎಸ್ .ವಿನಯ್ ಮಾತನಾಡಿದರು.

