ಸರಕಾರಿ ಶಾಲೆ ಉಳಿಯುವ ಕೆಲಸವಾಗಲಿ

Contributed bykavyasiddu2210@gmail.com|Vijaya Karnataka

A large protest rally was held in Hassan to save government schools. Women activist Roopa Hassan criticized the KPS Magnet scheme, calling it a plan to deny education to children of farmers and laborers. State Treasurer Subhash Bettadakoppa highlighted the scheme's aim to close over 40,000 government schools.

struggle to save government schools hosan protest against the kps magnet plan

ಮಹಿಳಾ ಹೋರಾಟಗಾರ್ತಿ ಹಾಗೂ ಲೇಖಕಿ ರೂಪ ಹಾಸನ ಹೇಳಿಕೆ

ವಿಕ ಸುದ್ದಿಲೋಕ ಹಾಸನ

ಹೆಣ್ಣು ಮಕ್ಕಳನ್ನು ಬಡ ರೈತರ ಕಾರ್ಮಿಕರ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸುವ ಯೋಜನೆಗೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಾಗಿದೆ ಎಂದು ಮಹಿಳಾ ಹೋರಾಟಗಾರ್ತಿ ಹಾಗೂ ಲೇಖಕಿ ರೂಪ ಹಾಸನ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿಮುಚ್ಚಲೊರಟಿರುವ ಹಾಸನದ ಆಲೂರು, ಗೊರೂರು ಹಾಗೂ ನಿಟ್ಟೂರು ಸುತ್ತಮುತ್ತಲಿನ ಸರಕಾರಿ ಶಾಲೆಗಳನ್ನು ಉಳಿಸಲು ಎಐಡಿಎಸ್ ಒ ಸಂಘಟನೆ ವತಿಯಿಂದ ವಿದ್ಯಾರ್ಥಿ ಹಾಗೂ ಪೋಷಕರ ಬೃಹತ್ ಪ್ರತಿಭಟನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

‘‘ಒಂದು ಸರಕಾರಿ ಶಾಲೆ ಎಂದರೆ ಸಾಂಸ್ಕೃತ ತಾಣ, ಆ ಶಾಲೆಯನ್ನು ನೀವು ಕೊಲ್ಲುತ್ತೀರಾ? ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೇವಲ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಮಾತ್ರ, ಸಚಿವರಾಗಿದ್ದಾರೆಯೇ,’’ಎಂದು ಪ್ರಶ್ನಿಸಿದರು.

ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ,‘‘ರಾಜ್ಯದಾದ್ಯಂತ 40ಸಾವಿರ ಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ವಿಲೀನಗೊಳಿಸಿ ಬಡ, ರೈತ, ಕೂಲಿ, ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುವ ಹುನ್ನಾರ ಈ ಯೋಜನೆಯದಾಗಿದೆ,’’ಎಂದರು.

‘‘ಕಳೆದ 15 ವರ್ಷಗಳಲ್ಲಿರಾಜ್ಯ ಸರಕಾರದ ವರದಿಯ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇನ್ನೊಂದೆಡೆ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸದೆ, ಪೋಷಕರ ಮೇಲೆ ಆರೋಪ ಮಾಡಲಾಗುತ್ತಿದೆ. ರಾಜ್ಯದಲ್ಲಿ60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ, 21 ಸಾವಿರಕ್ಕೂ ಹೆಚ್ಚು ಶಾಲೆ ಕಟ್ಟಡಗಳು ದುರಸ್ತಿಗಾಗಿ ಕಾಯುತ್ತಿವೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲದೆ ಸಾವಿರಾರು ಸರಕಾರಿ ಶಾಲೆಗಳು ನಶಿಸುತ್ತಿವೆ. ಇಂತಹ ಸಂದರ್ಭದಲ್ಲಿಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಸರಕಾರ ಹೀಗೆ ಬಣ್ಣ ಬಣ್ಣದ ಹೆಸರಿನಿಂದ ಗ್ರಾಮೀಣ ಭಾಗದ ಶಾಲೆಗಳಿಗೆ ಬೀಗ ಹಾಕಿ ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ,’’ ಎಂದರು.

ಉಗ್ರ ನರಸಿಂಹೇಗೌಡ ಮಾತನಾಡಿ,‘‘ಸರಕಾರಿ ಶಾಲೆಗಳು ಗ್ರಾಮೀಣ ಭಾಗದಲ್ಲಿಸರಕಾರಕ್ಕೂ ಮತ್ತು ಹಳ್ಳಿಯ ಜನರಿಗೂ ಸಂಪರ್ಕ-ಸಂಬಂಧ ಕಲ್ಪಿಸುತ್ತದೆ. ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿಇಂತಹ ಸಂಬಂಧವನ್ನು ಕಡಿಯುವ ಕೆಟ್ಟ ಕೆಲಸವನ್ನು ಸರಕಾರ ಮಾಡುತ್ತಿದೆ,’’ಎಂದು ಆರೋಪಿಸಿದರು.

ರಾಜ್ಯ ರೈತ ಸಂಘಟನೆಯ ಜಿಲ್ಲಾಅಧ್ಯಕ್ಷÜ ಕಣಗಾಲ್ ಮೂರ್ತಿ, ಸಂವಿಧಾನ ಓದು ಬಳಗ ಸಂಚಾಲಕ ರಾಜು ಗೊರೂರು, ಜೆಸಿಟಿಯು ರಾಜ್ಯ ಸಂಚಾಲಕರು ಕೆ.ವಿ.ಭಟ್ , ದಲಿತ ಸಂಘರ್ಷ ಸಮಿತಿಯ ಎಂ.ಬಿ.ಪುಟ್ಟಸ್ವಾಮಿ, ಕಾರ್ಮಿಕ ಮುಖಂಡ ಹನುಮೇಶ್ , ಮಹಿಳಾ ಮುಖಂಡ ನಿರ್ಮಲಾ.ಎಚ್ .ಎಲ್ , ದೇವರಾಜಪುರ ಗ್ರಾಮದ ಸರಕಾರಿ ಶಾಲೆ ಉಳಿಸಿ ಸಮಿತಿಯ ಅಧ್ಯಕ್ಷ ಮಲ್ಲೇಶ್ ಮಾತನಾಡಿದರು.

ಎಐಟಿಎಸ್ ಒ ಜಿಲ್ಲಾಧ್ಯಕ್ಷೆ ಚೈತ್ರಾ, ಉಪಾಧ್ಯಕ್ಷÜ ಅಭಿಷೇಕ್ , ಕಾರ್ಯದರ್ಶಿ ಸುಷ್ಮಾ, ಪದಾಧಿಕಾರಿಗಳಾದ ಪುರುಷೋತ್ತಮ್ , ಶ್ರೇಷ್ಠ, ಧನಂಜಯ್ ಧನರಾಜ್ , ತಿಲಕ್ , ಧನುಶ್ರೀ ಇದ್ದರು.

ಪೋಟೋ ಶೀರ್ಷಿಕೆ: ಹಾಸನದ ಕಸಾಪ ಸಭಾಂಗಣದಲ್ಲಿಸರಕಾರಿ ಶಾಲೆ ಉಳಿವಿಗಾಗಿ ಎಐಡಿಎಸ್ ಒ ಸಂಘಟನೆ ವತಿಯಿಂದ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಉಗ್ರ ನರಸಿಂಹೇಗೌಡ ಮಾತನಾಡಿದರು.