ಕೋಮುಗಲಭೆ ಸೃಷ್ಟಿಸುವ ಹುನ್ನಾರ: ಬಿಜೆಪಿ

Contributed bynasirmnkodagu@gmail.com|Vijaya Karnataka

A BJP leader in Madikeri has demanded the deportation of an accused individual. The accusation involves a plot to incite communal violence. This follows an alleged attack on a Hindu organization activist in Napoklu. The accused had previously signed a bond under the security act. The leader claims this bond has been violated.

napoklu attack case virajpet bjp demands accused should be immediately deported from kodagu

ಮಡಿಕೇರಿ:

ನಾಪೋಕ್ಲುವಿನಲ್ಲಿಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆನಡೆಸಿರುವ ಆರೋಪಿಯನ್ನು ಗಡಿಪಾರು ಮಾಡಬೇಕೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘‘ಹಿಂದೂ ಧರ್ಮದ ಜಾಗೃತಿಗಾಗಿ ಶಾಂತಿಯುತವಾಗಿ ಜಿಲ್ಲಾವ್ಯಾಪಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಈ ನಡುವೆ ಬಲ್ಲಮಾವಟಿಯಲ್ಲಿಕಾರ್ಯಕ್ರಮ ನಡೆಸಬೇಕಾದ ಹೊತ್ತಿನಲ್ಲೇ ಅಶಾಂತಿ ಹಾಗೂ ಕೋಮುಗಲಭೆ ಸೃಷ್ಟಿಸುವ ಹುನ್ನಾರವನ್ನು ಕೆಲವರು ಮಾಡಿದ್ದಾರೆ,’’ ಎಂದು ಆರೋಪಿಸಿದ್ದಾರೆ.

‘‘ಹಿಂದೂ ಕಾರ್ಯಕರ್ತನ ಮೇಲೆ ನಡೆದಿರುವ ಹಲ್ಲೆಖಂಡನೀಯ. ಹಲ್ಲೆಪ್ರಕರಣದ ಓರ್ವ ಆರೋಪಿ ಇತ್ತೀಚೆಗೆ ಭದ್ರತಾ ಕಾಯ್ದೆ 107 ಅಡಿ ತಾಲೂಕು ದಂಡಾಧಿಕಾರಿಗಳ ಸಮಕ್ಷಮದಲ್ಲಿಬಾಂಡ್ ಗೆ ಸಹಿ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಿದೆ. ಇದೀಗ ಬಾಂಡ್ ನಿಯಮ ಉಲ್ಲಂಘನೆ ಮಾಡಿರುವ ಘಟನೆ ನಡೆದಿದ್ದು, ಆರೋಪಿಯನ್ನು ತಕ್ಷಣ ಕೊಡಗು ಜಿಲ್ಲೆಯಿಂದ ಗಡಿಪಾರು ಮಾಡಬೇಕು,’’ ಎಂದು ಒತ್ತಾಯಿಸಿದ್ದಾರೆ.

ಫೋಟೊ: ಒಆಏ28ಓ- ಖಂಏಇTಊ ಆಇಗಿಂಋಂಊ (ರಾಕೇಶ್ ದೇವಯ್ಯ)