ವಿಕ ಸುದ್ದಿಲೋಕ ಮಳವಳ್ಳಿ
ಒತ್ತಡದ ಜೀವನದ ನಡುವೆ ಹುಟ್ಟೂರು ಮತ್ತು ಹೆತ್ತವರನ್ನೇ ದೂರವಿಡುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಅಕ್ಷರ ಕಲಿಸಿದ ಗುರುಗಳನ್ನು ನೆನಪು ಮಾಡಿಕೊಳ್ಳುವ ಜತೆಗೆ ಗೌರವ ಭಾವದಿಂದ ನಡೆದುಕೊಳ್ಳುವ ಹಿರಿಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಶಿವಮೂರ್ತಿ ತಿಳಿಸಿದರು.
ಹಲಗೂರು ಸಮೀಪದ ಡಿ.ಹಲಸಹಳ್ಳಿ ಗೇಟ್ ಬಳಿ ಇರುವ ಶ್ರೀ ಬಸವೇಶ್ವರ ಪ್ರೌಢಶಾಲೆ ಅವರಣದಲ್ಲಿಹಳೆಯ ವಿದ್ಯಾರ್ಥಿಗಳ ಸ್ನೇಹ ಸಂಗಮ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಸಿ.ರಾಮಲಿಂಗಯ್ಯ ಮಾತನಾಡಿ, ‘‘ಮನುಷÜ್ಯ ಬದುಕಿನಲ್ಲಿಗುರು ಮತ್ತು ಗುರಿ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಗುರು-ಹಿರಿಯರ ಮಾತು ಕೇಳಿದರೆ ಜೀವನದಲ್ಲಿಒಳ್ಳೆಯದೇ ಆಗುತ್ತದೆ. ಎಲ್ಲರೂ ಸರಕಾರಿ ನೌಕರರೇ ಆಗಬೇಕೆಂಬ ನಿಯಮವಿಲ್ಲ. ಕೊನೆಯ ಸಾಲಿನಲ್ಲಿಕುಳಿತು ಕಲಿತವರು ಆಡಳಿತ ಚುಕ್ಕಾಣಿ ಹಿಡಿದು ಉತ್ತಮ ಸಮಾಜ ಸೇವೆ ಮಾಡುತ್ತಿದ್ದಾರೆ. ಜೀವನದಲ್ಲಿಆಸಕ್ತಿ ವಹಿಸಿ ಶ್ರದ್ಧೆಯಿಂದ ದುಡಿಯುವನೋ, ಅವನು ಸಂಪೂರ್ಣ ಪರಿಪೂರ್ಣ ತೃಪ್ತಿಯನ್ನು ಹೊಂದುತ್ತಾನೆ. ಹಾಗಾಗಿ ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿಸಮಾಜದ ಏಳಿಗೆಗಾಗಿ ಶ್ರಮಿಸಿ,’’ ಎಂದು ಕರೆ ನೀಡಿದರು.
ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ವಿವಿಧ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಹಿರಿಯ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು.
‘‘ಕಳೆದ ಹೋದ ನೆನಪುಗಳು ಮತ್ತೆ ಬರುವುದಿಲ್ಲ. ಅವತ್ತು ಶಿಕ್ಷಕರು ಹೇಳಿದ ಬುದ್ದಿ ಮಾತುಗಳು ಇಂದಿಗೂ ಹಸಿರಾಗಿವೆ. ಅಂತಹ ಮೌಲ್ಯ ಶಿಕ್ಷಣ ಕಣ್ಮರೆಯಾಗುತ್ತಿರುವುದು ದುಃಖದ ವಿಷಯ. ಕುಸ್ತಿಯಲ್ಲಿರಾಜ್ಯಮಟ್ಟದ ಸ್ಪರ್ಧೆಯಲ್ಲಿಭಾಗವಹಿಸುವ ಅವಕಾಶವನ್ನು ಶಾಲೆ ನೀಡಿದ್ದು ಅವಿಸ್ಮರಣೀಯ,’’ ಎಂದು ಹಳೆಯ ವಿದ್ಯಾರ್ಥಿನಿ ಸಂಗೀತಾ ಸಂತಸ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಶಿವಮೂರ್ತಿ, ಋುಷÜಭೇಂದ್ರಪ್ರಸಾದ್ , ಎಂ.ಮನೋಹರ್ , ಎಲ್ .ಶಿವನಂಜಮಣಿ, ಪ್ರಸನ್ನ, ರಾಜಶೇಖರ್ , ಜಯರಾಮು, ಮೋಕ್ಷ ಮಹದೇವ ಪ್ರಸಾದ್ , ಉಮಾ ಶಂಕರ್ , ಮುರುಡೇಶ್ , ಮಹದೇವಸ್ವಾಮಿ, ಕುಮಾರಿ ಸೇರಿದಂತೆ 2006-2008 ಮತ್ತು 2008-2011 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಿತ್ರ-11-1
ಗುರುವಂದನಾ ಕಾರ್ಯಕ್ರಮ.

